ಹೊಸದಿಲ್ಲಿ: ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟ) ಚೌಕಟ್ಟಿನಲ್ಲಿ ಪ್ರಮುಖ ಬದಲಾವಣೆಗಳಿಗೆ ಶನಿವಾರ ರಾಜಸ್ಥಾನದ ಜೈಸಲ್ಲೇರ್‌ನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 55ನೇ ಜಿಎಸ್‌ಟಿ ಮಂಡಳಿ ಸಭೆಯು ಹಸಿರು ನಿಶಾನೆ ತೋರಿಸಿದೆ. ಸಭೆಯ ನಿರ್ಧಾರಗಳು ತೆರಿಗೆ ಪ್ರಕ್ರಿಯೆಗಳನ್ನು ಸರಳೀಕರಿಸುವ, ಕೆಲವು ಕ್ಷೇತ್ರಗಳಲ್ಲಿ ಪರಿಹಾರವನ್ನು ಒದಗಿಸುವ ಮತ್ತು ಉದಯೋನ್ಮುಖ ಅಗತ್ಯಗಳಿಗೆ ತೆರಿಗೆ ನೀತಿಗಳನ್ನು ಅನುಗುಣವಾಗಿಸುವ ಗುರಿಯನ್ನು ಹೊಂದಿವೆ. ಜಿಎಸ್‌ಟಿ
ಹಲವಾರು ಸರಕುಗಳು ಮತ್ತು ಸೇವೆಗಳ ಮೇಲಿನ ಜಿಎಸ್ಟಿಯನ್ನು ಇಳಿಸಲಾಗಿದ್ದು,ಬಳಕೆದಾರರಿಗೆ ಆರ್ಥಿಕ ಪರಿಹಾರವನ್ನು ಒದಗಿಸಲಿವೆ.
- ಸಾರವರ್ಧಿತ ಅಕ್ಕಿ: ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ಪೂರೈಸಲಾಗುವ ಸಾರವರ್ಧಿತ ಅಕ್ಕಿಯ ಮೇಲಿನ ಜಿಎಸ್ಟಿ ಶೇ. 5ಕ್ಕೆ ಇಳಿಸಲಾಗಿದೆ.
- ಜೀನ್ ಥೆರಪಿ: ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಕೈಗೆಟಕುವಂತಾಗಲು ಜೀನ್ ಥೆರಪಿಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
- ಉಚಿತ ವಿತರಣೆಗಾಗಿ ಆಹಾರ ಧಾನ್ಯಗಳು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸರಕಾರದ ಯೋಜನೆಗಳಡಿ ಪೂರೈಸಲಾಗುವ ಆಹಾರ ಧಾನ್ಯಗಳಿಗೆ ಶೇ.5ರ ರಿಯಾಯಿತಿ ಜಿಎಸ್ಟಿ ದರವನ್ನು ನಿಗದಿಗೊಳಿಸಲಾಗಿದೆ.
- ದೀರ್ಘವ್ಯಾಪ್ತಿಯ ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ (ಎಲ್‌ಎಸ್‌ಆರ್‌ಎಂ)ವ್ಯವಸ್ಥೆ: ಎಲ್‌ಎಸ್‌ಆರ್‌ಎಂ ತಯಾರಿಕೆಯಲ್ಲಿ ಬಳಕೆಯಾಗುವ ಸಿಸ್ಟಮ್ಗಳು,ಸಬ್-ಸಿಸ್ಟಮ್ಗಳು ಮತ್ತು ಉಪಕರಣಗಳಿಗೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್ಪಿ)ಯಿಂದ ವಿನಾಯಿತಿ ನೀಡಲಾಗಿದೆ.
- ಐಎಇಎಗಾಗಿ ತಪಾಸಣಾ ಉಪಕರಣ: ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ)ಯಿಂದ ತಪಾಸಣೆಗಾಗಿ ಉಪಕರಣಗಳು ಮತ್ತು ಉಪಭೋಗ್ಯ ಮಾದರಿಗಳ ಆಮದುಗಳಿಗೆ ಐಜಿಎಸ್ಬಿಯಿಂದ ವಿನಾಯಿತಿ ನೀಡಲಾಗಿದೆ.
- ಕಾಳುಮೆಣಸು ಮತ್ತು ಒಣದ್ರಾಕ್ಷಿ (ನೇರ ಮಾರಾಟ) ಕೃಷಿಕರು ನೇರವಾಗಿ ಮಾರಾಟ ಮಾಡುವ ಕಾಳುಮೆಣಸು ಮತ್ತು ಒಣದ್ರಾಕ್ಷಿಗೆ ಜಿಎಸ್ಟಿ ಅನ್ವಯಿಸುವುದಿಲ್ಲ ಎಂದು ಜಿಎಸ್ಟಿ ಮಂಡಳಿಯು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಚುನಾವಣಾ ನಿಯಮಗಳ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂದು ಸಿಪಿಐ (ಎಂ) ಪೊಲಿಟ್ ಬ್ಯೂರೋ ಒತ್ತಾಯ
ಯಾವುದು ದುಬಾರಿಯಾಗಲಿವೆ? ಕೆಲವು ಸರಕುಗಳು ಮತ್ತು ಸೇವೆಗಳ ಮೇಲಿನ ಜಿಎಸ್ಟಿ ದರಗಳನ್ನು ಹೆಚ್ಚಿಸಲಾಗಿದ್ದು,ಗ್ರಾಹಕರಿಗೆ ಹೊರೆ ಹೆಚ್ಚಲಿದೆ.
