ಸೀತಾರಾಮ್ ಯೆಚೂರಿ
ಕೊನೆಗೂ ಬಿಡುಗಡೆ ಮಾಡಿರುವ ಬಿಜೆಪಿ ಪ್ರಣಾಳಿಕೆ ಆಡಂಬರದ ಪದಗುಚ್ಚಗಳಿಂದ ತುಂಬಿ ತುಳುಕುತ್ತಿದೆ, ಆದರೆ ಇದರಲ್ಲಿ ಪ್ರತಿಪಾದಿಸಿರುವ ಗುರಿಸಾಧನೆಯ ಕ್ರಮಗಳು ಮಾತ್ರ ಸೊನ್ನೆ. ಸ್ಲೋಗನ್ಕೋರತನದ ನಡುವೆ ಎರಡು ಅಂಶಗಳಷ್ಟೇ ಮೂಡಿ ಬರುತ್ತವೆ- ಮೊದಲನೆಯದ್ದು, ಕಟ್ಟಾ ಹಿಂದುತ್ವ ಅಜೆಂಡಾ, ಎರಡನೆಯದ್ದು, ಅದರ ಆಥರ್ಿಕ ಅಜೆಂಡಾ, ಈಗಾಗಲೇ ಎರಡು ಭಾರತಗಳನ್ನು ಸೃಷ್ಟಿಸಿರುವ ಧೋರಣೆಗಳನ್ನು ಬಲಪಡಿಸುವ ಆಥರ್ಿಕ ಕಣ್ಣೋಟ.
ಉಳಿದವೆಲ್ಲ ಎಂದಿನಂತೆ ಇಬ್ಬಂದಿತನದ ಮಾತುಗಳೇ- ನಿಜವಾದ ಮತ್ತು ಘೋಷಿತ ಆಶಯಗಳು ಸಂಪೂರ್ಣ ಭಿನ್ನ. ಭಾರತವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಬದಲು, ಅದರ ‘ಮುನ್ನುಡಿ’ಯಲ್ಲಿ ಇಣುಕುತ್ತಿದೆ ಅದರ ನಿಜವಾದ ಅಜೆಂಡಾ-ಭಾರತೀಯ ಮಾನಸವನ್ನು ಚಾರಿತ್ರಿಕವಾಗಿ ಹಿಂದಕ್ಕೊಯ್ಯುವ ಅದರ ‘ಗುರೂಜಿ’ಯ ಸೈದ್ಧಾಂತಿಕ ಯೋಜನೆ.
ಬಿಜೆಪಿ ಕೊನೆಗೂ 16ನೇ ಸಾರ್ವತ್ರಿಕ ಚುನಾವಣೆಗಳಿಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕಾಪರ್ೊರೇಟ್ ಭಾರತ ಮತ್ತು ಅದರ ಕಾಪರ್ೊರೇಟ್ ಮಾಧ್ಯಮಗಳು ಈ ಪಕ್ಷ ಇನ್ನೇನು ಮುಂದಿನ ಸರಕಾರವನ್ನು ರಚಿಸಲು ಚುನಾವಣೆಯನ್ನು ಗೆದ್ದೇ ಬಿಟ್ಟಿದೆ, ಮುಂದಿನ ಸರಕಾರವನ್ನು ಇದೇ ಪಕ್ಷ ರಚಿಸಲಿದೆ ಎಂದು ಡಂಗುರ ಸಾರುತ್ತಿದ್ದರೂ, ಆ ಪಕ್ಷ ಮಾತ್ರ ತಾನು ದೇಶವನ್ನು ಭವಿಷ್ಯದತ್ತ ಹೇಗೆ ಒಯ್ಯುತ್ತೇನೆ ಎಂಬ ಮಾರ್ಗಸೂಚಿಯನ್ನೇ ಮುಂದಿಟ್ಟಿಲ್ಲವಲ್ಲ ಎಂಬ ಸಾರ್ವಜನಿಕ ಹುಯಿಲೆದ್ದಿತ್ತು. ಅದರಿಂದಾಗಿ ಇಷ್ಟವಿಲ್ಲದಿದ್ದರೂ ಅದೀಗ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮತದಾನ ಪ್ರಕ್ರಿಯೆ ಆರಂಭವಾದ ಮೇಲೆಯೇ ಅದರ ಪ್ರಣಾಳಿಕೆ ಬಿಡುಗಡೆ ಕಂಡಿರುವುದು ಅಭೂತಪೂರ್ವ ಸಂಗತಿ. ಭಾರತದ ಚುನಾವಣಾ ಇತಿಹಾಸದಲ್ಲಿ ಇಂತಹ ಒಂದು ಉದಾಹರಣೆಯನ್ನು ನೆನಪಿಸಿಕೊಳ್ಳುವುದು ಸಾಧ್ಯವಿಲ್ಲ. ಇದು ಕೇವಲ ಸಾರ್ವಜನಿಕ ತೋ ರಿಕೆಗಾಗಿ ಎಂಬುದು ಸ್ಪಷ್ಟ. ಅದರ ನಿಜವಾದ ಅಜೆಂಡಾ ಬೇರಲ್ಲೋ ಇದೆ, ಅದನ್ನು ಸಾರ್ವಜನಿಕ ತಪಾಸಣೆಗೆ ತೆರೆದಿಟ್ಟಿಲ್ಲ.
ಅದೇನೇ ಇರಲಿ, ಈ ಪ್ರಣಾಳಿಕೆ ಆಡಂಬರದ ಪದಗುಚ್ಚಗಳಿಂದ ತುಂಬಿ ತುಳುಕುತ್ತಿದೆ, ಆದರೆ ಇದರಲ್ಲಿ ಪ್ರತಿಪಾದಿಸಿರುವ ಗುರಿಸಾಧನೆಯ ಕ್ರಮಗಳು ಮಾತ್ರ ಸೊನ್ನೆ. ಸ್ಲೋಗನ್ಕೋರತನದ ನಡುವೆ ಎರಡು ಅಂಶಗಳಷ್ಟೇ ಮೂಡಿ ಬರುತ್ತವೆ- ಮೊದಲನೆಯದ್ದು, ಕಟ್ಟಾ ಹಿಂದುತ್ವ ಅಜೆಂಡಾ. ವಿವಾದಿತ ನಿವೇಶನದಲ್ಲೇ ರಾಮ ದೇವಸ್ಥಾನ ಕಟ್ಟುವ ಆಶ್ವಾಸನೆ ಮತ್ತೆ ಇದೆ. ಆದರೆ ಈ ಬಾರಿ ಅದನ್ನು ‘ಸಂವಿಧಾನದ ಚೌಕಟ್ಟಿನ ಒಳಗೆ’ ಮಾಡಲಾಗುವುದಂತೆ!
