ಒಳಮೀಸಲಾತಿಗಾಗಿ ಏಕ ಸದಸ್ಯ ಆಯೋಗ ನೇಮಕ – ಸಿಪಿಐಎಂ ಸ್ವಾಗತ

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಅಗತ್ಯ ಶಿಫಾರಸುಗಳೊಂದಿಗೆ ಪರಿಶೀಲನಾ ವರದಿ ಪಡೆಯಲು ರಾಜ್ಯ ಸರಕಾರ ಏಕ ಸದಸ್ಯ ಆಯೋಗವನ್ನು ರಚಿಸಿರುವ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ ) ರಾಜ್ಯ ಸಮಿತಿಯು ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿ ಯು.ಬಸವರಾಜ ಹೇಳಿದರು. ಸದಸ್ಯ

ಕಾಂತರಾಜ್ ವರದಿಯ ಕುರಿತ ಸರಕಾರದ ನಿಲುಮೆ ಸ್ಪಷ್ಟ ಪಡಿಸಿ. ಆದರೆ ಇದಕ್ಕೆ ಜಾತಿ ಜನಗಣತಿಯು ಅಗತ್ಯವಿದೆ. ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾಗಿದ್ದ ಶ್ರೀ ಹೆಚ್ ಕಾಂತರಾಜ್ ರವರ ಅವಧಿ 2015 ರಲ್ಲಿ ರಾಜ್ಯದಲ್ಲಿ ನಡೆಸಲಾದ ಸಾಮಾಜಿಕ ಹಾಗು ಶೈಕ್ಷಣಿಕ ಸಮೀಕ್ಷೆ ( ಜಾತಿ ಜನಗಣತಿ ) ಕುರಿತಂತೆ ರಾಜ್ಯ ಸರಕಾರ ಈಗಲೂ ತನ್ನ ಅಭಿಪ್ರಾಯವನ್ನು ತಿಳಿಸಿ ಸಾರ್ವಜನಿಕರೆದಿರು ಪ್ರಕಟಿಸಿದರುವುದು ಖೇದಕರವಾಗಿದೆ! ಈ ಕೂಡಲೆ ಆಕುರಿತು ರಾಜ್ಯ ಸರಕಾರ ತನ್ನ ನಿಲುಮೆ ಏನೆಂಬುದನ್ನು ಬಹಿರಂಗ ಪಡಿಸಲು ಸಿಪಿಐಎಂ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ. ಸದಸ್ಯ

ಮೀಸಲಾತಿ ವಿರೋದಿ ಸಾರ್ವಜನಿಕರಂಗದ ಖಾಸಗೀಕರಣದ ನಡೆ ನಿಲ್ಲಿಸಿ

ಒಕ್ಕೂಟ ಅಥವಾ ಕೇಂದ್ರ ಸರಕಾರ ಬಡವರ ಹಾಗು ಮಹಿಳೆಯರ ವಿರೋಧಿಯಾದ ಶಿಕ್ಷಣದ ಖಾಸಗೀಕರಣಕ್ಕೆ ಪೂರಕವಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಒತ್ತಾಯಿಸುತ್ತಿದೆ. ಕರ್ನಾಟಕ ಸರಕಾರ ಅದು ಜಾರಿಯಾಗದಂತೆ ತಡೆಯಲು ಸ್ಪಷ್ಟ ನಿಲುಮೆ ತಾಳದಿರುವುದು ಮತ್ತು ವಿದ್ಯಾರ್ಥಿಗಳ ಕೊರತೆಯೆಂದು ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ನಡೆದಿದೆ. ಇದು ಮುಂಬರುವ ದಿನಗಳಲ್ಲಿ ದುರ್ಬಲ ಸಮುದಾಯಗಳಿಗೆ ಶಿಕ್ಷಣ ಸಿಗದಂತೆ ಮಾಡಲಿದೆ ಎಂದರು.

ಇದನ್ನೂ ಓದಿ: ಮುಡಾ ಹಗರಣ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್

ಅದೇ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರಗಳು ದೇಶ ಮತ್ತು ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಹಾಗು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಹೊರ ಹಾಗು ಒಳ ಗುತ್ತಿಗೆಗೆ ಕ್ರಮವಹಿಸುವ ಮೂಲಕ ಮತ್ತು ಸಾರ್ವಜನಿಕ ರಂಗದ ಉದ್ದಿಮೆಗಳ ಖಾಸಗೀಕರಣದ ಮೂಲಕ ಇರುವ ಮೀಸಲಾತಿಯ ಅವಕಾಶಗಳನ್ನು ಸಂಕುಚಿತಗೊಳಿಸುತ್ತಾ ಇಲ್ಲದಂತೆ ಮಾಡಲಾಗುತ್ತಿದೆ. ಈ ಕುರಿತಂತೆ ರಾಜ್ಯ ಸರಕಾರ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿಗಳ ಪ್ರತಿಪಾದಿಸುತ್ತಾ ಕೇಂದ್ರದ ಬೆಂಬಲಕ್ಕೆ ನಿಂತಿರುವುದು ಸ್ಪಷ್ಠವಿದೆ ಎಂದು ಹೇಳಿದರು.

ಹೀಗಾಗಿ, ರಾಜ್ಯ ಸರಕಾರ ಒಂದೆಡೆ ಮೀಸಲಾತಿಯೊಳಗೆ ಒಳ ಮೀಸಲಾತಿಗೆ ಕ್ರಮ ವಹಿಸುವ ಮೂಲಕ ಒಂದು ಕಡೆ ತಾನು ಮೀಸಲಾತಿಯ ಪರವೆಂದು ತೋರಿಸಿಕೊಳ್ಳುವಾಗಲೆ ಮತ್ತೊಂದು ಕಡೆ ಮೀಸಲಾತಿಯ ಅವಕಾಶಗಳನ್ನು ನಿರಂತರ ಹಿಂಡಿ ಸಂಕುಚಿತಗೊಳಿಸುವ ಮತ್ತು ಇಲ್ಲದಂತೆ ಮಾಡುವ ಸಾರ್ವಜನಿಕ ರಂಗದ ಸಂಸ್ಥೆಗಳು ಮತ್ತು ಉದ್ದಿಮೆಗಳ ಖಾಸಗೀಕರಣಕ್ಕೆ ಪೂರ್ಣ ಸಹಮತವನ್ನು ತೋರುತ್ತಾ ತಾನು ಮೀಸಲಾತಿ ವಿರೋದಿಯೆಂದು ಸಾರುತ್ತಿದೆ.

ರಾಜ್ಯ ಸರಕಾರದ ಈ ದ್ವಂದ್ವ ನಡೆಯನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಸಾರ್ವಜನಿಕ ರಂಗದ ಸಂಸ್ಥೆಗಳ ಮತ್ತು ಉದ್ದಿಮೆಗಳ ಖಾಸಗೀಕರಣದ ದುರ್ನಡೆಯನ್ನು ನಿಲ್ಲಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ ಎಂದರು.

ಇದನ್ನೂ ನೋಡಿ: ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ

Donate Janashakthi Media

Leave a Reply

Your email address will not be published. Required fields are marked *