ನವಜಾತ ಶಿಶುವನ್ನು ಅಪಹರಿಸಿದ ಇಬ್ಬರು ನಕಲಿ ನರ್ಸ್; 36 ಗಂಟೆಗಳಲ್ಲಿ ಬಂಧನ

ಗುಲ್ಬರ್ಗಾ: ಬಾನುವಾರದಂದು ನಗರದ ವೈದ್ಯಕೀಯ ಆಸ್ಪತ್ರೆಯಿಂದ ಒಂದು ದಿನದ ಗಂಡು ಮಗುವನ್ನು ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದೂ, ಬ್ರಹ್ಮಪುರ ಪೊಲೀಸರು 36 ಗಂಟೆಗಳಲ್ಲಿ ಮಗು ತಾಯಿಯ ಮಡಿಲು ಸೇರುವಂತೆಮಾಡಿದ್ದಾರೆ. ಶಿಶು

ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಯ ನವಜಾತ ಶಿಶುವನ್ನು ಅಪಹರಿಸಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಹೃದಯಾಘಾತದಿಂದ ಸಾವು: ಸಾವುನಲ್ಲೂ ಒಂದಾದ ದಂಪತಿಗಳು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕು ವಿಶೇಷ ತನಿಖೆ ತಂಡ ರಚನೆ ಮಗುವಿಗಾಗಿ ಶೋಧ ಕಾರ್ಯ ಆರಂಭಿಸಲಾಗಿತ್ತು. ಇದೀಗ ಮಗು ನಾಪತ್ತೆಯಾಗಿ 36 ಗಂಟೆಗಳಲ್ಲಿ ಹುಡುಕಾಟ ನಡೆಸಿ ಮಗುವನ್ನು ಪತ್ತೆ ಹಚ್ಚಿದ್ದಾರೆ. ಶಿಶು

ಅದರಂತೆ ಇಂದು ಬೆಳಿಗ್ಗೆಯೇ ಸ್ವತಃ ಕಮಿಷನರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಗುವನ್ನು ತಾಯಿ ಕಸ್ತೂರಿಯವರಿಗೆ ಒಪ್ಪಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರ ನಡೆಸಲಾಗುತ್ತಿದೆ.

ಇದನ್ನೂ ನೋಡಿ: ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಂತೆ ಪೇಜಾವರರೇ “ನಮ್ಮನ್ನು ಅಂದ್ರೆ ನಿಮ್ಮನ್ನಾ” ಮಾತ್ರನಾ? – ಕೆ.ಎಸ್.‌ ವಿಮಲಾ

Donate Janashakthi Media

Leave a Reply

Your email address will not be published. Required fields are marked *