ಮಂಗಳೂರು: ಫ್ಯಾಷನ್‌ಗೆಂದು ಯುವಕ ಧರಿಸಿ ಬಂದಿದ್ದ ಟೋರ್ನ್ ಜೀನ್ಸ್ ಪ್ಯಾಂಟ್‌ಗೆ ಪುಂಡರು ಡಬ್ಬಣದಿಂದ ಹೊಲಿಗೆ ಹಾಕಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಾರುಕಟ್ಟೆಯಲ್ಲಿ ನಡೆದಿದ್ದು, ಇದರಿಂದ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಾರುಕಟ್ಟೆಗೆ ಟೋರ್ನ್ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಯುವಕನ ಪ್ಯಾಂಟಿಗೆ ಪುಂಡರು ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ. ಪುಂಡರು ಪ್ಯಾಂಟಿಗೆ ಹೊಲಿಗೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಸ್ನೇಹಿತನ ವಿವಾಹಕ್ಕೆ ತೆರಳಿದ್ದ ಯುವಕ: ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತ
ಯುವಕನೊಬ್ಬ ವಿನೂತನ ಶೈಲಿಯ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಾಗ ಮೂರು ಜನರ ಪುಂಡರ ಗುಂಪು ಆತನನ್ನು ತಡೆದು ನಿಲ್ಲಿಸಿದ್ದಲ್ಲದೇ, ಆತನ ಎರಡೂ ಕೈಗಳನ್ನು ಬಲವಂತವಾಗಿ ಹಿಡಿದು ಪ್ಯಾಂಟಿಗೆ ಗೋಣಿಚೀಲದ ಸೂಜಿಯಿಂದ ಹೊಲಿಗೆ ಹಾಕಿ, ಅದರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. pic.twitter.com/f7SEaxR3qL
— Irshad Venur ಇರ್ಷಾದ್ ವೇಣೂರು (@muhammadirshad6) November 22, 2024
ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ಮುಹಮ್ಮದ್ ಹಾಯಿಫ್ ಎಂಬವರ ಪುತ್ರ ಶಾಹಿಲ್ (21) ಗುರುವಾರ ಮಧ್ಯಾಹ್ನ ಬೆಳ್ತಂಗಡಿ ನಗರದಲ್ಲಿರುವ ಸಂತೆಕಟ್ಟೆ ಮಾರುಕಟ್ಟೆಗೆ ವಿನೂತನ ಶೈಲಿಯ (ಹರಿದ ಜೀನ್ಸ್) ಪ್ಯಾಂಟ್ ಧರಿಸಿ ಬಂದಿದ್ದನು. ಈ ವೇಳೆ, ಮಾರುಕಟ್ಟೆಯಲ್ಲಿದ್ದ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ ಶಬೀರ್, ಅನೀಶ್ ಪಣಕಜೆ, ಬಾಬ್ ಜಾನ್ ಸಾಹೇಬ್, ಶಾಹಿಲ್‌ನನ್ನು ಅಡ್ಡ ಹಾಕಿದ್ದಾರೆ. ಬಳಿಕ ಶಾಹಿಲ್ ಅವರ ಎರಡೂ ಕೈಗಳನ್ನು ಲಾಕ್ ಮಾಡಿದ್ದಾರೆ. ನಂತರ, ಶಾಹಿಲ್ ಪ್ಯಾಂಟಿಗೆ ಡಬ್ಬಣದಿಂದ ಹೊಲಿಗೆ ಹಾಕಿದ್ದಾರೆ.
ಹೊಲಿಗೆ ಹಾಕುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದ ಮನನೊಂದ ಶಾಹಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಹಿಲ್ ಜೀವನ್ಮರಣ ಹೋರಾಟ ನಡೆಸಿದ್ದಾನೆ.
ಇದನ್ನೂ ನೋಡಿ : ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು Janashakthi Media