ಸಿಂಡಿಕೇಟ್ ಸಭೆಯೊಳಗೇ ನುಗ್ಗಿ ಎಚ್ಚರಿಸಿದ ವಿದ್ಯಾಥರ್ಿಗಳು

ಹನುಮಂತು


ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನಲಾಗುವ ಬೆಂಗಳೂರು ವಿ.ವಿ. ಇಂದು ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ವಿ.ವಿ.ಯಲ್ಲಿ ಓದುವ ವಿದ್ಯಾಥರ್ಿಗಳ ಪಾಡು ಹೇಳತೀರದಾಗಿದೆ.  ರೈತ, ಕಾಮರ್ಿಕ, ಕೂಲಿಕಾರರ ಮಕ್ಕಳು ಬೆಂಗಳೂರಿನ ಬಡ, ಅವಕಾಶ ವಂಚಿತ ಜನವಿಭಾಗಗಳ ಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ  ವಂತಿಗೆ ಹಣ, ಶುಲ್ಕ ನೀಡಲಾಗದೆ ಸಕರ್ಾರಿ ಕಾಲೇಜುಗಳ ಮೇಲೆ ನಂಬಿಕೆ ಇಟ್ಟು ಕಾಲೇಜುಗಳಿಗೆ ಸೇರುತ್ತಾರೆ. ಆದರೆ ಬೆಂಗಳೂರು ವಿ.ವಿ.ಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲವಾಗಿದೆ.ಇದು ಸಾಲದು ಎಂದು ಪರೀಕ್ಷ ಅಕ್ರಮಗಳು, ಮಾಕ್ರ್ಸಕಾಡರ್್ ತಿದ್ದುವ ಹಗರಣಗಳು ಎಗ್ಗಿಲ್ಲದೆ ನಡೆದಿವೆ.
1
ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನಲಾಗುವ ಬೆಂಗಳೂರು ವಿ.ವಿ. ಇಂದು ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ವಿ.ವಿ.ಯಲ್ಲಿ ಓದುವ ವಿದ್ಯಾಥರ್ಿಗಳ ಪಾಡು ಹೇಳತೀರದಾಗಿದೆ.  ರೈತ, ಕಾಮರ್ಿಕ, ಕೂಲಿಕಾರರ ಮಕ್ಕಳು ಬೆಂಗಳೂರಿನ ಬಡ, ಅವಕಾಶ ವಂಚಿತ ಜನವಿಭಾಗಗಳ ಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಲಕ್ಷಾಂತರ  ವಂತಿಗೆ ಹಣ, ಶುಲ್ಕ ನೀಡಲಾಗದೆ ಸಕರ್ಾರಿ ಕಾಲೇಜುಗಳ ಮೇಲೆ ನಂಬಿಕೆ ಇಟ್ಟು ಕಾಲೇಜುಗಳಿಗೆ ಸೇರುತ್ತಾರೆ. ಆದರೆ ಬೆಂಗಳೂರು ವಿ.ವಿ.ಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲವಾಗಿದೆ.
ವಿದ್ಯಾಥರ್ಿಗಳಿಗೆ ಕಾಲೇಜುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಯಲಗಳ ಸಮಸ್ಯೆ, ಮೈದಾನ ಹಾಗೂ ಬಹುಮುಖ್ಯವಾಗಿ ಗ್ರಂಥಾಲಯ ಇಲ್ಲದ ಸಮಸ್ಯೆ. ಕೆಲವೊಂದು ಕಾಲೇಜುಗಳಲ್ಲಿ ಗ್ರಂಥಾಲಯಗಳು ಇದ್ದರೂ ಕೂಡ ಅದರಲ್ಲಿ ವಿಷಯಕ್ಕೆ ತಕ್ಕಂತೆ ಪುಸ್ತಕಗಳು ಇಲ್ಲದ ಸಮಸ್ಯೆ.
ಬೆಂ.ವಿ.ವಿ. ವ್ಯಾಪ್ತಿಯಲ್ಲಿ ಬರುವ ಶೇ.50 ಕಾಲೇಜುಗಳು ಪಾಳಿ ಪದ್ದತಿಯಲ್ಲಿ ನಡೆಯುತ್ತಿವೆ.  ವಿದ್ಯಾಥರ್ಿಗಳನ್ನು ವೈಜ್ಞಾನಿಕವಾದ ಸಂಶೋಧನೆಯಲ್ಲಿ ತೊಡಗಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರಲ್ಲಿ ವಿ.ವಿ.ಗಳ ಪಾತ್ರ ಬಹುದೊಡ್ಡದು.  ಆದರೆ ಇಂದು ಬೆಂ.ವಿ.ವಿ. ವ್ಯಾಪ್ತಿಯಲ್ಲಿ ವೈಜ್ಞಾನಿಕವಾದ ಸಂಶೋಧನೆಗಳು ನಡೆಯುತ್ತಿಲ್ಲ. ಅನೇಕ ಕಡೆ ಪಿ.ಜಿ. ಕೇಂದ್ರಗಳು ಇದ್ದು ಅವುಗಳನ್ನು ಉತ್ತಮವಾಗಿ ನಡೆಸಲು ಸಕರ್ಾರಗಳ ಅನುದಾನ, ಸಹಾಯಧನ ಸಾಕಷ್ಟು ಇಲ್ಲ ಮತ್ತು ಸಮರ್ಥ ಕುಲಪತಿಗಳೇ ಇಲ್ಲದ ಪರಿಸ್ಥಿತಿ ಬಂದಿದೆ.
ಉದಾ :
ಕೋಲಾರದ ಸಕರ್ಾರಿ ಕಾಲೇಜಿನ ಪಿ.ಜಿ. ಕೇಂದ್ರ ಹಾಗೂ ವಿ.ವಿ.ಯ ಕೂಗಳತೆಯಲ್ಲೇ ಇರುವ ಸಕರ್ಾರಿ ಕಲಾ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ, ಸಮಾಜಶಾಸ್ತ್ರ ಇತ್ಯಾದಿ ವಿಭಾಗಗಳು. ಸ್ನಾತಕೋತ್ತರ ಪದವಿ ಕೋಸರ್್ ಇದ್ದರೂ  ಅದರಲ್ಲಿ ಬರಿ ಕನ್ನಡ (ಸಂಶೋಧನ ಕೇಂದ್ರ ಮಾತ್ರ) ಇದೆ. ಇನ್ನು ಉಳಿದ ಯಾವುದೇ ವಿಷಯದ ಸಂಶೋಧನೆ ಕೇಂದ್ರ ಇಲ್ಲ.  ಇದು ಬೆಂಗಳೂರು ವಿ.ವಿ.ಯ ದುರಂತ ದುರಂತ ಸ್ಥಿತಿ.
ಶುಲ್ಕ ಹೆಚ್ಚಳ :
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಬಡ ದಲಿತ ಹಿಂದುಳಿದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದರ ಅರಿವು ಬೆಂ.ವಿ.ವಿ.ಗೆ ಇಲ್ಲದಂತಾಗಿದೆ.  ವಿ.ವಿ.ಯಲ್ಲಿ ವಿದ್ಯಾಥರ್ಿ ಸಂಘದ ಚುನಾವಣೆಗಳು ನಡೆಯದ ಕಾರಣ ಸಿಂಡಿಕೇಟ್ನಲ್ಲಿ ಬರೀ ಕಾಂಗ್ರೆಸ್, ಬಿಎಸ್ಪಿ ಪಕ್ಷಗಳ ಹಿನ್ನೆಲೆ ಇರುವ ಸದಸ್ಯರೇ ತುಂಬಿಕೊಂಡಿದ್ದಾರೆ. ವಿ.ವಿ.ಯು ಪ್ರತಿ ವರ್ಷದ ಸಿಂಡಿಕೇಟ್ ಸಭೆಯಲ್ಲೂ 40% ಶುಲ್ಕ ಹೆಚ್ಚಿಸುತ್ತಿದೆ. ಇದನ್ನು ವಿರೋಧಿಸಿ ಎಸ್ಎಫ್ಐ ಹೋರಾಟ ನಡೆಸುತ್ತಾ ಶುಲ್ಕ ಇಳಿಕೆಗೆ ಆಗ್ರಹಿಸುತ್ತಾ ಬಂದಿದೆ. ಆದರೆ ವಿ.ವಿ. ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ.
ಓಬಿಸಿ ವಿದ್ಯಾಥರ್ಿಗಳ ಶುಲ್ಕ ವಿನಾಯಿತಿ ವಂಚಿಸುವ ತಂತ್ರ
ಹಿಂದೆ ಬಿಜೆಪಿ ಸಕರ್ಾರವಿದ್ದಾಗ ಗೊಂದಲ ಸೃಷ್ಠಿ ಮಾಡಿ ಓಬಿಸಿ ಶುಲ್ಕ ವಿನಾಯಿತಿಯನ್ನು ನೀಡಿದೇ ವಿದ್ಯಾಥರ್ಿಗಳನ್ನು ವಂಚಿಸಲಾಯಿತು. ಆದರೆ ಕಾಂಗ್ರೆಸ್ ಸಕರ್ಾರ ಜನಪರ ಆಡಳಿತ ಎಂದು ಬೊಬ್ಬೆ ಹೊಡೆಯುತ್ತಾ  ವಿದ್ಯಾಥರ್ಿಗಳ ಕೊರಳಿಗೆ ಕೈ ಹಾಕಿದೆ.  ಹಿಂದೆಯಲ್ಲ ಓಬಿಸಿ ವಿದ್ಯಾಥರ್ಿಗಳಿಗೆ ಕಾಲೇಜುಗಳಲ್ಲಿ ಬೋಧನ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕಗಳನ್ನು ಸಕರ್ಾರದಿಂದಲೇ ನೀಡಲಾಗುತ್ತಿತ್ತು. ಆದರೆ ಇಂದು ಸಕರ್ಾರ ಈ  ವಿನಾಯಿತಿ ನೀಡಲು ಅಂಕ ಮಾನದಂಡ ಮಾಡುತ್ತೇನೆನ್ನುತ್ತಾ ಅನುದಾನ ಕಡಿತದ ಯೋಜನೆ ಮಾಡಿಕೊಂಡು ಶಿಕ್ಷಣವಿರೋಧಿ ನೀತಿಯನ್ನು ಅಳವಡಿಸಲು ಹೊರಟಿದೆ.
ವಿದ್ಯಾಥರ್ಿಗಳಲ್ಲಿ ಗೊಂದಲ ಸೃಷ್ಠಿ
ಈ ವಿಷಯದಲ್ಲಿ ಸಕರ್ಾರ ಹಾಗೂ ವಿ.ವಿ. ಮಧ್ಯದ  ಗೊಂದಲದಿಂದ ವಿದ್ಯಾಥರ್ಿಗಳು ತತ್ತರಿಸಿದ್ದಾರೆ. ಸಕರ್ಾರ ಹೇಳುತ್ತೆ `ಓಬಿಸಿ ವಿದ್ಯಾಥರ್ಿಗಳು ಪೂರ್ಣ ಪ್ರಮಾಣದಲ್ಲ್ಲಿ ಶುಲ್ಕ ಕಟ್ಟಬೇಕು, ನಂತರ ಆನ್ಲೈನ್ ಮೂಲಕ ಅಜರ್ಿ ಹಾಕಬೇಕು. ಅಜರ್ಿ ಹಾಕಿದವರಿಗೆ ಸಕರ್ಾರದಿಂದ ನೇರವಾಗಿ  ಖಾತೆಗೆ ಹಣವನ್ನು ಮರುಪಾವತಿಸಲಾಗುವುದು’ ಎಂದು. ವಿ.ವಿ. ಈ ನೀತಿಯ ಜಾರಿಗೆ ಮುಂದಾಗಿದೆ. ದುರಂತ ಎಂದರೆ ವಿ.ವಿ. ವ್ಯಾಪ್ತಿಯಲ್ಲಿ ಬರುವ ಕೆಲವೊಂದು ಕಾಲೇಜಿನಲ್ಲಿ ಹಿಂದೆ ಇರುವ ಶುಲ್ಕ ಕಟ್ಟಿಸಿಕೊಂಡರೆ,  ಇನ್ನು ಕೆಲವೊಂದು ಕಾಲೇಜಿನಲ್ಲಿ ಪೂರ್ಣ ಪ್ರಮಾಣದ ಶುಲ್ಕ ಕಟ್ಟಿಸಿಕೊಂಡಿದ್ದಾರೆ. ಇನ್ನೂ ದುರಂತ ಎಂದರೆ ಹಲವಾರು ಕಾಲೇಜುಗಳಿಗೆ ವಿ.ವಿ.ಯಿಂದ ಸುತ್ತೋಲೆಯನ್ನೇ ಕಳಿಸಿಲ್ಲ. ಈ ಎಲ್ಲ ಅಂಶಗಳು ಸೇರಿ ವಿದ್ಯಾಥರ್ಿಗಳು ಗೊಂದಲಕ್ಕೆ ಗುರಿಯಾಗಿದ್ದಾರೆ.
ಈ ರೀತಿಯ ದುರಾಡಳಿತವನ್ನು ವಿರೋಧಿಸಿ  ಬೆಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಬರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಫಲವಾಗಿ ಬೆಂಗಳೂರು ವಿ.ವಿ.ಯ ವಿ.ಸಿ.ಯವರ ಅಧ್ಯಕ್ಷತೆಯಲ್ಲಿ ಎಸ್ಎಫ್ಐ ನಿಯೋಗದೂಂದಿಗೆ ಸಭೆ ಕರೆಯಲಾಗಿತ್ತು. ಆ ಸಭೆಯಲ್ಲಿ ಎಸ್ಎಫ್ಐ ನಿಯೋಗ ವಿ.ವಿ.ಯಲ್ಲಿ ಮೂಲಸೌಲಭ್ಯಗಳು ಇಲ್ಲದಿರುವುದು ಹಾಗೂ ಅಂಕಪಟ್ಟಿಯಲ್ಲಿ ಆಗಿರುವ ದೋಷಗಳನ್ನು ವಿ.ಸಿ. ಯವರ ಗಮನಕ್ಕೆ ತಂದಿತು. ವಿ.ಸಿ.ಯವರು ಸಮಸ್ಯೆಗಳನ್ನು ಒಪ್ಪಿಕೊಂಡು ತಪ್ಪುಗಳನ್ನು ಸರಿ ಪಡಿಸುವುದಾಗಿ ತಿಳಿಸಿದ್ದರು.
ಆದರೆ ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸುವುದರ ಮೂಲಕ ಮತ್ತೆ ವಿದ್ಯಾಥರ್ಿಗಳ ಉನ್ನತ ಶಿಕ್ಷಣಕ್ಕೆ ಕೂಡಲಿ ಪೆಟ್ಟು ಹಾಕಿದ್ದಾರೆ. ಎಂಎಸ್ಸಿಯ  ಗಣಿತ ವಿಷಯದ ಶುಲ್ಕ 160 ರೂ. ನಿಂದ 970 ರೂ.ಗೆ. ಎಂ.ಕಾಂ. ನಲ್ಲಿ 165 ರಿಂದ 970 ರೂ.ಗೆ, ಎಂ.ಬಿ.ಎ. ಯಲ್ಲಿ 190 ರಿಂದ 2800 ರೂ. ಗೆ ಏರಿಸಲಾಗಿದೆ.
ಕಾಸು ಕೊಟ್ಟರೆ ಪಾಸ್
ಬೆಂಗಳೂರು ವಿ.ವಿ.ಯಲ್ಲ್ಲಿ ಕೆಲವು ವರ್ಷಗಳಿಂದ `ಕಾಸು ಕೂಟ್ಟರೆ ಪಾಸ್ ಎಂಬ `ನೀತಿ’ ಬಲಗೊಳ್ಳುತ್ತಾ ಬಂದಿದೆ.  ಪರೀಕ್ಷಾ ವಿಭಾಗದಲ್ಲಿ ನಡೆಯುತ್ತಿರುವ ಆಕ್ರಮಗಳನ್ನು  ತಡೆಗಟ್ಟಲು ವಿ.ವಿ. ಕುಲಪತಿಗಳು ಯಾವುದೇ ರೀತಿಯ ಕ್ರಮ ಕೈ ಗೊಂಡಿಲ್ಲ. ಅನುತ್ತೀರ್ಣ ವಿದ್ಯಾಥರ್ಿಗಳನ್ನು ಪಾಸು ಮಾಡಿಸಲು, ಅಂಕಪಟ್ಟಿ ತಿದ್ದುಪಡಿ ಮಾಡಲು ಮತ್ತು ಹಲವಾರು ಅಕ್ರಮಗಳಲ್ಲಿ ವಿ.ವಿ.ಯ ಪ್ರಮುಖ ಅಧಿಕಾರಿಗಳು ಶಾಮೀಲಾಗಿರುವುದು ವಿ.ವಿ. ಕುಲಪತಿಯವರಿಗೆ ಗೊತ್ತಿದ್ದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟೆ ಅಲ್ಲದೆ ಬಿಜೆಪಿ ಹಿನ್ನೆಲೆ ಹೊಂದಿದ್ದ ಸಿಂಡಿಕೇಟ್ ಮಾಜಿ ಸದಸ್ಯ  ವೇದಮೂತರ್ಿ ಅಂಕಪಟ್ಟಿ ತಿದ್ದುಪಡಿ ಹಗರಣದಲ್ಲಿ ಭಾಗಿಯಾಗಿರುವುದು ಎಪ್ರಿಲ್ 21 ರಂದು ಬಯಲಿಗೆ ಬಂದಿತ್ತು. ಈ ವಿಷಯ ತಿಳಿದು ವಿದ್ಯಾಥರ್ಿ ಸಂಘಟನೆ  ಎಂದು ಹೇಳಿಕೊಂಡು ವಿದ್ಯಾಥರ್ಿಗಳನ್ನು ದಾರಿ ತಪ್ಪಿಸಲು ಮುಂದಾಗಿರುವ ಬಿಜೆಪಿಯ ಅಂಗ ಸಂಘಟನೆಯಾದ ಎಬಿವಿಪಿ ಈ ವಿಷಯದ ಕುರಿತು ಎಲ್ಲಿಯೂ ಕೂಡಾ ಧ್ವನಿ ಎತ್ತಲಿಲ್ಲ. ಇನ್ನೂ ನಾಚಿಕೆಗೇಡಿನ ವಿಷಯ ಎಂದರೆ ಅಂಕಪಟ್ಟಿ ತಿದ್ದುಪಡಿ ಪ್ರಕರಣ ಬಯಲಾದರೂ ರಾಜ್ಯ ಕಾಂಗ್ರೇಸ್ ಸಕರ್ಾರ ನನಗೂ ವಿ.ವಿ.ಗೂ ಯಾವುದೇ ರೀತಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನವಹಿಸಿತು. ಇಂತಹ ಪರಿಸ್ಥಿತಿಯಲ್ಲಿ ಗಂಭೀರಗೊಳ್ಳುತ್ತಿರುವ ಸಮಸ್ಯೆಗಳ ತುತರ್ು ಪರಿಹಾರಕ್ಕೆ ಆಗ್ರಹಿಸಿ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಲು ಎಸ್ಎಫ್ಐ  ತಿಮರ್ಾನಿಸಿತು.
ಸಿಂಡಿಕೇಟ್ ಸಭೆಗೆ ವಿದ್ಯಾಥರ್ಿಗಳ ಮುತ್ತಿಗೆ
ಬೆಂಗಳೂರು ವಿ.ವಿ. ಸಿಂಡಿಕೇಟ್ ಸಭೆ ಎಪ್ರಿಲ್ 25, 2014 ರಂದು ನಡೆಯುತ್ತಿತ್ತು.  ಸ್ನಾತಕೋತ್ತರ ಪದವಿ ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಹಾಗೂ ಅಂಕಪಟ್ಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಎಸ್ಎಫ್ಐ ನಡೆಸಿದ ಹೋರಾಟಕ್ಕೆ ವಿ.