ಶ್ರೀನಗರ: ಹದಿಹರೆಯದಲ್ಲಿ ಸೇನಾಧಿಕಾರಿಯೊಬ್ಬರು ನೀಡಿದ್ದ ಕಿರುಕುಳ ಮತ್ತು ಅನುಭವಿಸಿದ ಅವಮಾನದಿಂದ ಬೇಸತ್ತು ಒಂದು ಹಂತದಲ್ಲಿ ಉಗ್ರಗಾಮಿಯಾಗಲು ಬಯಸಿದ್ದ, ಆದರೆ ಮೇಲಧಿಕಾರಿಗಳ ಕ್ರಮದಿಂದಾಗಿ ವ್ಯವಸ್ಥೆಯ ಬಗ್ಗೆ ನಂಬಿಕೆ ಪುನಃಸ್ಥಾಪನೆಯಾಯಿತು ಎಂದು ನ್ಯಾಷನಲ್ ಕಾನ್ಸರೆನ್ಸ್ ಶಾಸಕ ಖೈಸರ್ ಜಮ್ಮದ್ ಲೋನ್ ಬಹಿರಂಗಪಡಿಸಿದರು.
ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಬಗೆಗಿನ ಚರ್ಚೆಯ ವೇಳೆ, ಹಿರಿಯ ಸೇನಾ ಅಧಿಕಾರಿಯೊಬ್ಬರು ನನ್ನ ಜತೆ ಮಾತನಾಡಿ, ಕಿರಿಯ ಅಧಿಕಾರಿಯ ಕೃತ್ಯವನ್ನು ಖಂಡಿಸಿದರು ಎಂದು ಲೋನ್ ಈ ವಿಷಯ ಬೆಳಕಿಗೆ ತಂದರು. ಮಾತುಕತೆಗಳು ಹೇಗೆ ಸಮಸ್ಯೆಯನ್ನು ಇತ್ಯರ್ಥಪಡಿಸಬಲ್ಲವು ಎನ್ನುವುದಕ್ಕೆ ಇದು ನಿದರ್ಶನ ಎಂದು ಲೋಲಬ್ ಕ್ಷೇತ್ರವನ್ನು ಪ್ರತಿನಿಧಿಸುವ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ‘ವಕ್ಫ್’ ತಪ್ಪಿಗೆ ಬಿಜೆಪಿಯೇ ಕಾರಣ, ನಾನು ಅದರ ಪರವಾಗಿ ಇಲ್ಲ – ಸಚಿವ ಎಂ.ಬಿ ಪಾಟೀಲ್ ಹೇಳಿಕೆ
“ನಾನು ಯುವಕನಾಗಿದ್ದಾಗ ನಮ್ಮ ಮನೆ ಬಳಿ ಕಾರ್ಯಾಚರಣೆ ನಡೆದಿತ್ತು. ನಾನು ಆಗ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. ನಾನು ಸೇರಿದಂತೆ 32 ಯುವಕರನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ಪಡೆಯಲಾಯಿತು. ಉಗ್ರ ಸಂಘಟನೆಗೆ ಸೇರಿದ ಒಬ್ಬನ ಬಗ್ಗೆ ವಿವರ ನೀಡುವಂತೆ ಅಧಿಕಾರಿ ಒತ್ತಾಯಿಸಿದರು. ಆತ ನಮ್ಮ ಪ್ರದೇಶದಲ್ಲಿದ್ದ ಕಾರಣ ಆತನ ಪರಿಚಯ ನನಗಿತ್ತು ಎಂದು ಹೇಳಿದೆ. ನನ್ನನ್ನು ಥಳಿಸಿದರು. ಕಾರ್ಯಾಚರಣೆ ವೇಳೆ ಉಗ್ರರು ಅಲ್ಲಿದ್ದರೆ ಎಂದು ಕೇಳಿದರು. ಆಗ ನಕಾರಾತ್ಮಕವಾಗಿ ಉತ್ತರಿಸಿದೆ. ಮತ್ತೆ ನನ್ನನ್ನು ಹೊಡೆದರು” ಎಂದು ಆಡಳಿತ ಪಕ್ಷದ ಸದಸ್ಯರಾಗಿರುವ ಅವರು ವಿವರಿಸಿದರು.
ಬಳಿಕ ಹಿರಿಯ ಅಧಿಕಾರಿಯೊಬ್ಬರು ಅಗಮಿಸಿ ಮಾತನಾಡಿಸಿದರು. ಜೀವನದ ಮುಂದಿನ ಗುರಿ ಏನೆಂದು ಕೇಳಿದರು. ನಾನು ಉಗ್ರಗಾಮಿಯಾಗಲು ಬಯಸಿದ್ದೇನೆ ಎಂದು ಹೇಳಿದೆ. ಕಾರಣ ಕೇಳಿದಾಗ ಈ ಚಿತ್ರಹಿಂಸೆಯ ಘಟನೆಯನ್ನು ವಿವರಿಸಿದೆ ಎಂದರು.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media