ಮಧ್ಯಪ್ರದೇಶ: ಸರಪಂಚ್ ಮತ್ತು ಅವರ ಕುಟುಂಬ ಸದಸ್ಯರು ಸೇರಿ ಓರ್ವ ದಲಿತ ಯುವಕನನ್ನು ಕ್ರೂರವಾಗಿ ಥಳಿಸಿ ಹತ್ಯೆಗೈದಿರುವ ಘಟನೆಮ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಗ್ರಾಮದಲ್ಲಿ ನಡೆದಿದೆ. ದಲಿತ
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ, ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಇಂದೆರ್ಗಢ ಗ್ರಾಮದಲ್ಲಿರುವ ಹೊಲಕ್ಕೆ ನೀರುಣಿಸುವ ವಿಚಾರವಾಗಿ ವಾಗ್ವಾದ ಶುರುವಾಗಿತ್ತು. ಕೊನೆಗೂ ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೊ ಸಾಮಾಜಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಈ ವಿಡಿಯೊದಲ್ಲಿ ಸರಪಂಚ್ ಪದಮ್ ಸಿಂಗ್ ಧಾಕಡ್ ಮತ್ತು ಅವರ ಕುಟುಂಬ ಸದಸ್ಯರು 28 ವರ್ಷದ ನಾರದ್ ಜಾತವ್ ರನ್ನು ನಿರ್ದಯವಾಗಿ ಥಳಿಸಿ ಹಿಂಸಾತ್ಮಕವಾಗಿ ಹಲ್ಲೆ ನಡೆಸಿ, ಹತ್ಯೆಗೈದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇದನ್ನೂ ಓದಿ: ಕಾರ್ಮಿಕರ ಹಿತ ಮುಖ್ಯ ಸಿಎಂ ಜೊತೆಗೆ ಚರ್ಚೆಗೆ ಸಮಯ ನಿಗದಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ
ವಿಡಿಯೋ ನೋಡಿ : Dalit Youth Beaten To Death Over Land Dispute
ವರದಿ ಪುಕಾರ, ಸರಪಂಚ್ ಪದಮ್ ಸಿಂಗ್ ಧಾಕಾಡ್ ತಮ್ಮ ಕುಟುಂಬ ಸದಸ್ಯರಾದ ಬೇತಾಲ್ ಧಾಕಡ್, ಜಸ್ವಂತ್ ಧಾಕಡ್, ಅವಧೇಶ್ ಧಾಕಡ್, ಅಂಕೇಶ್ ಧಾಕಡ್, ಮೊಹರ್ ಪಾಲ್ ಧಾಕಡ್, ದಖಾ ಬಾಯಿ ಧಾಕಾಡ್ ಮತ್ತು ವಿಮಲ್ ಧಾಕಾಡ್ ರೊಂದಿಗೆ ಹೊಲಗಳಿಗೆ ನೀರು ಹಾಕುವಾಗ ನಾರದ್ ಅಲ್ಲಿಗೆ ಬಂದಿದ್ದಾರೆ. ಆಗ ಈ ಗುಂಪು ನಾರದ್ ಜಾತವ್ ಅವರ ಮೇಲೆ ನಿಂದನೆಗಳನ್ನು ಮಾಡಲು ಶುರುಮಾಡಿದ್ದಾರಂತೆ.
ಇದು ಶೀಘ್ರದಲ್ಲೇ ಹಿಂಸಾತ್ಮಕ ದಾಳಿಗೆ ಕಾರಣವಾಯಿತು. ದೊಣೆಗಳನ್ನು ಹಿಡಿದಿದ್ದ ಅವರು ನಾರದ್ ಜಾತವ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ. ಇದರಿಂದಾಗಿ ನಾರದ್ ಜಾತವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅವರ ಕುಟುಂಬವು ಶಿವಪುರಿ ವೈದ್ಯಕೀಯ ಕಾಲೇಜಿಗೆ ಕರೆತಂದರೂ ಕೂಡ ಅವರು ತೀವು ಗಾಯಗೊಂಡು ರಕ್ತಸ್ರಾವದ ಕಾರಣ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸುಭಾಷ್ಪುರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮಾರ್ಗ ಮತ್ತು ಬೋರ್ವೆಲ್ಗೆ ಸಂಬಂಧಿಸಿದ ವಿಚಾರಕ್ಕೆ ದೀರ್ಘಕಾಲದಿಂದ ವಿವಾದ ನಡೆಯುತ್ತಿತ್ತು. ನಾರದ್ ತೆಗೆದುಹಾಕಿದ ಬೋರ್ವೆಲ್ ಪೈಸ್ಟೈನ್ ಬಗ್ಗೆ ಸರಪಂಚ್ ಕುಟುಂಬ ಆಗಾಗ ವಾಗ್ವಾದ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