ಕಲಬುರ್ಗಿ : ಕಲ್ಬುರ್ಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಸುರಿದು ಒಂದು ಇಡಿ ಕುಟುಂಬವನ್ನು ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಕುಟುಂಬದ ಸುಮಾರು 6 ಜನರು ಕಲಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಲಿಂಗಪ್ಪ 5 ವರ್ಷದ ಹಿಂದಷ್ಟೇ ಗುಂಡೇರಾವ್ ಅವರಿಗೆ 4 ಎಕರೆ ಜಮೀನು ಮಾರಾಟ ಮಾಡಿದ್ದರು. ಅದಕ್ಕೆ 13 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರು. ಇದೀಗ ರಿಜಿಸ್ಟರ್ ಮಾಡುವ ವೇಳೆಯಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಹಾರೋಹಳ್ಳಿ: ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ
ಇದೇ ಸಿಟ್ಟಿನಲ್ಲಿ ಶಿವಲಿಂಗಪ್ಪ ಈ ಕೃತ್ಯ ಎಸಗಿದ್ದಾನೆ. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಶಿವಲಿಂಗಪ್ಪ ಕರಿಕಲ್ ಎಂಬಾತನಿಂದ ಗುಂಡರಾವ್ ಎನ್ನುವವರ ಕುಟುಂಬದ ಹತ್ಯೆಗೆ ಯತ್ನಿಸಲಾಗಿದೆ.
ಬಟ್ಟೆಯ ಉಂಡೆಗಳನ್ನು ಪೆಟ್ರೋಲ್ ನಲ್ಲಿ ತೋಯಿಸಿ ಮನೆಗೆ ನುಗ್ಗಿ ಕೀಟನಾಶಕದ ಸ್ಪ್ರೇಯಿಂದ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಗ್ರಾಮಸ್ಥರ ಒಂದು ಜಾಗೃತೆಯಿಂದ ಇಡಿ ಕುಟುಂಬ ಇದೀಗ ಪ್ರಾಣಾಪಾಯದಿಂದ ಪಾರಾಗಿದೆ.
ಶಿವಲಿಂಗಪ್ಪ 4 ಎಕರೆ ಜಮೀನು ಗುಂಡೂರಾವ್ ಗೆ ಮಾರಾಟ ಮಾಡಿದ್ದ. ಖರೀದಿ ಮಾತುಕತೆಯಾಗಿ ಶಿವಲಿಂಗಪ್ಪ 13 ಲಕ್ಷ ಅಡ್ವಾನ್ಸ್ ಪಡೆದಿದ್ದ. ಬಳಿಕ ಜಮೀನು ರಿಜಿಸ್ಟರ್ ಮಾಡಿಕೊಡುವ ವಿಚಾರದಲ್ಲಿ ವಿವಾದ ನಡೆದಿದೆ.ಜಮೀನು ರಿಜಿಸ್ಮರ್ ಮಾಡಿಕೊಡಲು ಶಿವಲಿಂಗಪ್ಪ ವಿರೋಧ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ನೋಡಿ : ವಿಕ್ರಂಗೌಡ ಶೂಟೌಟ್ ಪ್ರಕರಣ – ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಮಾಜಿ ನಕ್ಸಲರ ಆಗ್ರಹJanashakthi Media