ಮಹಾರಾಷ್ಟ್ರ ಚುನಾವಣೆ: ಗೆಲುವಿನ ಸಂಭ್ರಮಾಚರಣೆ ವೇಳೆ ಅಗ್ನಿ ದುರಂತ

ಮುಂಬೈ: ಹಲವು ಸ್ವತಂತ್ರ ಅಭ್ಯರ್ಥಿಗಳು ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಸಂಭ್ರಮಾಚರಣೆ ವೇಳೆ ಸಂಭವಿಸಿದ ದುರಂತದಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಆಗ್ನಿ ಆಕಸ್ಮಿಕಕ್ಕೆ ಸಿಲುಕಿದ ಘಟನೆ ಮಹಾಗಾಂವ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ

ಚಂದಗಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಸ್ವತಂತ್ರ ಅಭ್ಯರ್ಥಿ ಶಿವಾಜಿ ಪಾಟೀಲ್ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಅವರ ಮೇಲೆ ಗುಲಾಲ್ (ಬಣ್ಣ) ಸುರಿದಿದ್ದು ಈ ವೇಳೆ ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡ ದುರ್ಘಟನೆ ನಡೆದಿದೆ.

ಈ ಬೆಂಕಿ ಅವಘಡದಲ್ಲಿ ಅಭ್ಯರ್ಥಿ ಶಿವಾಜಿ ಪಾಟೀಲ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸಂಭ್ರಮಾಚರಣೆ ವೇಳೆ ಕೆಲ ಮಹಿಳೆಯರು ಶಿವಾಜಿ ಪಾಟೀಲ್‌ ಆರತಿ ಮಾಡುತ್ತಿದ್ದ ವೇಳೆ ಜೆಸಿಬಿ ಮೂಲಕ ಅಭಿಮಾನಿಗಳು ಅವರ ಮೇಲೆ ಗುಲಾಲ್ ಸುರಿದಿದ್ದು, ಬೆಂಕಿಗೆ ಬಣ್ಣ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಭ್ಯರ್ಥಿ ಶಿವಾಜಿ ಪಾಟೀಲ್, ಕೆಲ ಮಹಿಳೆಯರು ಮತ್ತು ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಲಿಂಗಾಯತರು ಹೋರಾಡಿದರೆ ಮಾತ್ರ ಪ್ರತ್ಯೇಕ ಧರ್ಮದ ಸ್ಥಾನ: ನಾಗಮೋಹನದಾಸ

ಮಹಿಳೆಯರು ಅವರ ‘ಆರತಿ’ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಥಾಲಿಯ ಮೇಲೆ ದೊಡ್ಡ ಪ್ರಮಾಣದ ಗುಲಾಲ್ ಸುರಿದು ಬೆಂಕಿ ಹೊತ್ತಿಕೊಂಡಿತು. ಹಲವಾರು ಮಹಿಳೆಯರೂ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣ ಪುಟ್ಟ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.

ಅಂದಹಾಗೆ ಚಂದಗಡ್ ಕ್ಷೇತ್ರವು ಕೊಲಾಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಈ ಕ್ಷೇತ್ರದಿಂದ ಶಿವಾಜಿ ಪಾಟೀಲ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ರಾಜೇಶ್ ಪಾಟೀಲ್ ಅವರನ್ನು 24,134 ಮತಗಳಿಂದ ಸೋಲಿಸಿದ್ದಾರೆ.

ಇದನ್ನೂ ನೋಡಿ: ಋತ್ವಿಕ್ ಕುಮಾರ್ ಘಟಕ್100- ಚಲನಚಿತ್ರೋದ್ಯಮಕ್ಕೆ ವಾಸ್ತವಿಕತೆ ಮತ್ತು ಸಾಮಾಜಿಕ ರಾಜಕೀಯ ದೃಷ್ಟಿಕೋನದ ಪ್ರೇರಣೆ

Donate Janashakthi Media

Leave a Reply

Your email address will not be published. Required fields are marked *