ಹಾವೇರಿ: ರೈತನ ಆತ್ಮಹತ್ಯೆಗೂ ವಕ್ಫ್ ಬೋರ್ಡ್‌ನ ಭೂವಿವಾದಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲವು ಕನ್ನಡ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಸುಳ್ಳು
ಕರ್ನಾಟಕದಲ್ಲಿ ವಕ್ಸ್ ವಿವಾದ ತೀವುಗೊಳ್ಳುತ್ತಿರುವ ಸಂದರ್ಭದಲ್ಲೇ, ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವಕ್ಸ್ ನೋಟಿಸ್ ಬಂದಿದ್ದೂ ಆತ್ಮಹತ್ಯೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಟ್ವಿಟ್ ಮಾಡಿದ್ದರು. ಹರನಗೇರಿ ರೈತ ರುದ್ರಪ್ಪ ಆತ್ಮಹತ್ಯೆ ಬಗ್ಗೆ ಟ್ವಿಟ್ ಮಾಡಿದ್ದ ತೇಜಸ್ವಿ, ಸೂರ್ಯ, ವಕ್ಸ್ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಹೀಗಾಗಿ ಸಂಸದರ ವಿರುದ್ಧ ದೂರು ದಾಖಲಿಸಲಾಗಿದ್ದು, ಈ ಬಗ್ಗೆ ಅದಾರ್ ಪೊಲೀಸ್ ಠಾಣೆಯಲ್ಲಿ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಂತಿಮ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.
ಹಾವೇರಿ ಜಿಲ್ಲಾ ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ, ಕಲಂ 353 (2) ಅಡಿಯಲ್ಲಿ ಕನ್ನಡ ದುನಿಯಾ ಇ-ಪೇಪರ್ ಮತ್ತು ಕನ್ನಡ ನ್ಯೂಸ್ ಇ-ಪೇಪರ್ ಸಂಪಾದಕರು ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ( ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಗುಂಪುಗಳ ನಡುವೆ ದ್ವೇಷ, ದ್ವೇಷದ ಭಾವನೆಗಳನ್ನು ಸೃಷ್ಟಿಸಲು ಅಥವಾ ಉತ್ತೇಜಿಸಲು ಹೇಳಿಕೆಗಳನ್ನು ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಟೆಲಿಮನಸ್’ ಆಯಪ್ ಬಿಡುಗಡೆ ಮಾಡಲಿರುವ ರಾಜ್ಯ ಸರ್ಕಾರ
ತೇಜಸ್ವಿ ಸೂರ್ಯ ಟೀಟ್‌ನಲ್ಲೇನಿತ್ತು?
ಪಹಣಿಯಲ್ಲಿ ವಕ್ಷ ಹೆಸರು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮ ವರದಿಯೊಂದನ್ನು ಟ್ವಿಟ್ ಮಾಡಿದ್ದ ತೇಜಸ್ವಿ ಸೂರ್ಯ, ‘ಸಿಎಂ ಸಿದ್ದರಾಮಯ್ಯ ಮತ್ತು ವಕ್ಸ್ ಸಚಿವ ಜಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟ್ರೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ಉಲ್ಲೇಖಿಸಿದ್ದರು. ಇದೀಗ ಈ ಟ್ವಿಟ್ ಅನ್ನು ಅಳಿಸಿಹಾಕಲಾಗಿದೆ.
ನಕಲಿ ಸುದ್ದಿ : ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಸುದ್ದಿ ನಕಲಿ ಎಂದು ಹೇಳಿದ ನಂತರ ಸಂಸದರು ಪೋಸ್ಟ್ ನ್ನು ಡಿಲೀಟ್ ಮಾಡಿದ್ದರು. ಸುದ್ದಿಯು ಸತ್ಯಕ್ಕೆ ದೂರವಾದದ್ದು. ಅಂತಹ ಯಾವುದೇ ಘಟನೆ ವರದಿಯಾಗಿಲ್ಲ. ಇಲ್ಲಿ ಉಲ್ಲೇಖಿಸಿರುವ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ 06/01/2022 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದು ಸಾಲ ಮತ್ತು ಬೆಳೆ ನಷ್ಟದಿಂದ ಅವರು ಆತ್ಮಹತ್ಯೆ ಮಾಡಿಕೊಂಡದ್ದು, ಜಮೀನನ್ನು ವಕ್ಫ್ ಮಂಡಳಿಗೆ ನೀಡಿದ್ದಕ್ಕೆ ಅಲ್ಲ ಎಂದು ಎಸ್ಪಿ ಹೇಳಿದರು.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media