ಭ್ರಮೆ ಸೃಷ್ಟಿಸುವ ಕಾಪರ್ೊರೇಟ್ ನಿರೀಕ್ಷೆಗಳು
ಇಲ್ಲಿ ಬಾಬ್ರಿ ಮಸೀದಿಯ ಧ್ವಂಸ ಸಂವಿಧಾನದ ಚೌಕಟ್ಟಿನ ಒಳಗೇ ನಡೆದಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಆ ಸಮಯದಲ್ಲಿ ಅದು ಭಾರತೀಯ ಸಂವಿಧಾನವನ್ನು ಭಂಡತನದಿಂದ ಉಲ್ಲಂಘಿಸಿತ್ತು, ಬಾಬ್ರಿ ಮಸೀದಿಯನ್ನು ರಕ್ಷಿಸಲು ಬೇಕಾಗಿರುವುದನ್ನೆಲ್ಲ ಮಾಡುವುದಾಗಿ ಆಗಿನ ಅದರ ಮುಖ್ಯಮಂತ್ರಿಗಳು ದೇಶದ ಸವರ್ೋಚ್ಚ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನೂ ಮುಲಾಜಿಲ್ಲದೆ ಮುರಿಯಲಾಗಿತ್ತು. ಅಲ್ಲದೆ, ನಡುವೆ ಬಿಜೆಪಿ ತ್ಯಜಿಸಿ ಹೋಗಿ ಈಗ ಮರಳಿರುವ ಆ ಮುಖ್ಯಮಂತ್ರಿ ಯಾವುದೇ ವೃತ್ತಿಪರ ಕಾಂಟ್ರಾಕ್ಟರನಿಗೆ ಹಲವು ತಿಂಗಳುಗಳೇ ತಗುಲಬಹುದಾಗಿದ್ದ ಧ್ವಂಸಕ್ರಿಯೆಯನ್ನು ತಮ್ಮ ‘ಕರಸೇವಕರು’ ಐದೇ ಗಂಟೆಗಳಲ್ಲಿ ಮಾಡಿ ಮುಗಿಸಿದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಇದಕ್ಕೆ ಕಾಪರ್ೊರೇಟ್ ಮಾಧ್ಯಮಗಳು, ಕಟ್ಟಾ ಹಿಂದುತ್ವ ಅಜೆಂಡಾ ಅವರ ಪ್ರಣಾಳಿಕೆಯ ಪುಟ 41 ಮತ್ತು 42ರಲ್ಲಿ ಇರುವುದೇ ಬಿಜೆಪಿಯ ಅಜೆಂಡಾದಲ್ಲಿ ಈ ಪ್ರಶ್ನೆಯ ಮಹತ್ವ ಇಳಿದಿದೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಿವೆ. ಇಂತಹ ಭ್ರಮೆಯನ್ನು ಅರಗಿಸಿಕೊಳ್ಳುವುದು ಬಿಜೆಪಿಯ ಅತ್ಯಂತ ನಿಷ್ಟ ಬೆಂಬಲಿಗನಿಗೂ ಕಷ್ಟವಾಗಬಹುದು. ಮುಂದೆ ಬರಬಹುದಾದ ಒಂದು ಬಿಜೆಪಿ ಸರಕಾರ ತಮಗೆ ಯಾವುದೇ ಲಂಗು-ಲಗಾಮಿಲ್ಲದೆ ಸೂಪರ್ ಲಾಭಗಳನ್ನು ಪೇರಿಸಿಕೊಳ್ಳಲು ಬಿಡಬಹುದು ಎಂದು ಕಾತುರದಿಂದ ಕಾಯುತ್ತಿರುವ ಅವರು ವಾಸ್ತವತೆಯನ್ನು ಕಾಣಲು ನಿರಾಕರಿಸುತ್ತಿದ್ದಾರೆ, ಜನರನ್ನು ದಾರಿ ತಪ್ಪಿಸಲು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದು ಆರೆಸ್ಸೆಸ್/ಬಿಜೆಪಿಯ ಭವಿಷ್ಯದ ಗುರಿ ಎಂಬುದನ್ನು ಮಬ್ಬುಗೊಳಿಸುತ್ತಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಮಾತನ್ನೂ ಪುನರುಚ್ಚರಿಸಲಾಗಿದೆ, ಹಾಗೆಯೇ ಸಂವಿಧಾನದ 370ನೇ ಕಲಮನ್ನು ರದ್ದು ಮಾಡಬೇಕೆನ್ನುವ ಹಿಂದುತ್ವದ ಮತ್ತೊಂದು ಬೇಡಿಕೆಯನ್ನೂ ಪುನರುಚ್ಚರಿಸಿದೆ. 1996ರಿಂದಲೂ ಅದರ ಪ್ರಣಾಳಿಕೆಯಲ್ಲಿ ಇವು ಇದ್ದೇ ಇದ್ದವು. 1999ರ ರಲ್ಲಿ ಮಾತ್ರ ಬಿಜೆಪಿ ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿರಲಿಲ್ಲವಾದ್ದರಿಂದ ಈ ಆಶ್ವಾಸನೆಗಳಿರಲಿಲ್ಲ. ಹೀಗೆ ದಾಖಲೆಗಳನ್ನು ಸರಿಪಡಿಸಲಾಗಿದೆ. ಬಿಜೆಪಿ ಇಂದಿಗೂ ಅದೇ ಬಿಜೆಪಿ. ಆರೆಸ್ಸೆಸ್ನ ರಾಜಕೀಯ ಅಂಗವಾಗಿರುವುದರಿಂದ ಅದು ಬೇರೆ ಆಗಲು ಸಾಧ್ಯವೂ ಇಲ್ಲ. ಕೋಮುವಾದಿ ಧ್ರುವೀಕರಣದ ವಿಷವನ್ನು ಆಳವಾಗಿ ಹರಡಿಸಲಾಗುವುದು ಮತ್ತು ‘ಹಿಂದೂ ವೋಟ್ ಬ್ಯಾಂಕ್ನ್ನು ಕ್ರೋಡೀಕರಿಸುವ ಪ್ರಯತ್ನ ಮಾಡಲಾಗುವುದು ಎಂಬುದರ ಒಂದು ಸ್ಪಷ್ಟ ಘೋಷಣೆ ಇಲ್ಲಿದೆ.
ಎರಡನೆಯದ್ದು, ಅದರ ಆಥರ್ಿಕ ಅಜೆಂಡಾ. ಬಹುಬ್ರಾಂಡ್ ಚಿಲ್ಲರೆ ವ್ಯಾಪಾರ ಬಿಟ್ಟು ಬೇರೆಲ್ಲಾ ವಲಯಗಳಲ್ಲೂ, ಮೂಲರಚನೆಗಳು ಮತ್ತು ಆರಿಸಿದ ರಕ್ಷಣಾ ಉದ್ದಿಮೆಗಳಲ್ಲೂ ವಿದೇಶಿ ನೇರ ಹೂಡಿಕೆ(ಎಫ್ಡಿಐ)ಗೆ ಅವಕಾಶ ನೀಡುವುದಾಗಿ ಯಾವುದೇ ಸಂದಿಗ್ಧತೆಯಿಲ್ಲದೆ ಅದು ಹೇಳಿದೆ. ಬಹುಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಅವಕಾಶ ಕೊಡುವುದಿಲ್ಲ ಎಂದಿರುವುದೂ ತನ್ನ ಬೆಂಬಲ ನೆಲೆಯನ್ನು ಉಳಿಸಿಕೊಳ್ಳಲು ಮಾತ್ರ. “ಕಾಮರ್ಿಕ ಕಾನೂನುಗಳ ಪರಾಮಶರ್ೆ ನಡೆಸಲಾಗುವುದಂತೆ, ಮತ್ತು “ವ್ಯಾಪಾರಕ್ಕೆ ಲೈಸೆನ್ಸ್ ವಿಧಿ-ವಿಧಾನಗಳನ್ನು” ಸುಲಭಗೊಳಿಸಲಾಗುವುದಂತೆ! ತೆರಿಗೆ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸುವ ಬಗ್ಗೆ ಮತ್ತು ಸರಳಿಕರಿಸುವ ಬಗ್ಗೆ ಅದು ಹೇಳುತ್ತದೆ, ಜತೆಗೆ ಇದುವರೆಗೂ ಗುಜರಾತ್ ಕೂಡಾ ಸೇರಿದಂತೆ ಅದರ ರಾಜ್ಯಸರಕಾರಗಳು ದೃಢವಾಗಿ ವಿರೋಧಿಸಿಕೊಂಡೇ ಬಂದಿರುವ ಒಂದು ರಾಷ್ಟ್ರೀಯ ಸಾಮಾನ್ಯ ಮಾರಾಟ ತೆರಿಗೆ(ಜಿಎಸ್ಟಿ) ವ್ಯವಸ್ಥೆಯನ್ನು ಅಂಗೀಕರಿಸುವ ಮಾತನ್ನೂ ಆಡುತ್ತಿದೆ!
ಚೌಕಾಸಿ ವ್ಯವಹಾರ:’ಉಜ್ವಲ ಭವಿಷ್ಯಕ್ಕೆ !
ಇವೆಲ್ಲ ಕಾಪರ್ೊರೇಟ್ ಭಾರತಕ್ಕೆ ಮತ್ತು ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಅತ್ಯಂತ ಸಿಹಿಯಾದ ಜೇನಿನಂತೆ. ಚೌಕಾಸಿ ವ್ಯವಹಾರ ಸ್ಪಷ್ಟವಾಗಿದೆ- ಅವರಿಗೆ ಗರಿಷ್ಟ ಲಾಭ ಗಿಟ್ಟಿಸಿಕೊಳ್ಳಲು ಭಾರತದ ನೈಸಗರ್ಿಕ ಮತ್ತು ಖನಿಜ ಸಂಪತ್ತು ಇನ್ನೂ ಹೆಚ್ಚಾಗಿ ಲಭ್ಯವಾಗುತ್ತದೆ, ಪ್ರತಿಯಾಗಿ ಬಿಜೆಪಿ ಅವರ ಬೆನ್ನೇರಿ ಮುಂದಿನ ಸರಕಾರ ರಚಿಸಬಹುದು. ಒಂದೊಮ್ಮೆ ಇಟೆಲಿಯ ಫ್ಯಾಸಿಸ್ಟ್ ಸವರ್ಾಧಿಕಾರಿ ಮುಸೊಲಿನಿ ನಿರೂಪಿಸಿದಂತೆ, ಫ್ಯಾಸಿಸಂ ಅಂದರೆ ಪ್ರಭುತ್ವ ಮತ್ತು ಬಂಡವಾಳದ ಸಮಾಗಮವೂ ಹೌದು.
ಉಳಿದಂತೆ ಈ 42 ಪುಟಗಳ ದಸ್ತಾವೇಜಿನಲ್ಲಿರುವುದು ಎಂದಿನಂತೆ ಇಬ್ಬಂದಿತನದ ಮಾತುಗಳೇ. ಬಿಜೆಪಿಯ ನಿಜವಾದ ಮತ್ತು ಘೋಷಿತ ಆಶಯಗಳು ಸಂಪೂರ್ಣ ಭಿನ್ನ. ಬಿಜೆಪಿಯ ಪ್ರಚಾರದ ಕೇಂದ್ರ ಬಿಂದುವೆಂದರೆ, ತನ್ನ ‘ನೇತಾರ’ನನ್ನಷ್ಟೇ ಬಿಂಬಿಸುವುದು. ಬಿಜೆಪಿ ವೆಬ್ತಾಣ ನಮ್ಮ ದೇಶದ ಎಲ್ಲ ಸಮಸ್ಯೆಗಳಿಗೂ ಮತ್ತು ಒಂದು ‘ಉಜ್ವಲ ಭವಿಷ್ಯಕ್ಕೆ ಮೋದಿ ಮಂತ್ರವೇ ದಿವ್ಯೌಷಧ ಎನ್ನುತ್ತದೆ. ಇದು ಹೇಗೆ ಸಾಧ್ಯ ಎಂಬುದನ್ನು ಮಾತ್ರ ಪ್ರಶ್ನಿಸಬಾರದು. ‘ಗುಜರಾತ ಮಾದರಿ’ ಯಾರೂ ನಿಲ್ಲಿಸಲಾಗದ ‘ಹಾಲು-ಜೇನಿ’ನ ಉಜ್ವಲ ಭವಿಷ್ಯಕ್ಕೆ ದಾರಿಯಂತೆ! ಈ ಮಾದರಿಯ ಮಿಥ್ಯೆಯನ್ನು ಈಗಾಗಲೇ ಹಲವಾರು ಅಧ್ಯಯನಗಳು ಸ್ಫೋಟಗೊಳಿಸಿ ಬಿಟ್ಟಿವೆ- ಗುಜರಾತಿನ ಜನಗಳ ಜೀವನದ ಗುಣಮಟ್ಟದ ವಿಷಯದಲ್ಲೂ, ಮತು ಅಲ್ಲಿ ತ್ವರಿತ ಕೈಗಾರಿಕೀಕರಣ ಮತ್ತು ಆಧುನೀಕರಣ ನಡೆದಿದೆ ಎಂಬ ಮಿಥ್ಯೆಯನ್ನೂ.
ಉದಾಹರಣೆಗೆ,
* ಪೆಟ್ರೋಲ್, ಡೀಸೆಲ್ ಮತ್ತು ಸೀಮೆ ಎಣ್ಣೆಯ ಮೇಲೆ ಮೌಲ್ಯವಧರ್ಿತ ತೆರಿಗೆ (ವ್ಯಾಟ್) ದೇಶದಲ್ಲಿ ಅತಿ ಹೆಚ್ಚಿರುವುದು ಗುಜರಾತಿನಲ್ಲೇ. ಭಾರತದಲ್ಲಿ ಸಿಎನ್ಜಿ ಮೇಲೆ ಅತಿ ಹೆಚ್ಚು, ಅಂದರೆ 15ಶೇ. ವ್ಯಾಟ್ ಇರುವುದು ಕೂಡ ಇಲ್ಲಿಯೇ. ವ್ಯಂಗ್ಯವೆಂದರೆ, ಕೇಂದ್ರ ಸರಕಾರ ಬೆಲೆಯೇರಿಸುತ್ತಿದೆ ಎಂದು ಟೀಕಾಸ್ತ್ರ ಪ್ರಯೋಗಿಸುತ್ತಲೇ ರಾಜ್ಯ ಸರಕಾರ ಆ ಬೆಲೆಯೇರಿಕೆಗಳು ಕೊಡಮಾಡುವ ರೆವಿನ್ಯೂ ಸಂಗ್ರಹದ ಭಕ್ಷೀಸನ್ನು ಬಾಚಿಕೊಳ್ಳುತ್ತಿದೆ.
* ಮುಷ್ಕರಗಳು, ಲಾಕೌಟ್ಗಳು ಮತ್ತು ಇತರ ಕಾಮರ್ಿಕ ಅಶಾಂತಿ ಬಹಳ ಹೆಚ್ಚಾಗಿರುವುದು ಕೂಡ ಗುಜರಾತಿನಲ್ಲೇ.
* ಗುಜರಾತಿನ ಸಾರ್ವಜನಿಕ ವಿತರಣಾ ವ್ಯವಸ್ಥೆ ದೇಶಲ್ಲಿನ ಅತಿ ಕೆಟ್ಟ ವ್ಯವಸ್ಥೆಗಳಲ್ಲಿ ಒಂದು, ಮತ್ತು ಆಹಾರಧಾನ್ಯಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಹಿರಂಗ ಮಾರುಕಟ್ಟೆಗೆ ಸಾಗ ಹಾಕುತ್ತಿರುವುದೂ ಇಲ್ಲಿಯೇ.
* ಗುಜರಾತ್ ಸರಕಾರ ವಿದ್ಯುತ್ ಉತ್ಪಾದನೆಯನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು ಖಾಸಗಿ ಕಂಪನಿಗಳಿಂದ ಹೆಚ್ಚಿನ ದರಗಳಲ್ಲಿ ವಿದ್ಯುತ್ ಖರೀದಿಯ ಮೇಲೆ ಒತ್ತು ನೀಡುತ್ತಿದೆ ಎಂದು ಟೀಕಾಕಾರರು ಹೇಳುತ್ತಾರೆ.
* ಸರಕಾರದ ತಲಾ ಆರೋಗ್ಯ ವೆಚ್ಚ ದೇಶದಲ್ಲಿಯೇ ಅತೀ ಕಡಿಮೆ ಇರುವುದು ಗುಜರಾತಿನಲ್ಲಿ.
* ತಾಯಂದಿರ ಮತ್ತು ಹಸುಳೆಗಳ ಮರಣದರ ಗುಜರಾತಿನಲ್ಲಿ ಅತೀ ಹೆಚ್ಚು.
* ಗುಜರಾತಿನಲ್ಲಿ ಐದು ವರ್ಷಗಳ ಕೆಳಗಿನ ಮಕ್ಕಳಲ್ಲಿ ಪ್ರತಿ ಎರಡು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಗೀಡಾಗಿದೆ, ಪ್ರತಿ ನಾಲ್ಕರಲ್ಲಿ ಮೂರು ಮಕ್ಕಳು ರಕ್ತಹೀನತೆಗೊಳಗಾಗಿದ್ದಾರೆ.
(ಈ ಬಗ್ಗೆ ಸಮಗ್ರ ಮಾಹಿತಿಗಳಿಗೆ ಎಪ್ರಿಕ್ 6, 2014 ರ `ದಿ ವೀಕ್ ಪತ್ರಿಕೆ ನೋಡಿ).
‘ಗುಜರಾತ್ ಮಾದರಿ’ಯೆಂಬ ಮಿಥ್ಯೆಯನ್ನು ಈ ಹಿಂದೆ ಈ ಅಂಕಣದಲ್ಲಿ ಸ್ಫೋಟಗೊಳಿಸಿದ್ದೇವೆ. ದೇಶಿ ಮತ್ತು ವಿದೇಶಿ ಬಂಡವಾಳಗಳಿಗೆ ಅಭೂತಪೂರ್ವ ರಿಯಾಯ್ತಿಗಳು ಮತ್ತು ಸೌಲಭ್ಯಗಳೇ ಅದರ ಹೂರಣ. ಹೀಗಿರುವಾಗ ಈ ‘ಉದ್ಧಾರಕ’ನನ್ನು ಹಾಡಿ ಹೊಗಳುವ ಸಮೂಹಗಾನದಲ್ಲಿ ಪಾಲ್ಗೊಳ್ಳಲು ಕಾಪರ್ೊರೇಟ್ ಭಾರತದ ಹಲವು ವಿಭಾಗಗಳು ಸಾಲುಗಟ್ಟಿ ನಿಂತಿದ್ದರೆ ಆಶ್ಚರ್ಯವೇನು? ಗುಜರಾತಿನಲ್ಲಿ ಕೊಡಮಾಡಿದ ರಿಯಾಯ್ತಿಗಳು ದೇಶದೆಲ್ಲೆಡೆಗಳಲ್ಲಿ ಸಿಗುವಂತಾದರೆ ಎಂತಹ ಅಗಾಧ ಸೂಪರ್ ಲಾಭಗಳನ್ನು ಗಿಟ್ಟಿಸಬಹುದಲ್ಲವೇ? ಹೀಗೆ ಈಗಾಗಲೇ ಎರಡು ಭಾರತಗಳನ್ನು ಸೃಷ್ಟಿಸಿರುವ ಧೋರಣೆಗಳನ್ನು ಬಲಪಡಿಸುವುದೇ ಅದರ ಆಥರ್ಿಕ ಕಣ್ಣೋಟದ ಗುರಿ. ಇಷ್ಟೇ ಅಲ್ಲ, ಬಿಜೆಪಿ ಏನಾದರೂ ಮುಂದಿನ ಸರಕಾರದ ನೇತೃತ್ವ ವಹಿಸಿದರೆ ನಮ್ಮ ವಿಶಾಲ ಜನಸಮೂಹಗಳಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ವಿಕಟಗೊಳ್ಳುವ ಸಂಕಟಗಳೇ ಗತಿ.
ಕೋಮುವಾದಿಗಳ ಎಂದಿನ ಆಟ
ಬಿಜೆಪಿಯ ಈ ‘ನೇತಾರ’ ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಇದು ಸಂವಿಧಾನದ ಗಣತಂತ್ರ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಎಂಬ ಅವರ ಆಶ್ವಾಸನೆಯನ್ನು ನಿರಾಕರಿಸುವ ಸಂಪೂರ್ಣವಾಗಿ ಪ್ರಜಾಪ್ರಭುತ್ವ-ವಿರೋಧಿಯಾದ ನಿಲುವು. ಇದನ್ನು ಪುಷ್ಟೀಕರಿಸುವ ಸಂಗತಿಯೆಂದರೆ ಬುಡಮಟ್ಟದಲ್ಲಿ ಅದು ಜನಗಳನ್ನು ಅಣಿನೆರೆಸಲು ವಾಸ್ತವವಾಗಿ ಎತ್ತಿಕೊಳ್ಳುವ ಪ್ರಶ್ನೆಗಳು ಕೋಮುವಾದಿ ಧ್ರುವೀಕರಣದ ಸುತ್ತ ಗಿರಕಿ ಹೊಡೆಯುವಂತವು. ಉತ್ತರಪ್ರದೇಶದಲ್ಲಿ ಆ ‘ನೇತಾರ’ರ ಬಲಗೈ ಬಂಟ ಮುಝಫ್ಫರ್ನಗರ ಕೋಮು ಗಲಭೆಗಳಿಗೆ ಮುಸ್ಲಿಮರೇ ಕಾರಣ ಎಂದು ದೂಷಿಸುತ್ತ ಅವರ ವಿರುದ್ಧ ‘ಸೇಡು’ ತೀರಿಸಿಕೊಳ್ಳುವ ಕರೆ ನೀಡಿದ ಉದ್ರೇಕಕಾರಿ ಭಾಷಣಗಳೇ ಇದಕ್ಕೆ ಸಾಕ್ಷಿ.
