ಬಳ್ಳಾರಿ: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ಉದಾಹರಣೆ ಅಂದರೆ, ಬಳ್ಳಾರಿಯಲ್ಲಿ ಸಾಮಾನ್ಯ ಚಾಲಕನ ಕುಟುಂಬದ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಿದ್ದು. ಈಗ ಆ ಕುಟುಂಬ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪರಿಷ್ಕರಣೆ
ರಾಜ್ಯ ಸರ್ಕಾರವು ಲಕ್ಷಾಂತರ ಮಂದಿ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುವ ನೆಪದಲ್ಲಿ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡುತ್ತಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಸರಿಸುಮಾರು 2026 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಕನ್ವರ್ಟ್ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ಗಳಿಗೆ ಅರ್ಹರಾಗಿದ್ದರೂ ಅಂಥ ಕುಟುಂಬದ ಕಾರ್ಡ್‌ಗಳನ್ನು ಎಪಿಎಲ್ ಆಗಿ ಬದಲಾಯಿಸಿದನ ಹಲವು ಉದಾಹರಣೆಗಳು ಕಂಡು ಬಂದಿವೆ.
ಒಬ್ಬ ಸಾಮಾನ್ಯ, ಚಾಲಕ ವೃತ್ತಿ ಮಾಡುವ ವ್ಯಕ್ತಿಯ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಆಗಿ ಕನ್ವರ್ಟ್ ಮಾಡಲಾಗಿದೆ. ಹೀಗಾಗಿ ಇದೀಗ ಆ ಕುಟುಂಬ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಬಳ್ಳಾರಿ ನಗರದ ಟೀಚರ್ಸ್ ಕಾಲೋನಿಯಲ್ಲಿರುವ ವರಲಕ್ಷ್ಮೀ ಎಂಬುವವರ ಬಿಪಿಎಲ್ ಕಾರ್ಡ್ ಅನ್ನು ಸರ್ಕಾರ ರದ್ದು ಮಾಡಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರಿ ಎಂದು ಆರೋಪಿಸಿ ಕಾರ್ಡ್ ರದ್ದು ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ: 2024 ನೇ ಸಾಲಿನ ದತ್ತಿ ಪ್ರಶಸ್ತಿ ಘೋಷಣೆ
ಮೂರು ಹೊತ್ತು ಊಟ ಮಾಡಲಿಕ್ಕೂ ನಮ್ಮ ಬಳಿ ಹಣ ಇಲ್ಲ. ನಾವೆಲ್ಲಿಂದ ತೆರಿಗೆ ಪಾವತಿ ಮಾಡಬೇಕು ಎಂದು ಚಾಲಕ ವೆಂಕಟೇಶ ಅಲವತ್ತುಕೊಂಡಿದ್ದಾರೆ. ಪತ್ನಿ ವರಲಕ್ಷ್ಮೀಗೆ ಬೈನ್ ಟ್ಯೂಮರ್ ಆಗಿದೆ. ಆಕೆಗೆ ಚಿಕಿತ್ಸೆ ಕೊಡಿಸಲು ಆಗದ ಪರಿಸ್ಥಿತಿ ಇದೆ. ಪತ್ನಿಗೆ ಅನಾರೋಗ್ಯ ಕಾರಣ ನಾನು ಚಾಲಕ ವೃತ್ತಿಯನ್ನು ಬಿಟ್ಟಿದ್ದೇನೆ.
ಬಿಪಿಎಲ್ ಕಾರ್ಡ್‌ನಿಂದ ಬರುವ ರೇಷನ್ ನಂಬಿ ಬದುಕುವ ಪರಿಸ್ಥಿತಿ ಇದೆ. ತೆರಿಗೆ ಪಾವತಿದಾರ ಎಂದು ಆರೋಪಿಸಿ ಬಿಪಿಎಲ್ ಕಾರ್ಡ್ ರದ್ದು ಮಾಡಿ, ಎಪಿಎಲ್ ಮಾಡಿದ್ದಾರೆ. ನಮಗೆ ಅನ್ಯಾಯ ಮಾಡಬೇಡಿ, ಅನುಕೂಲ ಇದ್ದವರಿಗೇ ಕಾರ್ಡ್ ಕೊಡುತ್ತೀರಿ, ಬಡವರ ಅನ್ನ ಕಸಿದುಕೊಳ್ಳಬೇಡಿ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಹಲವು ಕಾರಣಗಳನ್ನು ನೀಡಿ ಅನೇಕ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಕನ್ವರ್ಟ್ ಮಾಡಿದೆ. ಅರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ಕೂಡ ರದ್ದು ಮಾಡಿದ್ದು ಸಮಸ್ಯೆ ಸೃಷ್ಟಿಸಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಜತೆಗೆ, ತಪ್ಪುಗಳನ್ನು ಸರಿಪಡಿಸಿಕೊಂಡು, ಯಾರು ಅರ್ಹರೋ ಅವರಿಗೆ ಬಿಪಿಎಲ್ ಕಾರ್ಡ್‌ಗಳನ್ನು ಮರಳಿಸಬೇಕಿದೆ.
ಇದನ್ನೂ ನೋಡಿ: SCZIEF Conference| wealth is not the value of development – Says Ashsok Dhavale | AIIEA