ಬೆಂಗಳೂರು: ‘ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಬೇರೆಯವರಿಗೆ ಮತದಾನ ಮಾಡುವ ಹಕ್ಕಿಲ್ಲ. ಅದೇ ರೀತಿ ನಮ್ಮ ಭಾರತದಲ್ಲಿಯೂ ಮುಸ್ಲಿಮರಿಗೆ ಮತದಾನದ ಅಧಿಕಾರ ಇಲ್ಲದಂತೆ ಮಾಡಿದರೆ, ಖಂಡಿತವಾಗಿಯೂ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ಇದನ್ನೂ ಓದಿ : ಬುದ್ಧ ವಿಹಾರದ ಸಂಪೂರ್ಣ ಆಡಳಿತ ಹಾಗೂ ನಿರ್ವಹಣೆಯನ್ನು ಬೌದ್ಧರಿಗೆ ಹಸ್ತಾಂತರಿಸುವಂತೆ ಒತ್ತಾಯ: ದೇಶಾದ್ಯಂತ ಪ್ರತಿಭಟನೆ
ವಕ್ಫ್ ಮಂಡಳಿ ಯಾವುದೇ ಕಾನೂನು ಇಲ್ಲದೆ ಜಮೀನು, ಕಟ್ಟಡ, ಆಸ್ತಿ ಪಾಸ್ತಿ ಕಿತ್ತುಕೊಳ್ಳಬಹುದು ಎಂದು ಹೇಳುತ್ತಿದೆ. ಅದು ಬಹಳ ಅನ್ಯಾಯ. ಯಾರದೋ ವಸ್ತು, ಯಾರೋ ಕಿತ್ತುಕೊಳ್ಳುವಂತಹದ್ದು ಸರಿಯಲ್ಲ. ಅವರ ವಸ್ತುವನ್ನು ಬೇರೆ ಯಾರಾದರೂ ಕಿತ್ತುಕೊಂಡರೆ ಅವರು ಸುಮ್ಮನಿರುತ್ತಾರಾ? ಎಂದು ಚಂದ್ರಶೇಖರ ಸ್ವಾಮೀಜಿ ಪ್ರಶ್ನಿಸಿದರು.
ಇದರ ಬಗ್ಗೆ ಎಲ್ಲರೂ ಸೇರಿ ಹೋರಾಟ ಮಾಡಿ, ರೈತರ ಜಮೀನು ರೈತರಿಗೆ ಇರಬೇಕು. ಹಿಂದಿನಿಂದಲೂ ನಮ್ಮ ದೇಶದಲ್ಲಿ, ಪ್ರಪಂಚದಲ್ಲಿ ರೈತ ಅನ್ನದಾತ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅನ್ನ ನೀಡುತ್ತಿರುವುದು ರೈತ. ಆದುದರಿಂದ, ರೈತರನ್ನು ಉಳಿಸಬೇಕು, ರೈತರನ್ನು ಬೆಳೆಸಬೇಕು, ರೈತರನ್ನು ಬೆಳೆಯುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ನೋಡಿ : ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ, ಆರ್ ಡಿಪಿಆರ್ ಇಲಾಖೆಗಳ ಕಾರ್ಯ ನಿರ್ವಹಣೆಯ ಆಳ ಅಗಲ.. Janashakthi Media