ಇದು ಅವರಿಗೆ ಬಹಳಷ್ಟು ಸಿದ್ಧಿಸಿರುವ ಒಂದು ಆಟ. ಮೊದಲು ಗಲಭೆಗಳು ನಡೆಯುವಂತೆ ಮಾಡುವುದು, ನಂತರ ಆ ಗಲಭೆಗಳಿಗೆ ಬಲಿಯಾದವರು ಮತ್ತು ಅದರಿಂದ ಸಂಕಟಕ್ಕೊಳಗಾದವರನ್ನೇ ಗಲಭೆಕೋರರು ಎಂದು ದೂಷಿಸಲು ಮುಂದಾಗುವುದು. ನಂತರ ಇದನ್ನೇ ಇನ್ನಷ್ಟು ಕೋಮು ಧ್ರುವೀಕರಣ ತರುವ ಭಾವೋದ್ರೇಕವನ್ನು ಬಡಿದೆಬ್ಬಿಸಲು ನೆವವಾಗಿ ಬಳಸುವುದು. ವೋಟ್ ಬ್ಯಾಂಕ್ ರಾಜಕೀಯವನ್ನು ತೆಗಳುತ್ತಲೇ ಅತೀ ಕೆಟ್ಟ ವೋಟ್ ಬ್ಯಾಂಕ್ ರಾಜಕೀಯವನ್ನು, ಅಂದರೆ, ಬಹುಸಂಖ್ಯಾತರ ವೋಟ್ ಬ್ಯಾಂಕ್ ಕ್ರೋಡೀಕರಣವನ್ನು ಮಾಡುವುದು.
ಈಗ ‘ಶ್ವೇತ ಕ್ರಾಂತಿ’ಯ ದಾವೆ!
ಸಾರ್ವಜನಿಕವಾಗಿ ಅಭಿವೃದ್ಧಿಯ ಮತ್ತು ಯುಪಿಎ ಯ ದುರಾಡಳಿತದ ರಾಗಾಲಾಪನೆ ಮಾಡುತ್ತಿದ್ದರೂ, ಅವರ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯ ಎಲ್ಲ ಭಾಷಣಗಳಲ್ಲಿ ಕಾಣುತ್ತಿರುವುದು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ತಂತ್ರವೇ. ಕಾಂಗ್ರೆಸ್ ಮತ್ತು ಉತ್ತರಪ್ರದೇಶ ಸರಕಾರ ‘ಗುಲಾಬಿ ಕ್ರಾಂತಿ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಆಪಾದಿಸಿದರು. ಅವರ ಪ್ರಕಾರ ಆ ರಾಜ್ಯದಲ್ಲಿ ಹಸುಗಳಿಗೆ ಮೇವು ಮತ್ತು ನೀರು ದೊರೆಯುತ್ತಿಲ್ಲವಾದ್ದರಿಂದ ಗೋವಧೆ ಮತ್ತು ಗೋಮಾಂಸದ ರಫ್ತು ಹೆಚ್ಚುತ್ತಿದೆ. ಈ ಮೂಲಕ ಗೋವಧೆ ನಿಷೇಧದ ಆರೆಸ್ಸೆಸ್/ ಬಿಜೆಪಿ ಬೇಡಿಕೆಯನ್ನು ಅವರು ಬಿಂಬಿಸುತ್ತಾರೆ. ಇದಕ್ಕೂ ತಮ್ಮ ರಾಜ್ಯದಲ್ಲಿನ ‘ಶ್ವೇತ ಕ್ರಾಂತಿ’ಗೂ ಎಷ್ಟೊಂದು ಅಂತರ ಎಂದು ವಣರ್ಿಸುತ್ತಾರೆ. ಆದರೆ ಅವರು ಹೇಳುವ ಶ್ವೇತಕ್ರಾಂತಿ ಅಂದರೆ ಹಾಲಿನ ಕ್ರಾಂತಿ ತಂದದ್ದು ಅಮುಲ್ ಹಾಲು ಸಹಕಾರಿ ಆಂದೋಲನ. ಅದು ಆರಂಭವಾದದ್ದು 1946ರಲ್ಲಿ (ಅಂದರೆ ಬಿಜೆಪಿಯ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಯ ಅಧಿಕೃತ ಜನ್ಮ ದಿನಾಂಕಕ್ಕಿಂತಲೂ ಮುಂಚೆ). ಜನವರಿ 4, 1946ರಂದು, ಆಗ ಮುಂಬಯಿ ಪ್ರಾಂತದಲ್ಲಿದ್ದ, ಈಗ ಗುಜರಾತ್ ರಾಜ್ಯದಲ್ಲಿರುವ ಕೈರಾ ಜಿಲ್ಲೆಗೆ ಭೇಟಿ ನೀಡಲು ಮೊರಾಜರ್ಿ ದೇಸಾಯಿಯವರನ್ನು ಸದರ್ಾರ್ ಪಟೇಲ್ ಕಳಿಸಿದಾಗ ಅದು ನಡೆಯಿತು ಎನ್ನುತ್ತದೆ ಇತಿಹಾಸ. ಆ ಹಾಲು ಸಹಕಾರಿ ಡಿಸೆಂಬರ್ 14, 1946ರಂದು ಸಂಪೂರ್ಣವಾಗಿ ನೋಂದಾಯಿಸಲ್ಪಟ್ಟಿತು.
1964ರಲ್ಲಿ ಆಗಿನ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಆ ಪ್ರದೇಶಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ(ಎನ್ಡಿಡಿಬಿ) ಸ್ಥಾಪನೆಗೆ ಮುತುವಜರ್ಿ ವಹಿಸಿದರು. ಈ ಸಂಸ್ಥೆ ಆರಂಭಿಸಿದ ‘ಆಪರೇಶನ್ ಫ್ಲಡ್ ಮುಂದೆ ‘ಶ್ವೇತ ಕ್ರಾಂತಿ’ ಎಂದು ಜನಜನಿತವಾಯಿತು. ಇದಕ್ಕೂ, ಆರೆಸ್ಸೆಸ್ಗೂ, ಅಥವ ಬಿಜೆಪಿಗೂ, ಅಥವ ಅದರ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಗೂ ಏನೇನೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಆದರೂ ಈ ‘ನೇತಾರ’ ಮತ್ತೊಮ್ಮೆ ಇತಿಹಾಸದ ವಿಕೃತಿಗೆ ಮುಂದಾಗಿದ್ದಾರೆ.
