ಸೆಷನ್ಸ್ ನ್ಯಾಯಾಲಯ: ಲಂಚಕ್ಕೆ ಕೈಹಿಡಿದ ಪಿಡಿಓ ಒಬ್ಬರಿಗೆ 3 ವರ್ಷಗಳ ಜೈಲು ಶಿಕ್ಷೆ

ಮಂಗಳೂರು: 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ದಾಖಲೆ ನೀಡಲು ಲಂಚಕ್ಕೆ ಕೈಹಿಡಿದ ಪಿಡಿಓ ಒಬ್ಬರಿಗೆ 3 ವರ್ಷಗಳ ಜೈಲು ಶಿಕ್ಷೆ ನೀಡಿ ಎಂದು ಆದೇಶಿಸಿದೆ.

ಕಡಬ ತಾಲ್ಲೂಕಿನ ಐತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮ್ ಸಿಂಗ್ ನಾಯ್ಕ 9/11ರ ದಾಖಲೆ ನೀಡಲು 79,000 ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪದ ಮೇಲೆ 2019ರ ಜೂನ್ 3ರಂದು
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು.

ಇದನ್ನೂ ಓದಿ : ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ

ತನಿಖಾಧಿಕಾರಿಯಾಗಿದ್ದು ಪೊಲೀಸ್ ಇನ್‌ಸ್ಪೆಕ್ಟರ್ ಶಾಮಸುಂದರ ಎಚ್.ಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಆರೋಪಿಗೆ ಮೂರು ವರ್ಷಗಳ ಸಾದಾ ಸಜೆ ಹಾಗೂ 750 ಸಾವಿರ ದಂಡ ವಿಧಿಸಿದ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲ ರವೀಂದ್ರ ಮುಸ್ಲಿಪಾಡಿ ವಾದಿಸಿದ್ದರು.

ಇದನ್ನೂ ನೋಡಿ : ಹಾಡು | ‘‌ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media

Donate Janashakthi Media

Leave a Reply

Your email address will not be published. Required fields are marked *