ರಾಯಚೂರು: ಪಿಡಿಒ ಹುದ್ದೆ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಕೆಪಿಎಸ್ಸಿ ವಿರುದ್ಧ ಪ್ರತಿಭಟನೆ ನಡೆಸಿದ್ದ 12 ಜನ ಪಿಡಿಒ ಪರೀಕ್ಷಾರ್ಥಿಗಳ ವಿರುದ್ಧ ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ
ಪೊಲೀಸರು ಪ್ರಕರಣ ಸಂಬಂಧ ಪರೀಕ್ಷಾರ್ಥಿ ಕಾಶಿಪತಿ ಎಂಬಾತನನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಇನ್ನುಳಿದ ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಣಿಪುರ| ಬಿಜೆಪಿಗೆ ನೀಡಿದ ಬೆಂಬಲ ಹಿಂಪಡೆದ ನ್ಯಾಷನಲ್ ಜನತಾ ಪಕ್ಷ
ದೂರಿನಲ್ಲೇನಿದೆ?
ಸಿಂಧನೂರು ಸರ್ಕಾರಿ ಪದವಿ ಕಾಲೇಜು ಪರೀಕ್ಷಾ ಕೇಂದ್ರ ಕೊಠಡಿ ಸಂಖ್ಯೆ: 05 ರಲ್ಲಿ ಗೊಂದಲ ಸೃಷ್ಟಿಯಾಗಿ ಗಲಾಟೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ತಪ್ಪು ಭಾವಿಸಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಪರೀಕ್ಷಾ ಸಂವೀಕ್ಷಕರೊಂದಿಗೆ ವಾಗ್ವಾದ ಮಾಡಿ, ಪರೀಕ್ಷಾ ನಿಯಮಗಳ ಉಲ್ಲಂಘಿಸಿ ಪರೀಕ್ಷೆ ಬರೆಯಲು ಕುಳಿತಿದ್ದ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ.
ಇವರ ಪರೀಕ್ಷಾರ್ಥಿಗಳು ಕೊಠಡಿಗಳಿಂದ ಹೊರ ಬರುವಂತೆ ಸೂಚನೆ ನೀಡಿದ್ದಲ್ಲದೆ, ರಸ್ತೆ ಪಡೆದು ಪ್ರತಿಭಟನೆ ನಡೆಸಿದ್ದಾರೆಂದು ಆರೋಪಿಸಿ ದೂರು ನೀಡಲಾಗಿದೆ. ದೂರು ದಾಖಲು ಬಳಿಕ ಓರ್ವ ಪರೀಕ್ಷಾರ್ಥಿಯನ್ನ ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಟ್ಟಿರುವ ಪೊಲೀಸರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಹುತೇಕ ಯಾದಗಿರಿ ಜಿಲ್ಲೆಯ ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಮಕ್ಕಳ ದಿನಾಚರಣೆ | ಡಾ. ಆರ್.ವಿ.ಭಂಡಾರಿಯವರ ‘ಮುದುಕನೂ ಹುಲಿಯೂ ಮಕ್ಕಳ’ ನಾಟಕದ ಓದುJanashakthi Media