ಬಸ್ಸಿನ ಪರಿಹಾರಕ್ಕಾಗಿ ಕೆಎಸ್ಆರ್ಟಿಸಿ ಅಧಿಕಾರಗಳೊಂದಿಗೆ ಎಸ್ಎಫ್ಐ ಸಭೆ ಯಶಸ್ವಿ

ಆರ್.ಟ.ಓ ಕಚೇರಿ ಯಿಂದ ಗಾಂಧಿಪುರಕ್ಕೆ ನಿರಂತರ ಸಂಚಾರಕ್ಕೆ ಆದೇಶ
ಹಾವೇರಿ: ನಗರದ ಆರ್ ಟಿಓ ಕಚೇರಿ ಸಮೀಪದಲ್ಲಿರುವ ಸಾರಿಗೆ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಗಾಂಧಿಪುರ ಕಾಲೇಜಿನ ಬಸ್ಸಿನ ಪರಿಹಾರಕ್ಕಾಗಿ ಕೆಎಸ್ಆರ್ಟಿಸಿ ಅಧಿಕಾರಗಳೊಂದಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಕಾರ್ಯಕರ್ತರು ಸಭೆ ನಡೆಸಿದರು.

ಸರ್ಕಾರಿ ಪ್ರಥಮ ದರ್ಜೆ ಗಾಂಧಿಪುರ ಕಾಲೇಜಿನ ಬಸ್ಸಿನ ಪರಿಹಾರಕ್ಕಾಗಿ ಒತ್ತಾಯಿಸಿ ಸೋಮವಾರ ರಂದು ಬೃಹತ್ ತೆರನಾದ ಹೋರಾಟ ಮಾಡಲಾಗಿತ್ತು. ಎಚ್ಚೆತಕೊಂಡ ಕೆಎಸ್ಆರ್ಟಿಸಿ ಅಧಿಕಾರಿಗಳು ಸಭೆ ಮಾಡಿ ಅನೇಕ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ನಡೆಸಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಹೋರಾಟದ ನಂತರ ಅಥವಾ ಅಧಿಕಾರಿಗಳ ಸೂಚನೆ ಬಳಿಕ ಕೆಲವು ಕೆಲವು ದಿನಗಳು ಮಾತ್ರ ಸರಿಯಾಗಿ ಬಸ್ ಗಳು ಕಾರ್ಯನಿರ್ವಹಿಸುತ್ತವೆ ಹೊರತು ಮತ್ತೆ ಸಮಸ್ಯೆಗಳು ಜೀವಂತವಾಗಿರುತ್ತೆವೆ. ಗಾಂಧಿಪುರ ದಿಂದ ಹಾವೇರಿ ನಗರಕ್ಕೆ ಈ ಹಿಂದೆ ವಾರದಲ್ಲಿ ಎರಡು ದಿನಗಳ ಉಚಿತ ಸಂಚಾರವನ್ನು ಮುಂದುವರೆಸಬೇಕು ಇಲ್ಲವಾದರೆ ವಿದ್ಯಾರ್ಥಿಗಳಿಗೆ ಟಿಕೆಟ್ ದರ ಕಡಿಮೆ ಮಾಡಬೇಕು ಹಾಗೂ ಕಾನೂನು ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ತಾರತಮ್ಯ ಸರಿಪಡಿಸಬೇಕು. ಪ್ರಮುಖವಾಗಿ ನಗರ ಸಾರಿಗೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಪಟ್ಟುಹಿಡಿದರು.

ಇದನ್ನೂ ಓದಿ : ನೋಟು ಅಮಾನ್ಯೀಕರಣವೂ ನಕಲಿ ನೋಟು ಹಾವಳಿಯೂ 2016ರಲ್ಲೇ ನಕಲಿ ನೋಟು ಹಾವಳಿಗೆ ಅಂತ್ಯ ಹಾಡಿದರೂ ಇಂದಿಗೂ ಊರ್ಜಿತವಾಗಿರುವುದೇಕೆ?

ಸಾರಿಗೆ ಸಂಚಾರ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಟಿಓ) ಅಶೋಕ ಪಾಟೀಲ್ ಅವರು ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ ವಿದ್ಯಾರ್ಥಿಗಳ ಬಸ್ಸಿನ ಅನೇಕ ಬೇಡಿಕೆಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳ ಅನುಕೂಲ ತಕ್ಕಂತೆ ಹೆಚ್ಚುವರಿ ಬಸ್ ಗಳನ್ನು ಬಿಡಲಾಗುವುದು. ಬದಲಿ ಡಿಪೋ ಬಸ್ ಸಂಚಾರ ಸಮಸ್ಯೆ ಬಂದರೆ ಆಯ ವ್ಯವಸ್ಥಾಪಕರಿಗೆ ಆದೇಶ ಹೊರಡಿಸುತ್ತೆವೆ ಎಂದು ಎದರುಗಡೆನೆ ದೂರವಾಣಿ ಮೂಲಕ ಸಂಪರ್ಕ ಮಾಡಿ ಎಚ್ಚರಿಕೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಲು ಗಾಂಧಿಪುರ ಕಾಲೇಜಿನ ಮುಂದೆ ವೀಕ್ಷಕರಾಗಿ ಕೆಎಸ್ಆರ್ಟಿಸಿ ಅಧಿಕಾರಿಯನ್ನು ನೇಮಕ ಮಾಡಲಾಗುವುದು. ಕಾಲೇಜ್ ಎದುರಗಡೆ ನಿಲುಗಡೆ ಬೋರ್ಡ್ ಹಾಕಲಾಗುವುದು. ಬಸ್ ಪಾಸ್ ಆನ್ಲೈನ್ ಪೋರ್ಟಲ್ ಆಗಿರುವುದರಿಂದ ಬದಲಾವಣೆ ನಿಮ್ಮ ಅಧಿಕಾರ ಇಲ್ಲ ಅದರ ಬದಲಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನಿಷ್ಠ 10 ಟಿಕೆಟ್ ನಿಗದಿ ಮಾಡುತ್ತೇವೆ. ಪ್ರಮುಖವಾದ ಬೇಡಿಕೆ ನಗರ ಸಾರಿಗೆ ರೀತಿಯಲ್ಲಿ ಆರ್.ಟಿ.ಓ ಕಛೇರಿಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಗಾಂಧಿಪುರಕ್ಕೆ ನಿರಂತರವಾಗಿ ಎರಡು ಬಸ್ ಗಳನ್ನು ಸಂಚಾರಕ್ಕೆ ಆದೇಶ ಹೊರಡಿಸುತ್ತೇವೆ. ಹಾಗೂ ಇನ್ನೂ ಮುಂದೆ ಸಮಸ್ಯೆಗಳು ಎದುರುಗಾದಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿ ನೋಡಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಜಿ.ಬಿ.ಅಡರಗಟ್ಟಿ, ಟಿಐ ಅಧಿಕಾರಿ ಕುಮಾರ್ ತೋಟಗೇರ್, ಎಸ್ಎಫ್ಐ ಕಾಲೇಜ್ ಘಟಕ ಅಧ್ಯಕ್ಷ ತಿರಕಪ್ಪ ಬಾತಿ, ಕಾರ್ಯದರ್ಶಿ ಲಕ್ಷ್ಮಿ ಲಮಾಣಿ, ಉಪಾಧ್ಯಕ್ಷೆ ಲಿಂಗರಾಜ ಸಿ ಎಮ್, ಜ್ಯೋತಿ ಪಟ್ಟಣಶೆಟ್ಟಿ, ಸಂಜನಾ ಬಾರ್ಕಿ ಸಭೆಯಲ್ಲಿದರು.

ಇದನ್ನೂ ನೋಡಿ : ಸಂವಿಧಾನ ಬದಲಿಸಿ, ನಮಗೆ ಬೇಕಾದ ಸಂವಿಧಾನ ಕೊಡಿ ಎಂದ ಪೇಜಾವರ ಮಠದ ಸ್ವಾಮಿ ವಿರುದ್ದ ಪ್ರಕರಣ ದಾಖಲಿಸಬೇಕಲ್ಲವೇ?

Donate Janashakthi Media

Leave a Reply

Your email address will not be published. Required fields are marked *