ವಿ. ಕಡೆಯಿಂದ ಯಾವುದೇ ರೀತಿಯಾದ ಸ್ಪಂದನೆ ಸಿಗದ ಕಾರಣ ಸಿಂಡಿಕೇಟ್ ಸಭೆ ನಡೆಯುವ ಕೊಠಡಿಗೆ   ನೂರಾರು ವಿದ್ಯಾಥರ್ಿಗಳು ನುಗ್ಗಿ ಸಭೆಗೆ ತಡೆಯೊಡ್ಡಿದರು. ವಿ.ವಿ. ಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಲಿಸರು ವಿದ್ಯಾಥರ್ಿ ಮುಖಂಡರನ್ನು ಹೊರ ಎಳೆದೊಯ್ಯುವ ಪ್ರಯತ್ನ ಮಾಡಿದರು. ಈ ಸಮಯದಲ್ಲಿ ಪೋಲಿಸರ ಮತ್ತು ವಿದ್ಯಾಥರ್ಿ ಮುಖಂಡರ ಮಧ್ಯೆ ವಾಗ್ವದ ನಡೆಯಿತು. ಪೋಲಿಸರ ಒತ್ತಡಕ್ಕೆ  ಮಣಿಯದೆ ಶುಲ್ಕ ವಿನಾಯಿತಿಯನ್ನು ಕೂಡಲೆ ಘೋಷಿಸಬೇಕು ಎಂದು ಪಟ್ಟು ಹಿಡಿದಾಗ ಪೋಲಿಸರು ಲಾಠಿ ಪ್ರಹಾರ ನಡೆಸಿ ಎಸ್ಎಫ್ಐ  ರಾಜ್ಯ ಕಾರ್ಯದಶರ್ಿ  ಗುರುರಾಜ್, ರಾಜ್ಯ ಉಪಾಧ್ಯಕ್ಷರಾದ ಚಿಕ್ಕರಾಜು,  ಹನುಮಂತ, ವೆಂಕಟೇಶ್,  ಹರಿಪ್ರಸಾದ್ರವರ ಮೇಲೆ ಹಲ್ಲೆ ನಡೆಸಿ ಕೇಸ್ ದಾಖಲಿಸಿದ್ದಾರೆ. ಹೋರಾಟಕ್ಕೆ ಮಣಿದ ವಿ.ವಿ.ಶೇ. 50 ಶುಲ್ಕ ರಿಯಾಯಿತಿ ನೀಡಲು ಒಪ್ಪಿಗೆ ಸೂಚಿಸಿತು. ಆದರೆ ಪೂರ್ಣ ಪ್ರಮಾಣದ  ಶುಲ್ಕ ಕಡಿಮೆ ಮಾಡಲು ಎಸ್ಎಫ್ಐ ಆಗ್ರಹಿಸಿದೆ.
4 ವರ್ಷದ ಪದವಿ ಕೋಸರ್್ಗೆ ಎಸ್ಎಫ್ಐ ವಿರೋಧ :
ಬೆಂಗಳೂರು ವಿ.ವಿ. ಜಾರಿಗೆ ತರಲು ಉದ್ದೇಶಿಸಿರುವ 4 ವರ್ಷಗಳ ಪದವಿ ಕೋಸರ್್ಗೆ ಎಸ್ಎಫ್ಐ ತೀವ್ರ ವಿರೋಧ ವ್ಯಕ್ತಪಡಿಸಿತು. ಕ್ರೆಡಿಟ್ ಆಧಾರಿತ ಸೆಮಿಸ್ಪರ್ ಪದ್ದತಿಯನ್ನು ಭಾರತದಲ್ಲಿ ಜಾರಿಗೆ ತರುವುದು ಕಷ್ಟ ಹಾಗೂ ಅಪಾಯಕಾರಿ ಎಂಬುದು ಶಿಕ್ಷಣ ತಜ್ಞರು ಮತ್ತು ವಿದ್ಯಾಥರ್ಿ ಸಂಘಟನೆಗಳ  ಅಭಿಪ್ರಾಯ, ಇಂತಹ ಶಿಕ್ಷಣ ಕ್ರಮವನ್ನು ಚಚರ್ೆ ಇಲ್ಲದೆ ಜಾರಿಗೆ ತರಲು ಹೊರಟಿರುವ ಬೆಂಗಳೂರು ವಿ.ವಿ.ಯ ಈ ನೀತಿ ಖಾಸಗಿ ಕಾಲೇಜುಗಳಿಗೆ ಹಣ ವಸೂಲಿ ಮಾಡಲು ಸುಲಭವಾದ ದಾರಿ ಮಾಡಿಕೊಡುವಂತೆ ಕಾಣುತ್ತಿದೆ.