ಈ ಪತ್ರಿಕೆಯಲ್ಲಿ ಈಗಾಗಲೇ ಹೇಳಿರುವಂತೆ, ಬಿಜೆಪಿಯ ಮಾಜಿ ಅಧ್ಯಕ್ಷರನ್ನು ಅವರ ಪ್ರಸಕ್ತ ಸಂಸದೀಯ ಕ್ಷೇತ್ರದಿಂದ ಸ್ಥಳಾಂತರ ಮಾಡಿ ವಾರಣಾಸಿ(ಕಾಶಿ)ಯನ್ನು ಆರಿಸಿಕೊಂಡಿರುವುದು ಕೂಡ ಉತ್ತರಪ್ರದೇಶದಲ್ಲಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಲಿಕ್ಕಾಗಿಯೇ. ಹೀಗೆ ಆಧುನಿಕ ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯನ್ನು ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿ ‘ಹಿಂದೂರಾಷ್ಟ್ರವಾಗಿ ಪರಿವತರ್ಿಸುವ ಕಟ್ಟಾ ಆರೆಸ್ಸೆಸ್ ಅಜೆಂಡಾ ನಿರಂತರವಾಗಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ.
ನಮ್ಮ ಬಹುಪಾಲು ಜನವಿಭಾಗಗಳವರು ಯುಪಿಎ ಯ ಧೋರಣೆಗಳು ತಮ್ಮ ಬದುಕಿನ ಮೇಲೆ ಹೇರಿರುವ ಅಭೂತಪೂರ್ವ ಹೊರೆಗಳ ಬಗ್ಗೆ ಆಕ್ರೋಶ, ಅಸಹ್ಯಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವನ್ನು ತಿರಸ್ಕರಿಸಬೇಕು ಎಂಬುದೂ ಪ್ರಶ್ನಾತೀತ. ಎಡಪಕ್ಷಗಳು ಇದಕ್ಕೆ, ಪಯರ್ಾಯ ಧೋರಣೆಗಳ ದಾರಿ-ದಿಕ್ಕಿನಲ್ಲಿ ಒಂದು ಪರಿಹಾರವನ್ನು ದೇಶದ ಮುಂದಿಟ್ಟಿವೆ. ಆದರೆ, ಬಿಜೆಪಿ ಈ ವಿಷಯದಲ್ಲಿ ವಿಫಲವಾಗಿರುವುದಷ್ಟೇ ಅಲ್ಲ, ವಾಸ್ತವವಾಗಿ ಯುಪಿಎ ಧಾಟಿಯಲ್ಲೇ ಮಾತನಾಡುತ್ತಿದೆ. ಭ್ರಷ್ಟಾಚಾರದಲ್ಲಾಗಲೀ, ಆಥರ್ಿಕ ಧೋರಣೆಗಳಲ್ಲಾಗಲೀ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಏನೇನೂ ವ್ಯತ್ಯಾಸವಿಲ್ಲ.
ಚಾರಿತ್ರಿಕ ಹಿನ್ನಡೆ: ನಿಜವಾದ ಅಜೆಂಡಾ
ಬಿಜೆಪಿಯ ನಿಜವಾದ ಅಜೆಂಡಾದ ಇಣುಕು ನೋಟಗಳು ಬಹಳ ಶ್ರಮಪಟ್ಟು ತಯಾರಿಸಿದ ಈ ಪ್ರಣಾಳಿಕೆಯ ಮುನ್ನುಡಿಯಲ್ಲಿಯೇ ಸಿಗುತ್ತವೆ. “ಭಾರತ ಅತ್ಯಂತ ಪ್ರಾಚೀನ ನಾಗರಿಕತೆ” ಎಂದು ಈ ಮುನ್ನುಡಿ ಆರಂಭವಾಗುತ್ತದೆ(‘ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದು’ ಎಂದಲ್ಲ). ಒಂದೊಮ್ಮೆ ಇದ್ದ ಭಾರತದ ವೈಭವ ಸ್ವಾತಂತ್ರ್ಯದ ನಂತರ ಕಳೆದು ಹೋದದ್ದು “ಅಧಿಕಾರದ ಚುಕ್ಕಾಣಿ ಹಿಡಿದ ಮುಖಂಡರು ಆ ಭಾವನೆಯನ್ನು ಮತ್ತು ಕಣ್ಣೋಟವನ್ನು ಕಳೆದುಕೊಂಡದ್ದರಿಂದ”. ಆದ್ದರಿಂದ, “ನಮ್ಮ ನಾಗರೀಕ ಪ್ರಜ್ಞೆಯ ಮುಂದುವರಿಕೆಯ ಕಳೆದು ಹೋದ ಎಳೆಯನ್ನು ಎತ್ತಿಕೊಳ್ಳುವ, ಭಾರತೀಯ ಮಾನಸದ ಆ ಬಲಿಷ್ಟ ಅಂಶಗಳಿಗೆ ಅನುಸಾರವಾಗಿ ರಾಜಕೀಯ ವ್ಯವಸ್ಥೆಗೆ ಮರು ಮಾರ್ಗದರ್ಶನ ನೀಡ ಬೇಕಾದ” ಸಮಯ ಈಗ ಬಂದಿದೆ ಎನ್ನುತ್ತದೆ ಈ ಬಿಜೆಪಿ ಪ್ರಣಾಳಿಕೆ. ಇದು ನಮ್ಮ ಭವಿಷ್ಯದ ವೈಭವದ ಚಾಲಕ ಶಕ್ತಿಯಾಗುತ್ತದೆಯಂತೆ. ಈ ಭಾರತೀಯ ಮಾನಸ ಎಂದರೆ “ಒಂದು ದೇಶ, ಒಂದು ಜನತೆ ಮತ್ತು ಒಂದು ರಾಷ್ಟ್ರ ಎನ್ನುತ್ತದೆ ಈ ಪ್ರಣಾಳಿಕೆ.
ಇದು “ಒಂದು ಜನತೆ, ಒಂದು ಸಂಸ್ಕೃತಿ ಮತ್ತು ಒಂದು ದೇಶ” ಅಥವ ‘ಹಿಂದು, ಹಿಂದಿ, ಹಿಂದೂಸ್ತಾನ’ ಎಂಬ ಆರೆಸ್ಸೆಸ್ನ ಹಳೆಯ ಘೋಷಣೆಗೆ ತೊಡಿಸಿರುವ ಹೊಸ ವೇಷ. ರಾಷ್ಟ್ರ ಮತ್ತು ದೇಶ ಎಂಬ ಪರಿಕಲ್ಪನೆಗಳೆರಡೂ ಒಂದೇ ಎಂದು ಆರೆಸ್ಸೆಸ್ ನಂಬಿಕೊಂಡು ಬಂದಿದೆ, ಈಗಲೂ ನಂಬಿದೆ. ಆದ್ದರಿಂದಲೇ ಭಾರತ ಒಂದು ಬಹು-ರಾಷ್ಟ್ರೀಯ ದೇಶ, ಸಾಮಾಜಿಕ ಜೀವನದ ಎಲ್ಲ ಆಯಾಮಗಳಲ್ಲೂ ಇರುವ ಅಪಾರ ಬಹುಳತೆ ಮತ್ತು ವೈವಿಧ್ಯತೆಯನ್ನು ಸಾಮುದಾಯಿಕ ಬಂಧಗಳ ಶಕ್ತಿಯಿಂದ ಒಂದಾಗಿಸಿರುವ ಒಂದು ದೇಶ ಎಂಬ ವೈಜ್ಞಾನಿಕವಾಗಿ ಸರಿಯಾದ ವರ್ಣನೆಯನ್ನು ಅದು ವಿರೋಧಿಸುತ್ತದೆ.
