ಸೀತಾರಾಮ್ ಯೆಚೂರಿ
ಮೋದಿಯ ಅಲೆ ಸುನಾಮಿಯಾಗಿ ದೇಶವನ್ನು ಅಪ್ಪಳಿಸುತ್ತದೆ ಎಂಬ ಮಾಧ್ಯಮಗಳ ಅಬ್ಬರ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಈಗ ಯಾವುದಾದರೂ ಅಲೆ ಇದ್ದರೆ ಅದು ತಮ್ಮ ಮೇಲೆ ಹೇರಿರುವ ಸಂಕಟಗಳಿಂದ ಪರಿಹಾರ ಕೇಳುತ್ತಿರುವ ಜನತೆಯ ಕೂಗಿನ ಅಲೆ ಮಾತ್ರವೇ. ಇದರಿಂದ ಹತಾಶಗೊಂಡು ಕೋಮುವಾದಿ ಧ್ರುವೀಕರಣದ ತೀವ್ರ ಪ್ರಯತ್ನಕ್ಕೆ ಇಳಿದಿರುವ ಆರೆಸ್ಸೆಸ್/ಬಿಜೆಪಿ, ಇದುವರೆಗೆ ಪರಮ ಪವಿತ್ರ ಎಂದು ಬಗೆದಿದ್ದ ಮೂಲಭೂತ ಮಾನವ ಹಕ್ಕುಗಳನ್ನು ಚುನಾವಣಾ ಲಾಭದ ಬಲಿಪೀಠದ ಮೇಲಿಟ್ಟಿವೆ. ಅತ್ತ ಬಂಗಾಲದಲ್ಲಿ ಹೊಸ ರೀತಿಯ ಮೋದಿ-ಮಮತಾ ಮ್ಯಾಚ್ಫಿಕ್ಸಿಂಗ್ ಮೂಲಕ ವೋಟ್ ಬ್ಯಾಂಕ್ ರಾಜಕೀಯದ ಅತ್ಯಂತ ಹೊಲಸು ಸ್ವರೂಪ ಪ್ರಕಟಗೊಳ್ಳುತ್ತಿದೆ.
ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಈ ಒಂಭತ್ತು ಹಂತಗಳ ಸುದೀರ್ಘವಾದ ಸಾರ್ವತ್ರಿಕ ಚುನಾವಣೆಗಳ ಎಂಟನೇ ಹಂತ ಪೂರ್ಣಗೊಂಡಿದೆ, ಇನ್ನು ಕೊನೆಯ ಹಂತವಷ್ಟೇ ಉಳಿದಿದೆ. ಆದರೆ ಇದು ಪಶ್ಚಿಮ ಬಂಗಾಳ, ಉತ್ತರಪ್ರದೇಶ ಮುಂತಾದ ಕೆಲವು ರಾಜ್ಯಗಳಲ್ಲಿ ಒಂದು ನಿಣರ್ಾಯಕ ಹಂತ. ಒಟ್ಟಾರೆಯಾಗಿ ಹೇಳುವುದಾದರೆ, ಮತದಾನದ ವೇಳೆ ವ್ಯಾಪಕ ಹಿಂಸಾಚಾರ, ಭಯೋತ್ಪಾದನೆ ನಡೆಯದಿದ್ದರೂ, ಕೆಲವು ಗಮನ ಸೆಳೆಯುವ ಅಪವಾದಗಳೂ ಇವೆ. ಪಶ್ಚಿಮ ಬಂಗಾಲದಲ್ಲಿನ ಮತದಾನದ ಮೂರನೇ ಹಂತದಲ್ಲಿ ಆಳುವ ಪಕ್ಷ ತೃಣಮೂಲ ಕಾಂಗ್ರೆಸ್ ವ್ಯಾಪಕ ಪ್ರಮಾಣದಲ್ಲಿ ಬೆದರಿಕೆ, ಭಯೋತ್ಪಾದನೆ, ಮತಗಟ್ಟೆ ವಶ ನಡೆಸಿದ ವರದಿಗಳು ಬಂದಿವೆ. ಚುನಾವಣಾ ಆಯೋಗದ ವ್ಯವಸ್ಥೆಗೆ ತನ್ನ ಬೇಹುಗಾರಿಕೆ ಕ್ಯಾಮರಾಗಳ ಮೂಲಕ ಇಂತಹ ಮತಗಟ್ಟೆ ಅಪಹರಣಗಳನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದರೂ, ಹೇಗೆ ತೃಣಮೂಲ ಕಾಂಗ್ರೆಸ್ ಗೂಂಡಾಗಳು ಮತದಾನ ಮಾಡಲು ಹೋದ ವ್ಯಕ್ತಿಗಳಿಂದ ಬಲವಂತದಿಂದ ಮತದಾನ ಮಾಡಿಸಿದರು ಎಂಬುದನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಇವು ಸಾಮಾಜಿಕ ಮಾಧ್ಯಮ ಜಾಲಗಳಲ್ಲಿ ಹರಡಿವೆ.
