ಒಂದನೇ ತರಗತಿಗೆ  4.27 ಲಕ್ಷ ಶಾಲಾಶುಲ್ಕ: ಸಾಮಾಜಿಕ ಜಾಲತಾಣಗಳಲ್ಲಿ ಹರೆದಾಡುತ್ತಿರುವ ಖಾಸಗಿ ಶಾಲೆಯ ಶುಲ್ಕ ರಸೀದಿ

ಜೈಪುರ : ದೇಶದಲ್ಲಿ ಖಾಸಗಿ ಶಾಲೆಗಳ ಆವಳಿ ಹೆಚ್ಚಾಗಿದ್ದು, ಶಾಲಾಶುಲ್ಕಾ ದಿನೇದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಎಲ್ ಕೆಜಿ ಯುಕೆಜಿಗಳಿಗೆಯೇ  ಲಕ್ಷಾಂತರ ಹಣ ಪಾವತಿಸುವಂತಾಗಿದೆ. ಇದೀಗಾ ಶಾಲೆಯೊಂದರ ಶುಲ್ಕ ರಸೀದಿಯೊಂದು ಸಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತಿದ್ದು, ಒಂದನೇ ತರಗತಿಗೆ  4.27 ಲಕ್ಷ ಶುಲ್ಕಗಳು ಕಂಡು ಜನರು ಶಾಕ್‌ ಆಗಿದ್ದಾರೆ. ಶಾಲಾಶುಲ್ಕ

ಇದೇ ವಿಷಯವನ್ನು ರಿಷಬ್ ಜೈನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಜೈನ್ ಎಂಬುವವರು ತಮ್ಮ ಮಗಳಿಗೆ 1ನೇ ತರಗತಿ ಸೇರಿಸಲು ಅಂತ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅವರು ನೀಡಿದ ಪ್ರವೇಶ ಶುಲ್ಕದ ಪಟ್ಟೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಒಂದು ವರ್ಷಕ್ಕೆ 4.27 ಲಕ್ಷ ರೂಪಾಯಿ ಫೀಸ್ ಇರುವುದನ್ನು ಕಂಡು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ : ಅರ್ಹರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ತಪ್ಪಬಾರದು: ಸಿಎಂ ಸಿದ್ದರಾಮಯ್ಯ

ಉತ್ತಮ ಶಿಕ್ಷಣ ಎಂದರೆ ಅದು ಐಶಾರಾಮಿ ಶಿಕ್ಷಣವೇ ಎಂದು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಒಂದು ವೇಳೆ ವರ್ಷಕ್ಕೆ ನಾವು 20 ಲಕ್ಷ ರೂಪಾಯಿ ದುಡಿದರು ಕೂಡ ಈ ಒಂದು ಫೀಸ್ ಭರಿಸಲು ನಮ್ಮಿಂದ ಸಾಧ್ಯವೇ. ಇದು ಭಾರತದಲ್ಲಿ ಗುಣಮಟ್ಟ ಶಿಕ್ಷಣದ ದರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಾಲಾಶುಲ್ಕ

ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೀಸ್ ಸಕರ್‌ನಲ್ಲಿ ನೊಂದಣಿ ಶುಲ್ಕ 2 ಸಾವಿರ ರೂಪಾಯಿ, ಪ್ರವೇಶ ಶುಲ್ಕ 40 ಸಾವಿರ ರೂಪಾಯಿ, ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂಪಾಯಿ ರಿಫಂಡೆಬಲ್ ಮನಿ 5 ಸಾವಿರ ರೂಪಾಯಿ, ಬಸ್ ಚಾರ್ಜ್ 1 ಲಕ್ಷ 8 ಸಾವಿರ ರೂಪಾಯಿ ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂಪಾಯಿ. ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂಪಾಯಿ ಎಂದಿದೆ. ಜೈನ್ ಅವರು ಮಾಡಿರುವ ಈ ಒಂದು ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಗಳ ಧನದಾಹಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.

ಇದನ್ನೂ ನೋಡಿ : ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *