ದೆಹಲಿ: ಅಜ್ಮೀರ್ ಷರೀಫ್ ದರ್ಗಾದ ಕೆಳಗೆ ದೇವಾಲಯವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅದರ ಸಮೀಕ್ಷೆಯನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಸಿವಿಲ್ ನ್ಯಾಯಾಲಯದ ನಿರ್ಧಾರವು ಅನಗತ್ಯವಾಗಿದೆ ಮತ್ತ್ಯು ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಧಾರ್ಮಿಕ
ಅಲ್ಲದೆ ಇದು ಆಗಸ್ಟ್ 15, 1947 ರ ಮೊದಲು ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳದ ಬಗ್ಗೆ ಯಾವುದೇ ಕಾನೂನು ವಿವಾದವನ್ನು ಎತ್ತುವಂತಿಲ್ಲ ಎಂದು ವಿಧಿಸಿದ ‘ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ’, 1991 ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಇದನ್ನೂ ಓದಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ ಕಡಿತ
ಈ ಕಾಯಿದೆಯ ಉಲ್ಲಂಘನೆಯು ಈಗಾಗಲೇ ಸಂಭಲ್‌ನಲ್ಲಿನ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ದೋಷಪೂರಿತ ನಿರ್ಧಾರಕ್ಕೆ ಕಾರಣವಾಗಿದೆ, ಅದು ಹಿಂಸಾಚಾರ ಮತ್ತು ಐದು ಜನರ ಸಾವಿಗೆ ಕಾರಣವಾಗಿದೆ.
2019 ರ ಅಯೋಧ್ಯೆ ತೀರ್ಪಿನಲ್ಲಿ ನ್ಯಾಯಾಲಯವೇ ಎತ್ತಿಹಿಡಿದ ಪೂಜಾ ಸ್ಥಳಗಳ ಕಾಯ್ದೆಗೆ ಅನುಗುಣವಾಗಿ ಇಂತಹ ಕಾನೂನು ಕಲಾಪಗಳನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.
ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media