ಮೇ7ರ ಮತದಾನದಲ್ಲೂ ಮತ್ತೆ ವ್ಯಾಪಕ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ವರದಿಯಾಗಿದೆ. ಸಿಪಿಐ(ಎಂ) ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಪತ್ರವನ್ನು ಸಲ್ಲಿಸಿದೆ, ಸಾಕಷ್ಟು ಸಿದ್ಧತೆಗಳೊಂದಿಗೆ ಮರುಮತದಾನ ಮುಂತಾದ ಅಗತ್ಯ ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿ ಆಗ್ರಹಿಸಲಾಗಿದೆ.
ಚುನಾವಣಾ ಆಯೋಗ ಕ್ರಿಯೆಗಿಳಿಯುವುದು ಅನಿವಾರ್ಯ. ಮೂರನೇ ಹಂತದಲ್ಲಿನ ದೂರುಗಳ ಮೇಲೆ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದಿರುವುದು ತೃಣಮೂಲ ಕಾಂಗ್ರೆಸಿಗೆ ಈ ರೀತಿ ನಾಲ್ಕನೇ ಹಂತದಲ್ಲೂ ಪ್ರಜಾಪ್ರಭುತ್ವವನ್ನು ವಿಕೃತಗೊಳಿಸುವ ಅವ್ಯವಹಾರಗಳನ್ನು ನಡೆಸಲು ಪ್ರೋತ್ಸಾಹ ನೀಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈಗ ನೀಡಿರುವ ದೂರುಗಳನ್ನೂ, ವಿಡಿಯೋ ಕ್ಯಾಮರಾಗಳನ್ನು ಬಲವಂತದಿಂದ ಮುಚ್ಚುವುದು, ಅಥವ ಅವನ್ನು ಮತದಾರರು ಕಾಣದಂತೆ ಬೇರೆಡೆಗೆ ತಿರುಗಿಸುವುದು ಮುಂತಾದ ಅವ್ಯವಹಾರಗಳ ಬಗ್ಗೆ ದೂರುಗಳನ್ನು ಪರಿಶೀಲಿಸದಿದ್ದರೆ 42ರಲ್ಲಿ 17 ಕ್ಷೇತ್ರಗಳಿಗೆ ಮತದಾನ ನಡೆಯಬೇಕಾದ ಕೊನೆಯ ಹಂತದಲ್ಲಿ ಮತ್ತೆ ವ್ಯಾಪಕ ಪ್ರಮಾಣದಲ್ಲಿ ಅವ್ಯಹಾರಗಳು ನಡೆಯುತ್ತವೆ. ಈ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು, ಪ್ರಜಾಸತ್ತಾತ್ಮಕ ಚುನಾವಣಾ ಆಚರಣೆಗಳನ್ನು ವಿರೂಪಗೊಳಿಸಲು ಬಿಡಲಾಗದು. ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು ಮಾತ್ರವಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಮತ್ತಿತರ ರಾಜಕೀಯ ಪಕ್ಷಗಳೂ ಮಾಡಿರುವ ತೃಣಮೂಲ ಕಾಂಗ್ರೆಸ್ ಬೆದರಿಕೆ, ಭಯೋತ್ಪಾದನೆ, ತೋಳ್ಬಲ ಮತ್ತು ಹಣಬಲವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದೆಯೆಂಬ ಆಪಾದನೆಗಳನ್ನು ಚುನಾವಣಾ ಆಯೋಗ ಸೂಕ್ತವಾಗಿ ಪರಿಶೀಲಿಸುವ, ಮತ್ತು ಅದರಿಂದಾಗಿ ಆಗಿರುವ ವಿಕೃತಿಗಳನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಕೋಮುವಾದಿ ಧ್ರುವೀಕರಣದ ಪಣ
