ಮ್ಯಾಟ್ರಿಮೋನಿಯಲ್ಲಿ ಯವತಿಯರನ್ನ ವಂಚನೆ ಮಾಡಿದ ಆರೋಪಿ ಬಂಧನ

ದಾವಣಗೆರೆ: ಯುವಜನರು ಹಾಗೂ ಶಿಕ್ಷಿತರೇ ಹೆಚ್ಚಾಗಿ ಇತ್ತೀಚೆಗೆ ವಂಚನೆ ಹಾಗೂ ಹಗರಣಗಳಗೆ ಬಲಿಯಾಗುತ್ತಿದ್ದಾರೆ. ಮದುವೆಗೆ ಆನ್‌ಲೈನ್ ಆಯಪ್‌ಗಳಲ್ಲಿ ಹುಡುಗನನ್ನ ಹುಡುಕುವವರು ಅಥವಾ ಕೆಲಸ ಹುಡುಕುವ ವಿಚಾರದಲ್ಲಿ ಹುಡುಗಿಯರು ಎಚ್ಚರವಾಗಿರಬೇಕಾದ ಕಾಲವಿದು. ಯವತಿ

ಇಲ್ಲೊಬ್ಬ ಕಿರಾತಕ ಕೆಲಸ ಕೊಡಿಸುವುದಾಗಿ ಕನ್ನಡ ಮ್ಯಾಟ್ರಿಮೋನಿಯಲ್ಲಿ ಯವತಿಯರನ್ನ ಪರಿಚಯಿಸಿಕೊಂಡು ನಂಬಿಸಿ ವಂಚನೆ ಮಾಡಿ, ತಲೆಮರೆಸಿಕೊಂಡಿದ್ದ ಇದೀಗ ಆರೆಸ್ಟ್ ಆಗಿದ್ದಾನೆ.

ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಾಧು ಅಲಿಯಾಸ್ ಮಧು ಬಂಧಿತ ಆರೋಪಿ. ಈತ ಬರೋಬ್ಬರಿ 8 ಯವತಿರಿಗೆ ವಂಚಿಸಿದ್ದನು. ದಾವಣಗೆರೆ-ಹರಿಹರ-ಮಂಡ್ಯ-ಚಿಕ್ಕಮಗಳೂರು, ಬೆಂಗಳೂರು ಸೇರಿ 8 ಕಡೆ ಮಧು ಮೇಲೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮುನಿರತ್ನ ಹನಿಟ್ರಾಪ್‌ ಪ್ರಕರಣ: ಇನ್ಸ್ಪೆಕ್ಟರ್ ಬಂಧನ

ಕನ್ನಡ ಮಾಟ್ರಿಮೋನಿಯಲ್ಲಿ ಮದುವೆ ಆಗ್ತಿ, ಅಂತ ನಂಬಿಸಿ ಅವರಿಂದ ಹಣ ಪಡೆದಿದ್ದ ಮಧು ಕೆಲವರಿಗೆ ನೌಕರಿ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದಾನೆ. 2019 ರಿಂದ ಪೊಲೀಸರಿಗೆ ಚಳ್ಳ ಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದನು. ಇದೀಗ ಸಿಇಎನ್ ದಾವಣಗೆರೆ ಪೊಲೀಸರು ಆರೋಪಿ ಮಧುವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಮಧು, ದಾವಣಗೆರೆ ಯುವತಿಯಿಂದ 21 ಲಕ್ಷ ಹಣ ಪೀಕಿದ್ದನು. ಹೀಗೆ 8 ವಿವಿಧ ಪ್ರಕರಣಗಳಲ್ಲಿ ಒಟ್ಟು 62.83 ಲಕ್ಷ ವಂಚನೆ ಮಾಡಿದ್ದಾನೆ ಎನ್ನುವ ಆರೋಪ ಈತನ ಮೇಲಿದೆ.

ಇದನ್ನೂ ನೋಡಿ: ದೇವೇಗೌಡ್ರೆ.. ನಿಮ್ಮನ್ನು ಸಿಎಂ ಮಾಡಿದ್ದು ಯಾರು? ಸಿದ್ದರಾಮಯ್ಯ ಪ್ರಶ್ನೆ Janashakthi Media

Donate Janashakthi Media

Leave a Reply

Your email address will not be published. Required fields are marked *