ಸಾಹಿತ್ಯ ಸಮ್ಮೇಳನ | ‘ಸಿಟಿ ರವಿ ಗೋ ಬ್ಯಾಕ್’ ಪ್ರತಿಭಟನೆ

ಮಂಡ್ಯ: ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿ ಟಿ ರವಿ ‘ನಿನಗೆ ಕುವೆಂಪು ನೆಲದಲ್ಲಿ ಜಾಗವಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವ ಯಾವ ನೈತಿಕತೆಯು ನಿನಗಿಲ್ಲ. ವಾಪಸ್ಸು ಹೋಗು ಕೇಡಿ ರವಿ  ಸಿಟಿ ರವಿಗೆ ದಿಕ್ಕಾರ’ ಎಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗುತ್ತಿರುವ ಮಂಡ್ಯದ ನೆಲದಲ್ಲಿ ಪ್ರಗತಿಪರ ಸಂಘಟನೆಗಳು ಬಸವಣ್ಣನ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಸಂವಿಧಾನಕ್ಕೆ ಗೌರವ ಕೊಡದ ಅಂಬೇಡ್ಕರ್ ಬಗ್ಗೆ ಕೀಳಾಗಿ ವರ್ತಿಸಿದ ಅಮಿತ್ ಶಾ ಬಗ್ಗೆನೂ ಪ್ರತಿಭಟನೆ ನಡೆಸಲಾಯಿತು. ಕೋಮುವಾದಿ ಮಹಿಳಾ ಪೀಡಕ ಬಿಜೆಪಿಯ ಸಿ ಟಿ ರವಿಯಂತವರು ಅಕ್ಷರ ಜಾತ್ರೆಗೆ ಆಗಮಿಸುವುದು ಅಕ್ಷರದ ಅವ್ವ ಸಾವಿತ್ರೆ ಬಾಯಿ ಪೂಲೆಯವರಿಗೂ ಅಪಮಾನ ಮಾಡಿದಂತೆ ಎಂದು ಪ್ರತಿಭಟನೆಕಾರರು ಆಕ್ರೋಶವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಟಿ ರವಿ ಬಂಧನ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಗೋ ಬ್ಯಾಕ್ ಸಿ.ಟಿ.ರವಿ ಎಂದು ಭಿತ್ತಿ ಪತ್ರ ಹಿಡಿದು ಸಮ್ಮೇಳನದ ಒಳಗಡೆಯಲ್ಲ ಪ್ರದರ್ಶನ ಮಾಡಲಾಯಿತು. ಸಿ ಟಿ ರವಿಯ ವಿಧಾನ ಪರಿಷತ್ ಸದಸತ್ವ ರದ್ದು ಪಡಿಸಲು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ. ದೇವಿ. ಸಿಪಿಎಮ್ ಜಿಲ್ಲಾ ಕಾರ್ಯದರ್ಶಿ. ಕೃಷ್ಣೇಗೌಡ. ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್ ಎಲ್ ಭರತ್ ರಾಜ್ . ವಕೀಲರಾದ ಲಕ್ಷ್ಮಣ ಚಿರನಹಳ್ಳಿ. ರಾಮಯ್ಯ ಜನವಾದಿ ಮಹಿಳಾ ಸಂಘಟನೆಯ ಡಿ.ಕೆ. ಲತಾ. ಸುಶೀಲಾ. ಮಂಜುಳಾ ಜನಶಕ್ತಿ ಸಂಘಟನೆಯ ಪೂರ್ಣಿಮ ಸಿದ್ದರಾಜ್ ಸಂತೋಶ್ ದಲಿತ ಸಂಘಟನೆಯ ಎಮ್ ವಿ ಕೃಷ. ಮುಂತಾದವರು ಭಾಗವಹಿಸಿದ್ದರು.

ಇದನ್ನೂ ನೋಡಿ : ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆಕ್ಷೇಪಾರ್ಹ ಪದಬಳಸಿದ ಸಿಟಿ ರವಿ Janashakthi Media

Donate Janashakthi Media

Leave a Reply

Your email address will not be published. Required fields are marked *