ಒಂದೆಡೆ ಈ ವಿಷಯಗಳನ್ನು ಸೂಕ್ತವಾಗಿ ಪರಿಶೀಲಿಸಬೇಕಾಗಿದೆ. ಇನ್ನೊಂದೆಡೆಯಲ್ಲಿ, ಈ ವೇಳೆಗೆ ಮೋದಿಯ ಅಲೆ ಸುನಾಮಿಯಾಗಿ ದೇಶವನ್ನು ಅಪ್ಪಳಿಸುತ್ತದೆ ಎಂಬ ಮಾಧ್ಯಮಗಳ ಅಬ್ಬರ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ ಎಂಬುದು ಸ್ಪಷ್ಟ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ದೇಶದ ಪ್ರತಿಯೊಂದು ಬಸ್ ನಿಲ್ದಾಣದಲ್ಲಿ, ಜಾಹೀರಾತು ಫಲಕಗಳಲ್ಲಿ ಭವಿಷ್ಯದ ಪ್ರಧಾನ ಮಂತ್ರಿಯೆಂಬ ಜಾಹೀರಾತುಗಳು ರಾರಾಜಿಸುತ್ತಿದ್ದು, ಈಗ ಅದೇ ಅಧಿಕಾರಸ್ಥರ-ವಿರೋಧಿಯಾಗಿ ಕೆಲಸ ಮಾಡುವ ಅಂಶವಾಗಿ ಮೋದಿಯ ವಿರುದ್ಧವೇ ಕೆಲಸ ಮಾಡಲಾರಂಭಿಸಿದಂತೆ ಕಾಣುತ್ತದೆ. ದೇಶದ ಎಲ್ಲೆಡೆಗಳಿಂದ ವರದಿಗಾರರು ತಮ್ಮ ಮಾಧ್ಯಮಗಳಿಗೆ ಸಲ್ಲಿಸುತ್ತಿರುವ ವರದಿಗಳು ತೋರಿಸುವ ಬುಡಮಟ್ಟದ ವಾಸ್ತವತೆ, ಈ ಮೊದಲು ಬಿಜೆಪಿ ಭಾರೀ ಗೆಲುವು ಸಾಧಿಸಲಿದೆ ಎಂದು ಪ್ರತಿಯೊಂದು ಅಭಿಪ್ರಾಯ ಸಂಗ್ರಹವೂ ಭವಿಷ್ಯ ನುಡಿಯುವುದಾಗಿ ಇವೇ ಮಾಧ್ಯಮಗಳು ಬಿಂಬಿಸಿದ್ದಕ್ಕಿಂತ ಬಹಳ ದೂರದಲ್ಲಿದೆ. ನಿದರ್ಿಷ್ಟವಾಗಿ ಆರೆಸ್ಸೆಸ್/ಬಿಜೆಪಿಗೆ ಪ್ರಧಾನ ಹಿಂದಿ ಭಾಷಿಕ ಪ್ರದೇಶದಿಂದ ಬರುತ್ತಿರುವ ವರದಿಗಳು ತಳಮಳ ಉಂಟು ಮಾಡುತ್ತಿವೆ. ಅವುಗಳ ಸಾರಾಂಶವನ್ನು ಒಂದು ಪದಗುಚ್ಛದಲ್ಲಿ ಹೇಳುವುದಾದರೆ, “ಮೋದಿಯ ಹೊರತಾಗಿಯೂ, ಸ್ಥಳೀಯ ಅಂಶಗಳೇ ಇಲ್ಲಿ ಈಗಲೂ ಕೀಲಿಗೈ”. ಬಿಹಾರದಿಂದ ವರದಿಗಳು ಸ್ಪಧರ್ೆಯಿರುವುದು `ಮತ್ತೊಮ್ಮೆ ಬಿಜೆಪಿ ‘ರಥ’ವನ್ನು ನಿಲ್ಲಿಸುತ್ತಿರುವ ಲಾಲು’ ಮತ್ತು `ಅಭಿವೃದ್ಧಿಯ ಫಲಗಳನ್ನು ಪಡೆಯುವ ನಿತೀಶ್ ನಡುವೆ’ ಎಂಬ ಬಗ್ಗೆ ಇದ್ದರೆ, ಉತ್ತರಪ್ರದೇಶದಿಂದ ಬರುವ ವರದಿಗಳಲ್ಲಿ `ಮುಲಾಯಂ ಮತ್ತು ಮಾಯಾವತಿ ನಡುವೆ ಜಾತಿ ಧ್ರುವೀಕರಣ’ದ ಬಗ್ಗೆಯೇ ಇವೆ.
