ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ ದಂಧೆ

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಯಾವುದು ನಕಲಿಯೋ ಯಾವುದೋ ಅಸಲಿಯೋ ಒಂದೂ ಗೊತ್ತಾಗುವುದಿಲ್ಲ. ಇನ್ಮುಂದೆ ಮದ್ಯಪ್ರಿಯರು ಬಾ‌ ಇಲ್ಲವೇ ವೈನ್‌ಶಾಪ್‌ಗಳಲ್ಲಿ ಮದ್ಯ ಖರೀದಿಸುವುದಕ್ಕೂ ಮುನ್ನ ಸ್ವಲ್ಪ ಯೋಚನೆ ಮಾಡುವುದು ಒಳ್ಳೆಯದು. ಯಾಕಂದರೆ, ಅಲ್ಲಿ ಕೊಡುವ ಮದ್ಯ ಅಸಲಿಯೋ ನಕಲಿಯೋ ಎಂಬುದೇ ಅನುಮಾನವಾಗಿದೆ. ಪ್ರತಿಷ್ಠಿತ

ಭಾನುವಾರದಂದು ಮಂಡ್ಯ ಜಿಲ್ಲೆಯ ಬಿಟಿ ಲಲಿತಾ ನಾಯಕ್ ಬಡಾವಣೆಯಲ್ಲಿ ಅಬಕಾರಿ ಇಲಾಖೆ ನಡೆಸಿದ ರೇಡ್‌ನಲ್ಲಿ ಬೃಹತ್ ನಕಲಿ ಲಿಕ್ಕರ್ ದಂಧೆ ಬಯಲಾಗಿದೆ. ಸಾಲು ಸಾಲಾಗಿ ಜೋಡಿಸಿಟ್ಟಿರುವ ಸ್ಪಿರಿಟ್ ತುಂಬಿರುವ ಕಾನ್‌ಗಳು, ಮತ್ತೊಂದೆಡೆ ದುಬಾರಿ ಮದ್ಯದ ಬಾಟೆಲ್‌ಗಳು ಪತ್ತೆಯಾಗಿವೆ. ಪ್ರತಿಷ್ಠಿತ

ಗ್ಯಾಂಗೊಂದು ಮನೆಯೊಂದನ್ನು ಬಾಡಿಗೆ ಪಡೆದು ‘ಕಾಮಧೇನು ಕಂಫರ್ಟ್’ ಅನ್ನೋ ಹೆಸರಲ್ಲಿ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ ದಂಧೆ ನಡೆಸುತ್ತಿತ್ತು. ಮನೆಯಲ್ಲೇ ಮದ್ಯದ ಸ್ಯಾಚೆಟ್, ಸ್ಟಿಕ್ಕರ್ ತಯಾರಿಸುವ ಯಂತ್ರ ಇಟ್ಟುಕೊಂಡಿದ್ದರು. ಕರ್ನಾಟಕ ಸರ್ಕಾರದ ಲಾಂಛನ, ಅಬಕಾರಿ ಇಲಾಖೆ ಚಿಹ್ನೆಯನ್ನೂ ಬಳಕೆ ಮಾಡುತ್ತಿದ್ದರು ಎಂದು ಅಬಕಾರಿ ಡಿವೈಎಸ್‌ಪಿ ಸೋಮಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರ ಕೊರತೆ; 22 ಲಕ್ಷ ವಿದ್ಯಾರ್ಥಿಗಳಿಗೆ 8,895 ಶಿಕ್ಷಕರು

590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ ಜಪ್ತಿ ಪಕ್ಕಾ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಬ್ಲ್ಯಾಕ್ ಆಯಂಡ್ ವೈಟ್, ಟೀಚರ್ಸ್ ಸ್ಕಾಚ್, ಇಂಪೀರಿಯಲ್ ಬ್ಲೂ, ಹಂಡ್ರೆಡ್ ಪೈಪರ್ಸ್, ಎಂಸಿ ವಿಸ್ಕಿ, ಸಿಲ್ವರ್ ಕಪ್ ಸ್ಯಾಚೆಟ್ ಪತ್ತೆಯಾಗಿವೆ.

ದಾಳಿ ವೇಳೆ 35 ಲೀಟರ್ ನಕಲಿ ಮದ್ಯದ ಸ್ಯಾಚೆಟ್‌ಗಳು ಸಿಕ್ಕಿವೆ. 590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ, ಸ್ಟಿಕ್ಕರ್ ತಯಾರಿಸುವ ಯಂತ್ರ, ಕಚ್ಚಾ ಸಾಮಗ್ರಿಯನ್ನ ಸೀಜ್ ಮಾಡಲಾಗಿದೆ. ಒಬ್ಬ ಆರೋಪಿ ಸೆರೆಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದಾರೆ. ಮದ್ಯಪ್ರಿಯರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಈ ದಂಧೆ ಹಿಂದೆ ದೊಡ್ಡ ಜಾಲವೇ ಇದೆ. ಖದೀಮರ ಗ್ಯಾಂಗ್ ನಕಲಿ ಮದ್ಯವನ್ನು ಯಾವ್ಯಾವ ಬಾರ್ ಆಯಂಡ್ ರೆಸ್ಟೋರೆಂಟ್‌ಗಳಿಗೆ ಪೂರೈಕೆ ಮಾಡುತ್ತಿತ್ತು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

ಇದನ್ನೂ ನೋಡಿ: ಕನ್ನಡ ಸಾಹಿತ್ಯ ಸಮ್ಮೇಳನ |ಮಂಡ್ಯದ ಪ್ರೀತಿಯ ನಾಟಿ ಕೋಳಿ ಸಾರುಮುದ್ದೆ ನೀಡಬೇಕು – ಎಂ.ಜಿ.ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *