ಬೆಂಗಳೂರು| ಕೇಬಲ್ ನಿಂದ ಕಟ್ಟೆ ಹಾಕಿದ ಮಹಿಳೆಯ ನಗ್ನ ಶವ ಪತ್ತೆ

ಆನೆಕಲ್: ಬೆಂಗಳೂರಿನ ಆನೇಕಲ್‌ ಬಳಿಯ ಸರ್ಜಾಪುರದ ಕೋಟೆ ಬೀದಿ ರಸ್ತೆಯಲ್ಲಿ ಕೇಬಲ್ ನಿಂದ ಕಟ್ಟೆ ಹಾಕಿದ ಸ್ಥಿತಿಯಲ್ಲಿ ಮಹಿಳೆಯ ನಗ್ನ ಶವವೊಂದು ಪತ್ತೆಯಾಗಿದ್ದು, ಇದನ್ನು ಕಂಡ ಜನತೆ ಬೆಚ್ಚಿ ಬಿದ್ದಿದ್ದಾರೆ. ಈ ಶವ ಪತ್ತೆಯಾಗಿದ್ದು ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದಿರುವ ಶಂಕ ವ್ಯಕ್ತವಾಗಿದೆ. ಕೇಬಲ್

ಯುವತಿಯ ನಗ್ನ ದೇಹ ಪತ್ತೆಯಾಗಿರುವುದರಿಂದ ರೇಪ್ ಅಂಡ್ ಮರ್ಡರ್ ಆಗಿರುವ ಸಾಧ್ಯತೆಯೂ ದಟ್ಟವಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಈ ಬಡಾವಣೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಪೌರಕಾರ್ಮಿಕಳೊಬ್ಬಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ‘“ಬುಲ್‍ಡೋಜರ್ ನ್ಯಾಯ”ದ  ವಿರುದ್ಧ ತೀರ್ಪು: ಬೃಂದಾ ಕಾರಟ್‍ ಸ್ವಾಗತ

ಘಟನೆ ಕುರಿತು ಮಾತನಾಡಿದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಆಫೈಲ್, ನಮ್ಮ ಊರಿನ ಅಕ್ಕಪಕ್ಕದಲ್ಲಿ ಯಾರು ಕಾಣೆಯಾಗಿಲ್ಲ. ಉತ್ತರ ಭಾರತದವರು ಈ ಕೃತಿಯ ಎಸ್ ಆಗಿ ಹೆಣವನ್ನು ಇಲ್ಲಿ ಹಾಕಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್‌ ಕುಮಾರ್ ಸರ್ಜಾಪುರ ಇನ್ಸ್‌ಕರ್ ನವೀನ್ ಕುಮಾರ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ನೋಡಿ: ದೇಶದಲ್ಲಿ ಯಾರೂ ಸಂತೋಷವಾಗಿಲ್ಲ: ನಟ ಪ್ರಕಾಶ್ ರೈ Janashakthi Media

Donate Janashakthi Media

Leave a Reply

Your email address will not be published. Required fields are marked *