ಇಲ್ಲಿಯ ಜನಗಳ ಬದುಕುಗಳ ಮೇಲೆ ಪ್ರಭಾವ ಬೀರುವ ಸ್ಥಳೀಯ ಅಂಶಗಳ ಹಿಡಿತವನ್ನು ಮುರಿಯಲು ಆರೆಸ್ಸೆಸ್/ಬಿಜೆಪಿ ಹತಾಶ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ, ನಿರೀಕ್ಷೆಯಂತೆ, ಕೋಮುವಾದಿ ಧ್ರುವೀಕರಣದ ಪಣ ಒಡ್ಡಲು ಮುಂದಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ‘ಸಾಹೇಬ’ರ ಬಲಗೈ ಬಂಟ ತನ್ನ ಕಿಚ್ಚು ಹಚ್ಚುವ ಕೋಮುವಾದಿ ಭಾಷಣಗಳನ್ನು ಮುಂದುವರೆಸುತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥರ ಕ್ಷೇತ್ರವಾದ ಅಜಂಗಡ್ ‘ಭಯೋತ್ಪಾದಕರ ನೆಲೆ’ ಎಂಬ ಆಪಾದನೆ ಎಸೆದರು. ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಕ್ರೋಡೀಕರಿಸುವ ವೋಟ್ ಬ್ಯಾಂಕ್ ರಾಜಕಾರಣದ ಅತ್ಯಂತ ಹೊಲಸು ಸ್ವರೂಪ ತೀವ್ರಗೊಳ್ಳುತ್ತಿದೆ. ಮೇ5 ರಂದು ಅಯೋಧ್ಯೆಯ ವಿವಾದಿತ ಪ್ರದೇಶ ಇರುವ ಫೈಝಾಬಾದ್ ಕ್ಷೇತ್ರದಲ್ಲಿ ಹಿನ್ನೆಲೆಯಲ್ಲಿ ಶ್ರೀರಾಮನ ಬೃಹತ್ ಚಿತ್ರಗಳಿದ್ದ ವೇದಿಕೆಯಿಂದ ಭಾಷಣ ಮಾಡಿ, ನರೇಂದ್ರ ಮೋದಿ ವಿವಾದಿತ ಸ್ಥಳದಲ್ಲೇ ರಾಮದೇವಸ್ಥಾನ ಕಟ್ಟಲು ಬಿಜೆಪಿ ಬದ್ಧವಾಗಿದೆ ಎಂಬುದರ ಸಂಕೇತ ನೀಡಿದರು, ಆಮೂಲಕ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಿದರು. ಇದಕ್ಕೆ ಮೊದಲು ಮೇ 4ರಂದು ಬಂಗಾಲದ ಅಸನ್ಸೋಲ್ನಲ್ಲಿ ಮಾತಾಡುತ್ತ ತಾನು ಪ್ರಧಾನ ಮಂತ್ರಿಯಾದ ಕೂಡಲೇ ಬಾಂಗ್ಲಾದೇಶಿಗಳು ಈ ದೇಶದಿಂದ ಹೊರದಬ್ಬಿಸಿಕೊಳ್ಳಲು ತಮ್ಮ ಪೆಟ್ಟಿಗೆ ಕಟ್ಟಿಕೊಂಡು ಸಿದ್ಧರಾಗಬೇಕು ಎಂದು ಅವರು ಅಬ್ಬರಿಸಿದ್ದರು. ಹಿಂದೂಗಳಿಗೆ ಸ್ವಾಗತ, ಮುಸ್ಲಿಮರು ತಮ್ಮ ಗುರಿ ಎಂಬ ಸ್ಪಷ್ಟೀಕರಣವನ್ನೂ ಮೀರಿದ ಭಾವನೆ ಇತ್ತು. ಇದು ನೈಜ ಭಾರತೀಯ ಬಂಗಾಲೀ ಮುಸ್ಲಿಮರ ವಿರುದ್ಧ ಕೋಮುವಾದಿ ದ್ವೇಷವನ್ನು ಉದ್ರೇಕಿಸುವ ಸಾಕಷ್ಟು ಸ್ಪಷ್ಟವಾದ ಸಂಕೇತವಾಗಿತ್ತು.