- ಹಳೆಯ ಮತ್ತು ಬಳಸಿದ: ವಾಹನಗಳು(ವಿದ್ಯುತ್ ಚಾಲಿತ ಸೇರಿದಂತೆ): ಕೆಲವು ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳನ್ನು ಹೊರತುಪಡಿಸಿ ಹಳೆಯ ಮತ್ತು ಬಳಸಿದ ವಾಹನಗಳ ಮಾರಾಟದ ಮೇಲಿನ ಜಿಎಸ್ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆ ವಾಹನಗಳ ಮರುಮಾರಾಟ ಮಾರುಕಟ್ಟೆಯ ಮೇಲೆ ಪರಿಣಾಮವನ್ನು ಬೀರಲಿದೆ.
- ರೆಡಿ-ಟು-ಈಟ್ ಪಾಪಾರ್ನ್: ಪ್ಯಾಕ್ ಮಾಡದೇ ಬಿಡಿಯಾಗಿ ಮಾರಾಟವಾಗುವ ನಮ್ಮಿನ್ ಸ್ವರೂಪದ ಉಪ್ಪು-ಖಾರ ಮಿಶ್ರಿತ ಪಾಪಾರ್ನ್ ಶೇ.5 ಜಿಎಸ್ಟಿ ಮುಂದುವರಿಯಲಿದೆ.ಪ್ಯಾಕ್ ಮಾಡಿ ಲೇಬಲ್ ಅಂಟಿಸಿದ್ದರೆ ಈಗ ಶೇ.12 ಜಿಎಸ್ಟಿ ಮತ್ತು ಸಕ್ಕರೆ ಮಿಶ್ರಿತ ಪಾಪಾರ್ನ್ ಶೇ.18 ಜಿಎಸ್ಟಿ ವಿಧಿಸಲಾಗುವುದು.
- ಆಟೊಕ್ಕೇವ್ ಎರೇಟೆಡ್ ಕಾಂಕ್ರೀಟ್(ಎಸಿಸಿ) ಬ್ಲಾಕ್ಕಳು: ಶೇ.50ಕ್ಕೂ ಅಧಿಕ ಹಾರುಬೂದಿಯನ್ನು ಒಳಗೊಂಡಿರುವ ಎಸಿಸಿ ಬ್ಲಾಕ್ಕಳಿಗೆ ಇನ್ನು ಮುಂದೆ ಶೇ.12ರಷ್ಟು ಜಿಎಸ್ಟಿ ವಿಧಿಸಲಾಗುವುದು, ಇದು ನಿರ್ಮಾಣ ವೆಚ್ಚಗಳನ್ನು ಹೆಚ್ಚಿಸಲಿದೆ.
- ಕಾರ್ಪೊರೇಟ್ ಪ್ರಾಯೋಜಕತ್ವ ಸೇವೆಗಳು: ಇವುಗಳನ್ನು ಫಾರ್ವಡ್್ರ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ತರಲಾಗಿದ್ದು, ಕಾರ್ಪೊರೇಟ್ ಪ್ರಾಯೋಜಕರಿಗೆ ವೆಚ್ಚವನ್ನು ಹೆಚ್ಚಿಸಬಹುದು.
ಇತರ ನೀತಿ ಪರಿಷ್ಕರಣೆಗಳು
- ಅಸ್ತಿತ್ವದಲ್ಲಿರುವ ನೀತಿಗಳನ್ನು ಸ್ಪಷ್ಟಪಡಿಸಲು ಮತ್ತು ದೀರ್ಘಕಾಲದಿಂದ ಉಳಿದಿರುವ ಅಸ್ಪಷ್ಟತೆಗಳನ್ನು ನಿವಾರಿಸಲು ಹಲವಾರು ಪರಿಷ್ಕರಣೆಗಳನ್ನು ಜಿಎಸ್ಟಿ ಮಂಡಳಿಯು ಪ್ರಕಟಿಸಿದೆ.
- ವೋಚರ್ಗಳು: ವೋಚರ್ಗಳನ್ನು ಒಳಗೊಂಡ ವಹಿವಾಟುಗಳು ಸರಕುಗಳ ಮತ್ತು ಸೇವೆಗಳ ಪೂರೈಕೆಯಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ಅವುಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ.
- ದಂಡಶುಲ್ಕಗಳು: ಸಾಲದ ನಿಯಮಗಳನ್ನು ಪಾಲಿಸದ್ದಕ್ಕಾಗಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಂಗ್ರಹಿಸುವ ದಂಡಗಳಿಗೆ ಜಿಎಸ್ಟಿ ಅನ್ವಯಿಸುವುದಿಲ್ಲ ಇದು ಸಾಲಗಾರರಿಗೆ ನೆಮ್ಮದಿ ಒದಗಿಸಲಿದೆ. ಜಿಎಸ್‌ಟಿ
ಇದನ್ನೂ ನೋಡಿ : ವಿಎಚ್‌ಪಿ ಕಾರ್ಯಕ್ರಮದಲ್ಲಿ ಜಸ್ಟೀಸ್ ಭಾಗಿ | ಜಸ್ಟೀಸ್ ಯಾದವ್ ಮತ್ತು ವಿವಾದಾತ್ಮಕ ಹೇಳಿಕೆಗಳು Janashakthi Media