ಅಷ್ಟೆ ಅಲ್ಲದೆ ಹಿಂದೆ ದೆಹಲಿ ವಿ.ವಿ.ಯಲ್ಲಿ ಈ ಕೋಸರ್್ ಜಾರಿಗೆ ತರುವ ಸಂದರ್ಭದಲ್ಲಿ ಶಿಕ್ಷಣ ತಜ್ಞರು ಹಾಗೂ ಅಲ್ಲಿಯ ಎಸ್ಎಫ್ಐ ಕಾರ್ಯಕರ್ತರಿಂದ ತೀವ್ರ ವಿರೋ ಧ ವ್ಯಕ್ತವಾಗಿತ್ತ್ತು. ಆದರೂ  ಬೆಂಗಳೂರು ವಿ.ವಿ. ಈ ಮಾದರಿ ಕೋಸರ್್ನ್ನು ಜಾರಿಗೆ ತರಲು ಮುಂದಾಗಿದೆ. ಬೆಂಗಳೂರು ವಿ.ವಿ. ಹೆಸರಿಗೆ ಮಾತ್ರ ವಿದ್ಯಾಥರ್ಿ ಸಂಘಟನೆಗೆಳ ಮುಖಂಡರು ಹಾಗೂ ವಿದ್ಯಾಥರ್ಿಗಳ ಜೊತೆ ಎಪ್ರಿಲ್ 29, 2014 ರಂದು ಸಭೆ ನಡೆಸಿದೆ. ಈ ಸಭೆಯಲ್ಲಿ ಎಸ್ಎಫ್ಐ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿಲ್ಲ ಮತ್ತು  ಸಲಹೆಗಳನ್ನು ಪರಿಗಣಿಸಲಿಲ್ಲ.
4 ವರ್ಷದ ಪದವಿ ಕೋಸರ್್ಗಳಲ್ಲಿ ಹೊಸದಾಗಿ  ಸೇರಿಸಲು ಉದ್ದೇಶಿಸಿರುವ ವ್ಯಕ್ತಿತ್ವ ವಿಕಸನ, ಮನಸ್ಸು ದೇಹ ಹೃದಯದ ಸಮಗ್ರೀಕರಣ, ಮೃದು ಕೌಶಲ್ಯ, ಸಂಪರ್ಕ ಕೌಶಲ್ಯ, ಮುಂತಾದ ಕೋಸರ್್ಗಳಿಗೆ ಯಾವ ರೀತಿಯ ಪಠ್ಯಕ್ರಮ ಅಳವಡಿಸುವಿರಿ? ಮತ್ತು ಈ ವಿಷಯಗಳಿಗೆ ಸಮರ್ಥ ಬೋಧಕರಿದ್ದಾರೆಯೇ? ಹಾಗೂ ವಿಷಯಗಳನ್ನು ಜಾರಿಗೆ ತರಲು ಬೆಂಗಳೂರು ವಿ.ವಿ.ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಪ್ರಯೋಗಾಲಯಗಳು ಮತ್ತು ಕೌಶಲ್ಯ ಕಲಿಸಲು ಸಾಧನಗಳು ಇದ್ದಾವೆಯೇ? ಎಂದು ಎಸ್ಎಫ್ಐ ಮುಖಂಡರು ಸಭೆಯಲ್ಲಿ ಪ್ರಶ್ನಿಸಿದರು. ಆದರೆ  ಕುಲಪತಿಯವರು ಇದು ವಿದ್ಯಾಥರ್ಿ ದೃಷ್ಠಿಯಿಂದ ಒಳ್ಳೆಯದು ಎಂದಷ್ಟೆ ಹೇಳಿ ಜಾರಿಕೊಂಡರು. ಇದನ್ನೆಲ್ಲಾ ಗಮನಿಸಿದರೆ  ಬಹುಶ: ಖಾಸಗಿ ಕಾಲೇಜುಗಳಿಗೆ  ಹೆಚ್ಚೆಚ್ಚು ಅವಕಾಶ ನೀಡುವ ಸಲುವಾಗಿ  4 ವರ್ಷಗಳ ಡಿಗ್ರಿ ಹಾನರ್ಸ್ ಕೋಸರ್್ ತೆರೆಯಲು ತುದಿಗಾಲ ಮೇಲೆ ನಿಂತಿರುವ ಹಾಗೆ ಕಾಣುತ್ತದೆ. ಆದರೆ ಎಸ್ಎಫ್ಐ ಸಂಘಟನೆಯು ಇದನ್ನು ವಿರೋಧಿಸಿ ಹೋರಾಟ ರೂಪಿಸಲು ಮುಂದಾಗಿದೆೆ.

Donate Janashakthi Media

Leave a Reply

Your email address will not be published. Required fields are marked *