ಸಹಕಾರಿ ಸಾಲದ ಕಡಿತ ಮತ್ತು ಬಡ್ಡಿ ಹೆಚ್ಚಳ, ರೈತಾಪಿ ಕೃಷಿ ನಾಶದ ಮತ್ತೊಂದು ಹೆಜ್ಜೆ – ಸಿಪಿಐಎಂ

ಬೆಂಗಳೂರು: ನಬಾರ್ಡ್ ಮೂಲಕ ಸಹಕಾರಿ ರಂಗಕ್ಕೆ ನೀಡುತ್ತಿದ್ದ ಸಾಲವನ್ನು ಕಡಿತ ಮಾಡಿರುವುದಲ್ಲದೆ ಬಡ್ಡಿ ದರವನ್ನು ಶೇ 1 ರಿಂದ ಶೇ 4.5 ಕ್ಕೆ ಹೆಚ್ಚಿಸಿರುವುದು ಮತ್ತು ಹೆಚ್ಚುವರಿ ಸಾಲಕ್ಕೆ ಬಡ್ಡಿ ದರ ಶೇ 8.5 ಹೆಚ್ಚಿಸಲು ಕ್ರಮ ವಹಿಸಿರುವುದು, ಈ ಎಲ್ಲವು ಒಟ್ಟಾಗಿ ರೈತಾಪಿ ಕೃಷಿ ನಾಶಕ್ಕೆ ಇಡಲಾದ ಮತ್ತೊಂದು ಹೆಜ್ಜೆಯಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ. ಸಹಕಾರಿ

ಕೇಂದ್ರ ಸರಕಾರ ಈ ಕೂಡಲೆ ರೈತರು ಹಾಗು ರೈತಾಪಿ ಕೃಷಿಯ ತೀವ್ರ ವಿರೋಧಿಯಾದ ಈ ದುರ್ನಡೆಗಳನ್ನು ತಡೆಯುವಂತೆ ಸಿಪಿಐಎಂ ಬಲವಾಗಿ ಆಗ್ರಹಿಸುತ್ತದೆ.
ಇದರಿಂದ ರಾಜ್ಯದ ಬಹುತೇಕ ರೈತರು ತೀವ್ರ ತೊಂದರೆಗೊಳಗಾಗಲಿದ್ದಾರೆ ಇದೇ ಕಾರಣದಿಂದ ರೈತರ ಸರಣಿ ಆತ್ಮಹತ್ಯೆಗಳು ಘಟಿಸುವ ಎಲ್ಲ ಸಂಭವಗಳಿವೆಯೆಂದು ಸಿಪಿಐಎಂ ಆತಂಕ ವ್ಯಕ್ತ ಪಡಿಸುತ್ತದೆ ಎಂದರು.

ಇದನ್ನೂ ಓದಿ: ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!

ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳ ಕಾಲ ಬರಗಾಲವನ್ನು ಈ ವರ್ಷ ಆರಂಭದಲ್ಲಿಯೆ ಅತಿವೃಷ್ಟಿಯ ಹಾನಿಯನ್ನು ಅನುಭವಿಸಿದ ರೈತರ ಸಾಲ ಮನ್ನಾ ಮಾಡಬೇಕಾಗಿದ್ದ ಮತ್ತು ಹೆಚ್ಚುವರಿ ಸಾಲ ಒದಗಿಸಲು ಕ್ರಮ ವಹಿಸಬೇಕಾಗಿದ್ದ ಕೇಂದ್ರ ಸರಕಾರ, ಸಾಲ ಮನ್ನಾದ ಬಗ್ಗೆ ಮೌನವಾಗಿದೆ ಮಾತ್ರವಲ್ಲಾ ಅಗತ್ಯದಷ್ಠು ಬೆಳೆ ಪರಿಹಾರವನ್ನು ಒದಗಿಸಲಿಲ್ಲ. ಈಗ ನೋಡಿದರೆ, ಅನ್ನದಾತರ ಮೇಲೆ ಈ ತೆರನಾದ ಧಾಳಿಗೆ ಕ್ರಮವಹಿಸಿರುವುದು ಅಕ್ಷಮ್ಯವಾಗಿದೆ.

ತಕ್ಷಣವೇ, ರೈತರ ಸಾಲ ಮನ್ನಾ ಮಾಡಲು, ಕಳೆದ ಸಾಲಿನ ಬೆಳೆನಷ್ಠದ ಬಾಕಿ ಹಣ ಬಿಡುಗಡೆ ಮಾಡಲು ಮತ್ತು ನಬಾರ್ಡನ ಈ ರೈತ ವಿರೋದಿ ನಿಲುಮೆ ವಾಪಾಸು ಪಡೆದು ಬಡ್ಡಿ ರಹಿತವಾಗಿ ಎರಡು ಪಟ್ಟು ಸಾಲ ಒದಗಿಸಲು ಅಗತ್ಯ ಕ್ರಮವಹಿಸುವಂತೆ ಪ್ರಧಾನ ಮಂತ್ರಿಗಳನ್ನು ಸಿಪಿಐಎಂ ಆಗ್ರಹಿಸುತ್ತದೆ.

 

ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media

Donate Janashakthi Media

Leave a Reply

Your email address will not be published. Required fields are marked *