ಮಂಗಳೂರು: ದಲಿತ ಕೂಲಿ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿದ್ದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತೌರೋ ಸಿಮೆಂಟ್ ಫ್ಯಾಬ್ರಿಕೇಷನ್ ಘಟಕದಲ್ಲಿ ಸಹಾಯಕ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಸುಳ್ಯದ ಕರೆಮೂಲೆ ನಿವಾಸಿ ಶಿವಪ್ಪ (70) ನವೆಂಬರ್ 16ರಂದು ಕೆಲಸದ ಸಮಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ವೈದ್ಯಕೀಯ ನೆರವು ನೀಡದೆ ಅವರ ಕುಟುಂಬಕ್ಕೆ ತಿಳಿಸುವ ಬದಲು, ಕಾರ್ಖಾನೆಯ ಮಾಲೀಕ ಹನ್ನಿ ಟೌರೊ, ಶಿವಪ್ಪನ ದೇಹವನ್ನು ಪಿಕಪ್ ಟ್ರಕ್ಗೆ ತುಂಬಿ ಅವರ ಮನೆಯ ಬಳಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರ ಈ ಘಟನೆಯು ಪುತ್ತೂರಿನ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸೇರಿದಂತೆ ಪುತ್ತೂರಿನ ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದವು.
ಇದನ್ನೂ ಓದಿ : ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವು: ಸಾವುನಲ್ಲೂ ಒಂದಾದ ದಂಪತಿಗಳು
ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳ ಮೂಲಕ ಸಾರ್ವಜನಿಕ ಒತ್ತಡವನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ತೌರೂ, ಆತನ ಮಗ ಕಿರಣ್, ಸಹಾಯಕ ಪುಕಾಶ್ ಮತ್ತು ಸ್ಮಾನಿ ಎಂಬ ಮೇಸ್ತ್ರಿಯನ್ನು ಬಂಧಿಸಲಾಗಿದೆ.
ಶಿವಪ್ಪ ಅವರ ಅಳಿಯ ನೀಡಿದ ದೂರಿನ ಪ್ರಕಾರ ಆರೋಪಿಗಳು ನ.16 ರಂದು ಸಂಜೆ ಶಿವಪ್ಪನನ್ನು ರಸ್ತೆ ಬದಿ ಎಸೆದು ಹೋಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೃತದೇಹಕ್ಕೆ ಅಗೌವರ ತೋರಿದ ಆರೋಪಗಳನ್ನು ಪರಿಶೀಲಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ : ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಂತೆ ಪೇಜಾವರರೇ “ನಮ್ಮನ್ನು ಅಂದ್ರೆ ನಿಮ್ಮನ್ನಾ” ಮಾತ್ರನಾ? – ಕೆ.ಎಸ್. ವಿಮಲಾ