ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಪ್ರಕರಣದಲ್ಲಿ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ರೇಣುಕಾಸ್ವಾಮಿ
ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಅರ್ಜಿಗಳಿಗೆ ಸಂಬಂಧಿಸಿದ ಬಹುನಿರೀಕ್ಷಿತ ಅದೇಶವನ್ನು ಇಂದು ಪ್ರಕಟಿಸಿದೆ.
ಇದನ್ನೂ ಓದಿ : ಬಳ್ಳಾರಿ | ದೂರು ನೀಡಲು ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾನ್ಸ್ಟೇಬಲ್
ದರ್ಶನ್ ಹಾಗೂ ಇತರ ಏಳು ಆರೋಪಿಗಳು ಬಿಗ್ ರಿಲೀಫ್ ನೀಡಿದೆ. ಇತರ ಆರೋಪಿಗಳಾದ ನಾಗರಾಜು, ಲಕ್ಷ್ಮಣ್, ಅನುಕುಮಾರ್, ಜಗದೀಶ್, ಪ್ರದೋಷ್ ರಾವ್ಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಇನ್ನು ದರ್ಶನ್ಗೆ ಬೆನ್ನುಹುರಿ ಸಮಸ್ಯೆ ಕುರಿತಾಗಿ ಚಿಕಿತ್ಸೆ ಪ್ರಕ್ರಿಯೆ (ಸರ್ಜರಿ) ಮುಗಿಯುವರೆಗೆ ರಿಲೀಫ್ ನೀಡಿದೆ. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಅಲ್ಲದೇ ಮಧ್ಯಂತರ ಜಾಮೀನು ಸಹ ಇತ್ತೀಚೆಗಷ್ಟೇ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು. ಇದೀಗ ನಿಯಮಿತ ಜಾಮೀನು ಮಂಜೂರು ಆಗಿದ್ದು, ಹೀಗಾಗಿ ಮಧ್ಯಂತರ ಜಾಮೀನು ನಿಯಮಿತ ಜಾಮೀನಿನಲ್ಲೇ ವಿಲೀನ ವಾಗುತ್ತದೆ.
ಇದನ್ನೂ ನೋಡಿ : ವಿಎಚ್ಪಿ ಕಾರ್ಯಕ್ರಮದಲ್ಲಿ ಜಸ್ಟೀಸ್ ಭಾಗಿ | ಜಸ್ಟೀಸ್ ಯಾದವ್ ಮತ್ತು ವಿವಾದಾತ್ಮಕ ಹೇಳಿಕೆಗಳು Janashakthi Media