ಈಗಿನ ಘೋಷಣೆಯಲ್ಲಿನ ಒತ್ತಿನಲ್ಲಿ ಮಾಡಿರುವ ಪಲ್ಲಟ ಆರೆಸ್ಸೆಸ್ನ ಸಂಪೂರ್ಣ ಅವೈಜ್ಞಾನಿಕವಾದ ಮತ್ತು ಅಚಾರಿತ್ರಿಕವಾದ ವಿಶ್ಲೇಷಣೆಯನ್ನು ಆಧರಿಸಿರುವ ಒಂದು ವಿಶ್ವಾಸಘಾತುಕ ಪ್ರಯತ್ನ. ಆರೆಸ್ಸೆಸ್ ಗುರೂಜಿ, ಗೋಲ್ವಾಲ್ಕರ್ “ನಮ್ಮ ಮೇಲೆ ಬಂದಿರುವ ಪ್ರಶ್ನಾತೀತವಾದ, ಬಲವಂತದ ತೀಮರ್ಾನವೆಂದರೆ, ಹಿಂದೂಸ್ತಾನ(ದೇಶ)ದಲ್ಲಿ ಅಸ್ತಿತ್ವದಲ್ಲಿರುವುದು, ಮತ್ತು ಅಸ್ತಿತ್ವದಲ್ಲಿ ಇರಬೇಕಾದ್ದು ಪ್ರಾಚೀನ ಹಿಂದೂ ರಾಷ್ಟ್ರ, ಮತ್ತು ಹಿಂದೂ ರಾಷ್ಟ್ರವಲ್ಲದೆ ಬೇರೇನೂ ಅಲ್ಲ ಎನ್ನುತ್ತಾರೆ. ಅವರು ಅರೆಸ್ಸೆಸ್ನ ಸೈದ್ಧಾಂತಿಕ ಯೋಜನೆಯನ್ನು ಮೈನಡುಗಿಸುವ ರೀತಿಯಲ್ಲಿ ಹೀಗೆ ನಿರೂಪಿಸುತ್ತಾರೆ: “ಹಿಂದೂಸ್ತಾನದಲ್ಲಿ, ಹಿಂದೂಗಳ ನಾಡಿನಲ್ಲಿ ಬದುಕುವುದು, ಬದುಕಬೇಕಾದ್ದು ಹಿಂದೂರಾಷ್ಟ್ರ…………ಹಿಂದೂ ರಾಷ್ಟ್ರವನ್ನು ಅದರ ಪ್ರಸಕ್ತ ಸುಷುಪ್ತಿಯಿಂದ ಎಬ್ಬಿಸಿ ಪುನರ್ರಚಿಸುವ, ಪುನರುತ್ತೇಜಿಸುವ ಮತ್ತು ಉದ್ಧಾರಗೊಳಿಸುವ ಗುರಿಯಿಟ್ಟುಕೊಂಡಿರುವ ಆಂದೋಲನಗಳು ಮಾತ್ರವೇ ನಿಜಕ್ಕೂ ‘ರಾಷ್ಟ್ರೀಯ’ವಾಗಿರುತ್ತವೆ…… ಅವರು ಮಾತ್ರವೇ ರಾಷ್ಟ್ರೀಯವಾದಿ ದೇಶಪ್ರೇಮಿಗಳು… ಉಳಿದವರೆಲ್ಲರೂ ಒಂದೋ ದೇಶದ್ರೋಹಿಗಳು ಅಥವ ಶತ್ರುಗಳು…” ಎಂದಿದ್ದರು. ಹೀಗೆ, ದೇಶ ಮತ್ತು ರಾಷ್ಟ್ರ ಒಂದೇ ಆಗುತ್ತವೆ.. ಅಂದರೆ ಹಿಂದೂಗಳದ್ದು ಮಾತ್ರ.
ಇಂತಹ ಒಂದು ವಿಭಾಗವನ್ನು ಪ್ರತ್ಯೇಕವಾಗಿಸುವ ಕಣ್ಣೋಟ ಮಾನವ ಇತಿಹಾಸದಲ್ಲಿ ಭಾರತದ ಸಮ್ಮಿಶ್ರ ನಾಗರಿಕತೆಯ ಮುನ್ನಡೆಯ (ಪ್ರಖ್ಯಾತ ಗಂಗಾ-ಜಮುನೀ ತಹಜೀಬ್ನ) ನಿರಾಕರಣೆಯೇ ಆಗುತ್ತದೆ. ಇದು “ಭಾರತ ಎಂಬ ವಿಚಾರ’ ಅನಾವರಣಗೊಳ್ಳುವುದನ್ನು ಮಧ್ಯದಲ್ಲೇ ತಡೆದು ನಿಲ್ಲಿಸುವ ವಿಷಮಯ ಕೋಮುವಾದಿ ಧ್ರುವೀಕರಣವನ್ನು ಹುಟ್ಟು ಹಾಕುತ್ತದೆ. ಇದು ಭಾರತೀಯ ಮಾನಸದ ಒಂದು ಚಾರಿತ್ರಿಕ ಹಿನ್ನಡೆ. ಭವಿಷ್ಯದ ಬಿಜೆಪಿ ಸರಕಾರದ ಅಡಿಯಲ್ಲಿ ನಮಗೆ ಕಟ್ಟಿಟ್ಟ ನಿಜವಾದ ಅಜೆಂಡಾ ಇದೇ.
ಆಧುನಿಕ ಭಾರತಕ್ಕೆ ಇದೊಂದು ಸಂಪೂರ್ಣ ವಿಪತ್ತು. ನಮ್ಮ ಗಣತಂತ್ರ ವ್ಯವಸ್ಥೆಗೆ ಇಂತಹ ಹಾನಿಕಾರಕ ಪರಿಣಾಮಗಳನ್ನು ಉದ್ದೇಶಪೂರ್ವಕವಾಗಿಯೇ ಉಪೇಕ್ಷಿಸಿ, ಭಾರತದ ಕಾಪರ್ೊರೇಟ್ ಮಂದಿ ಮತ್ತು ಕಾಪರ್ೊರೇಟ್ ಮಾಧ್ಯಮಗಳು ‘ದೊರೆಗಿಂತಲೂ ಹೆಚ್ಚು ವಿಧೇಯ’ತೆಯ ಭಟ್ಟಂಗಿತನವನ್ನು ಪ್ರದಶರ್ಿಸುತ್ತಿದ್ದಾರೆ, ಈ ‘ಉದ್ಧಾರಕ’ ತಮ್ಮ ಹಿತಗಳನ್ನು ಈಡೇರಿಸಲು ತಮಗೆ ಬೇಕಾಗಿರುವ ವ್ಯಕ್ತಿ ಎಂದು ಪರಾಕು ಹಾಡುತ್ತಿದ್ದಾರೆ, ಅದರಿಂದ ಭಾರತದ ಪರಿಕಲ್ಪನೆಗೇ, ಅದು ಬದುಕುಳಿಯುವುದಕ್ಕೇ ವಿನಾಶಕಾರಿ ಕುತ್ತು ಬಂದರೆ ಅವರಿಗೇನಂತೆ!
