ನವದೆಹಲಿ: ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಷಯವಾಗಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ವಿಪಕ್ಷಗಳ ಸಂಸದರು ಇಂದು ಸಂಸತ್ ಆವರಣದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಮೋದಿ- ಅದಾನಿ ಭಾಯಿ ಭಾಯಿ ಎಂದು ಬರೆದಿದ್ದ ಕಪ್ಪು ಜೋಳಿಗೆ ಹಿಡಿದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್, ಡಿಎಂಕೆ, ಜೆಎಂಎಂ, ಎಡಪಕ್ಷಗಳ ಸಂಸದರು ಮಕರ ದ್ವಾರದ ಮೆಟ್ಟಿಲುಗಳ ಮುಂದೆ ಪ್ರತಿಭಟನೆ ನಡೆಸಿದರು. ಒಂದು ಬದಿಯಲ್ಲಿ ಮೋದಿ ಮತ್ತು ಅದಾನಿ ಅವರ ವ್ಯಂಗ್ಯ ಚಿತ್ರಗಳು ಮತ್ತು ಬ್ಯಾಗ್ನ ಹಿಂಭಾಗದಲ್ಲಿ ‘ಮೋದಿ ಅದಾನಿ ಭಾಯಿ ಭಾಯ್’ ಎಂದು ಬರೆದ ಕಪ್ಪು ‘ಜೋಳಿಗೆಗಳನ್ನು ಹಿಡಿದಿದ್ದ ಸಂಸದರು, ಮೋದಿ ಮತ್ತು ಅದಾನಿ ನಡುವಿನ ಆರೋಪದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದರು.
#WATCH | Delhi: Opposition stages a protest outside the Parliament against the government.
Congress leader and Lok Sabha LoP Rahul Gandhi is also present. pic.twitter.com/FdwYAbItUR
— ANI (@ANI) December 11, 2024
ವಿಪಕ್ಷಗಳ ಸಂಸದರ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಮುಖವಾಡಗಳನ್ನು ಧರಿಸಿರುವ ಕಾಂಗ್ರೆಸ್ ಸದಸ್ಯರೊಂದಿಗೆ ಅಣಕು ‘ಸಂದರ್ಶನ’ ನಡೆಸಿದರು.
ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಅದಾನಿ ವಿಚಾರವಾಗಿ ಪ್ರತಿಪಕ್ಷಗಳ ಪ್ರತಿಭಟನೆಗಳು ಸಂಸತ್ತಿನ ಆವರಣದಲ್ಲಿ ನಡೆಯುತ್ತಿವೆ. ಅಮೇರಿಕಾ ನ್ಯಾಯಾಲಯದಲ್ಲಿ ಅದಾನಿ ಮತ್ತು ಇತರ ಕಂಪನಿಯ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಮಾಡಿದ ನಂತರ ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸುತ್ತಿವೆ.
ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ : ಸಮಸ್ಯೆ ಸವಾಲುಗಳು – ಬಿ.ಎಲ್ ಶಂಕರ್ Janashakthi Media