ಇತ್ತೀಚೆಗೆ ಅಸ್ಸಾಂನ ಬೋಡೋಲ್ಯಾಂಡ್ ಪ್ರದೇಶದಲ್ಲಿ ಇದುವರೆಗೆ 31 ಜನರನ್ನು ಸಾವಿಗೀಡು ಮಾಡಿದ ಮಾರಣ ಹೋಮಕ್ಕೆ ಈ ರೀತಿಯಲ್ಲಿ ಕೋಮುವಾದಿ ಭಾವೋದ್ರೇಕವನ್ನು ಬಡಿದೆಬ್ಬಿಸಿರುವುದೂ ಒಂದು ಕಾರಣ ಎಂಬುದನ್ನು ಸೂಚಿಸುವ ಸಾಕಷ್ಟು ಸಂಕೇತಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈಗಾಗಲೇ ಬಾಂಗ್ಲಾದೇಶದಲ್ಲಿ ಮೋದಿಯ ಹೇಳಿಕೆಗಳನ್ನು ಬಾಂಗ್ಲಾದೇಶದ ಜಾತ್ಯಾತೀತ ಶಕ್ತಿಗಳು ವ್ಯಾಪಕವಾಗಿ ಟೀಕಿಸಿದ್ದಾರೆ, ಇನ್ನೊಂದೆಡೆಯಲ್ಲಿ ಮೂಲಭೂತವಾದಿ ಶಕ್ತಿಗಳು ಅಲ್ಲಿಯ ಹಿಂದೂಗಳ ಮೇಲೆ ಗುರಿಯಿಟ್ಟಿದ್ದಾರೆ ಎಂದು ಸೂಚಿಸುವ ವರದಿಗಳೂ ಬರುತ್ತಿವೆ.
ಇದು, ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಪರಸ್ಪರ ಪೋಷಿಸಿಕೊಂಡು ವೃದ್ಧಿಸುತ್ತಿವೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದೆ. ನಿಜಕ್ಕೂ, ಇದುವರೆಗೆ ಪರಮ ಪವಿತ್ರ ಎಂದು ಬಗೆದಿದ್ದ ಮೂಲಭೂತ ಮಾನವ ಹಕ್ಕುಗಳನ್ನು ಆರೆಸ್ಸೆಸ್/ಬಿಜೆಪಿ ಚುನಾವಣಾ ಲಾಭದ ಬಲಿಪೀಠದ ಮೇಲಿಟ್ಟಿವೆ.