ಕಾಲ್ಪನಿಕ ಸೇಡುಗಳಾಚೆ
ಭಾರತೀಯ ಗಣತಂತ್ರವನ್ನು ಬಲಿಷ್ಟಗೊಳಿಸುವ, ಭಾರತದ ಜನತೆಗೆ ಒಂದು ಉತ್ತಮ ಗುಣಮಟ್ಟದ ಬದುಕಿನ ಆಶ್ವಾಸನೆ ನೀಡುವ ಚಾರಿತ್ರಿಕ ಮುನ್ನಡೆಯ ಬದಲು, ಫ್ಯಾಸಿಸ್ಟ್ ಮಾದರಿಯ ಒಂದು ಭಾರತೀಯ ಆವೃತ್ತಿಯತ್ತ ಸಾಗುವ ಚಾರಿತ್ರಿಕ ಹಿನ್ನಡೆಗೆ ಉತ್ತೇಜನೆ ನೀಡಲಾಗುತ್ತಿದೆ. ಈ ಹಿಂದೆ ಈ ಅಂಕಣದಲ್ಲಿ ಹಲವು ಬಾರಿ ಚಚರ್ಿಸಿರುವಂತೆ, ಇದು ಹಿಟ್ಲರ್ ಮತ್ತು ನಾಜೀ ಫ್ಯಾಸಿಸಂನ ಉದಯವನ್ನು ಮೈನಡುಗಿಸುವ ರೀತಿಯಲ್ಲಿ ನೆನಪಿಸುತ್ತಿದೆ. ಆಗ ಜಾಗತಿಕ ಕಾಪರ್ೊರೇಟ್ಗಳ ಮುಂದಾಳುಗಳು ನಾಝೀ ಉದಯವನ್ನು 1930ರ ದಶಕದ ‘ಮಹಾಕುಸಿತ’ದ ಆಥರ್ಿಕ ಬಿಕ್ಕಟ್ಟಿನಿಂದ ಪಾರು ಮಾಡುವ ‘ಮುಕ್ತಿದಾತ’ ಎಂದು ಹಾಡಿ ಹೊಗಳಿದ್ದರು.
ಜನತೆ, ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ, ಭಾರತವನ್ನು ಇನ್ನೂ ಎತ್ತರಕ್ಕೆ ಒಯ್ಯಲು ಕ್ರಿಯಾಶೀಲರಾಗಬೇಕೇ ಹೊರತು, ಅತ್ಯಂತ ಸಂದೇಹಾಸ್ಪದವಾಗಿರುವ ಇತಿಹಾಸದ ಕಾಲ್ಪನಿಕ ಸೇಡುಗಳನ್ನು ತೀರಿಸಿಕೊಳ್ಳುವ ಹೆಸರಿನಲ್ಲಿ ತಮ್ಮ ಶಕ್ತಿಯನ್ನು ಪೋಲು ಮಾಡಬಾರದು. ಭಾರತದ ರಾಜಕಾರಣದ ಇಂತಹ ಹಿನ್ನಡೆಯನ್ನು ತಡೆದು ನಿಲ್ಲಿಸಬೇಕು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ತಿರಸ್ಕರಿಸಿ, ಎಡ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಶಕ್ತಿಗಳ ಬಲದ ಮೇಲೆ ನಿಂತಿರುವ ಒಂದು ಭವಿಷ್ಯ, ಒಂದು ಉತ್ತಮ ಭಾರತದತ್ತ ಸಾಗಬಲ್ಲ, ನಮ್ಮೆಲ್ಲ ಜನತೆಗೆ ಒಂದು ಉತ್ತಮ ಗುಣಮಟ್ಟದ ಬದುಕನ್ನು ಕೊಡಬಲ್ಲ ಒಂದು ಪಯರ್ಾಯ ಜನಪರ ಧೊರಣೆಯ ದಿಕ್ಕನ್ನು ಅನುಸರಿಸುವಂತಹ ಭವಿಷ್ಯ ನಮ್ಮದಾಗುವಂತೆ ಮಾಡಿದರೆ ಮಾತ್ರವೇ ಸಾಧ್ಯ.
ಉತ್ತರಪ್ರದೇಶ ಸರಕಾರ ‘ಗುಲಾಬಿ ಕ್ರಾಂತಿ’ಯನ್ನು ಅಂದರೆ ಗೋಮಾಂಸದ ರಫ್ತನ್ನು ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಿ ಪಟ್ಟಾಕಾಂಕ್ಷಿ ಆಪಾದಿಸಿದರು. ಇದಕ್ಕೂ ತಮ್ಮ ರಾಜ್ಯದಲ್ಲಿನ ‘ಶ್ವೇತ ಕ್ರಾಂತಿ’ಗೂ ಎಷ್ಟೊಂದು ಅಂತರ ಎಂದು ವಣರ್ಿಸುತ್ತಾರೆ. ಆದರೆ ಅವರು ಹೇಳುವ ಶ್ವೇತಕ್ರಾಂತಿ ಅಂದರೆ ಹಾಲಿನ ಕ್ರಾಂತಿ ತಂದದ್ದು ಅಮುಲ್ ಹಾಲು ಸಹಕಾರಿ ಆಂದೋಲನ. ಅದು ಆರಂಭವಾದದ್ದು 1946ರಲ್ಲಿ, ಅಂದರೆ ಈತನ ಅಧಿಕೃತ ಜನ್ಮ ದಿನಾಂಕಕ್ಕಿಂತಲೂ ಹಿಂದೆ. ಇದಕ್ಕೂ, ಆರೆಸ್ಸೆಸ್ಗೂ, ಅಥವ ಬಿಜೆಪಿಗೂ, ಅಥವ ಅದರ ಪ್ರಧಾನ ಮಂತ್ರಿ ಪಟ್ಟಾಕಾಂಕ್ಷಿಗೂ ಏನೇನೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಈ ‘ನೇತಾರ’ ಮತ್ತೊಮ್ಮೆ ಇತಿಹಾಸದ ವಿಕೃತಿಗೆ ಮುಂದಾಗಿದ್ದಾರೆ.
ನಿರಂತರವಾಗಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಆಧುನಿಕ ಭಾರತೀಯ ಗಣತಂತ್ರದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯನ್ನು ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿ ‘ಹಿಂದೂರಾಷ್ಟ್ರವಾಗಿ ಪರಿವತರ್ಿಸುವ ಕಟ್ಟಾ ಆರೆಸ್ಸೆಸ್ ಅಜೆಂಡಾ.
0