ಬಂಗಾಲದಲ್ಲಿ ಮ್ಯಾಚ್ಫಕ್ಸಿಂಗ್ನ ಹೊಸ ಆವೃತ್ತಿ
ಇದೇ ಧಾಟಿಯಲ್ಲಿ ಹೊಸ ಐಪಿಎಲ್ ಕ್ರಿಕೆಟ್ ಸೀಝನ್ನಲ್ಲಿ ಮ್ಯಾಚ್ ಫಿಕ್ಸಿಂಗ್ನ ಹೊಸದೊಂದು ಆವೃತ್ತಿಯನ್ನು ಬಂಗಾಲದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಕಾಣಬಹುದು. ಇದೀಗ ತಂತಮ್ಮ ವೋಟ್ ಬ್ಯಾಂಕುಗಳನ್ನು ಕ್ರೋಡೀಕರಿಸುವ, ಆಮೂಲಕ ಕೋಮು ವಿಭಜನೆಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಸಮರ. ಮೋದಿ ಮತ್ತು ಮಮತಾ ನಡುವೆ ವಾಕ್ಸಮರ ರೂಪುಗೊಂಡಿರುವುದು ಕಟ್ಟಾ ಹಿಂದುತ್ವ ಬೆಂಬಲವನ್ನು ಬಿಜೆಪಿ ಕ್ರೋಡೀಕರಿಸಲು ಮತ್ತು ಅಲ್ಪಸಂಖ್ಯಾತರು ತೃಣಮೂಲ ಕಾಂಗ್ರೆಸಿನಿಂದ ಭ್ರಮನಿರಸನಗೊಂಡು ಎಡರಂಗದ ಕಡೆಗೆ ಮರಳದಂತೆ ತಡೆದು ತೃಣಮೂಲ ಕಾಂಗ್ರೆಸಿನ ಬೆಂಬಲಿಗರಾಗಿಯೇ ಉಳಿಯುವಂತೆ ಮಾಡಲು.
ಇನ್ನೊಂದೆಡೆಯಲ್ಲಿ ಚುನಾವಣೆಗಳ ನಂತರ ಬಹುಮತದ ಸಂಖ್ಯೆಯನ್ನು ತಲುಪಲು ತನಗೆ ಖಂಡಿತಾ ಮಿತ್ರರು ಬೇಕು ಎಂದು ಬಿಜೆಪಿ ಅರಿತಿದೆ. ಆದ್ದರಿಂದ ಚುನಾವಣೆಗಳ ನಂತರ ಒಂದು ಬಿಜೆಪಿ ಸರಕಾರಕ್ಕೆ ಬೆಂಬಲಕ್ಕೆ ಪ್ರತಿಯಾಗಿ ಒಂದು ಸುಂದರ ‘ಬಂಗಾಲ ಪ್ಯಾಕೇಜ್ ಕೊಡಿಸುವ ದಾಟಿಯಲ್ಲಿ ಬಿಜೆಪಿ ಅಧ್ಯಕ್ಷರು ಮಾತನಾಡಿದ್ದಾರೆ. ಹೀಗಿದೆ ಬಿಜೆಪಿಯ ಹುಟ್ಟುಗುಣವಾದ ಇಬ್ಬಂದಿತನ.
ತೃಣಮೂಲ ಕಾಂಗ್ರೆಸ್ ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡರೊಂದಿಗೂ ವ್ಯವಹಾರ ನಡೆಸಿದೆ, ಅದರ ಮುಖ್ಯಸ್ಥರು ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಇಬ್ಬರ ಅಡಿಯಲ್ಲೂ ರೈಲ್ವೇ ಮಂತ್ರಿಯಾಗಿದ್ದುದಲ್ಲದೆ, ಆ ಪಕ್ಷ ಆರೆಸ್ಸೆಸ್ನೊಂದಿಗೆ ಸದಾ ನಿಕಟ ಸಂಪರ್ಕ ಇಟ್ಟುಕೊಂಡಿದೆ. 2003ರಲ್ಲಿ, ಗುಜರಾತ್ ಹತ್ಯಾಕಾಂಡದ ಕೆಂಡಗಳು ಇನ್ನೂ ಬಿಸಿಯಾಗಿದ್ದಾಗಲೇ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅಲ್ಲಿ ಆಕೆಯನ್ನು ‘ಬಂಗಾಲದ ದುಗರ್ೆ ಎಂದು ಹಾಡಿ ಹೊಗಳಲಾಗಿತ್ತು. ಅದಕ್ಕೆ ಪ್ರತಿಯಾಗಿ ಆರೆಸ್ಸೆಸ್ ‘ನಿಜವಾದ ದೇಶಪ್ರೇಮಿಗಳು’ ಎಂದು ಆ ಮುಖ್ಯಸ್ಥೆ ಹೊಗಳಿದ್ದರು, “ನೀವು ದೇಶವನ್ನು ಪ್ರೀತಿಸುತ್ತೀರಿ ಎಂದು ನನಗೆ ಗೊತ್ತು, ಕಮ್ಯುನಿಸ್ಟರ ವಿರುದ್ಧ ಹೋರಾಟದಲ್ಲಿ ನಾವು ನಿಮ್ಮ ಜತೆಗಿದ್ದೇವೆ” ಎಂದು ಮುಂದುವರೆದು ಆಕೆ ಆರೆಸ್ಸೆಸ್ನವರಿಗೆ ಹೇಳಿದ್ದರು(ದಿ ಟೆಲಿಗ್ರಾಫ್, ಸಪ್ಟಂಬರ್ 15, 2003). ಈ ರೀತಿ, ಅವರ ಮ್ಯಾಚ್ ಫಿಕ್ಸಿಂಗ್ನ ಪ್ರಸಕ್ತ ಸ್ವರೂಪ ವೋಟ್ ಬ್ಯಾಂಕ್ ರಾಜಕೀಯದ ಅತ್ಯಂತ ಹೊಲಸು ಸ್ವರೂಪ.
ಚುನಾವಣಾ ಆಯೋಗದ ಕರ್ತವ್ಯ
ಈ ಎಲ್ಲದರ ನಡುವೆ ನಮ್ಮ ಜನತೆಯನ್ನು ಅತಿ ಹೆಚ್ಚಾಗಿ ಬಾಧಿಸುವ ಮೂಲ ಪ್ರಶ್ನೆಯನ್ನು ಮರೆತೇ ಬಿಡಲಾಗಿದೆ. ನಮಗೆ ಪರಿಹಾರ ಬೇಕು ಎಂಬುದು ಎಲ್ಲೆಡೆ ಜನಸಾಮಾನ್ಯರ ಕೂಗು-ಹಣದುಬ್ಬರದಿಂದಾಗಿ ಹೆಚ್ಚುತ್ತಿರುವ ಹೊರೆಗಳಿಂದ ಪರಿಹಾರ, ನಿರುದ್ಯೋಗದಿಂದ ಪರಿಹಾರ, ದೈನಂದಿನ ಅಸ್ತಿತ್ವದ ಹೆಚ್ಚುತ್ತಿರುವ ಸಂಕಟಗಳಿಂದ ಪರಿಹಾರ. ಇಂತಹ ಪರಿಹಾರ ಒಂದು ಪಯರ್ಾಯವಾದ ಧೋರಣೆಗಳಿಂದ, ಈಗ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಪ್ರತಿಪಾದಿಸುತ್ತಿರುವ ಧೋರಣೆಗಳಿಗೆ ಪಯರ್ಾಯವಾದ ಧೋರಣೆಗಳಿಂದ ಮಾತ್ರ ಸಾಧ್ಯ. ನಿಜಸಂಗತಿಯೆಂದರೆ, ಈ ಚುನಾವಣೆಗಳಲ್ಲಿ ಯಾವುದಾದರೂ ಅಲೆ ಇದ್ದರೆ, ಅದು ಪರಿಹಾರ ಕೇಳುತ್ತಿರುವ ಈ ಜನತೆಯ ಅಲೆಯೇ.
ಈ ಜನತಾ ಅಲೆಯ ಗೆಲವು, ಈ ಚುನಾವಣೆಗಳನ್ನು ಎಷ್ಟರ ಮಟ್ಟಿಗೆ ಮುಕ್ತವಾಗಿ ಮತ್ತು ನ್ಯಾಯವಾಗಿ ನಡೆಸಲಾಗುತ್ತದೆ, ಜನರು ಯಾವುದೇ ಹೊರಗಣ ಒತ್ತಡಗಳು, ಆಮಿಷಗಳಿಲ್ಲದೆ ಮತದಾನ ಮಾಡಲು ಬಿಡಲಾಗುತ್ತದೆ ಎಂಬುದರ ಮೇಲೆಯೇ ನಿಂತಿದೆ. ಆದ್ದರಿಂದ ಚುನಾವಣಾ ಆಯೋಗ ಮೇ 12ರಂದು ನಡೆಯುವ ಕೊನೆಯ ಹಂತದ ಮತದಾನದಲ್ಲಿ ದೃಢವಾಗಿ ವತರ್ಿಸಲೇ ಬೇಕಾಗಿದೆ.