ಇಂದೋರ್: ಕೋವಿಡ್ ಸಮಯದಲ್ಲಿ ಯಮನಂತೆ ವೇಷ ಧರಿಸಿ, ಲಾಕ್‌ಡೌನ್ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಪೊಲೀಸ್ ಸಿಬ್ಬಂದಿ ಜವಾಹರ್ ಸಿಂಗ್ ಯಾದವ್ ಹಸುವನ್ನು ನೀರಿನಲ್ಲಿ ತೊಳೆಯುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುವ ದುರಂತಕರ ಘಟನೆ ನಡೆದಿದೆ.
ಜವಾಹರ್ ಸಿಂಗ್ ಯಾದವ್ ಲಾಕ್‌ಡೌನ್ ಅವಧಿಯಲ್ಲಿ ಮೂಡಿಸಿದ್ದ ಜನಜಾಗೃತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಜನರು ಇವರನ್ನು ಪ್ರೀತಿಯಿಂದ ಯಮರಾಜ್ ಎಂದೇ ಕರೆಯುತ್ತಿದ್ದರು. ಹಸುಗಳನ್ನು ಸಾಕಿದ್ದ ಯಾದವ್ ಶುಕ್ರವಾರ ಬೆಳಗ್ಗೆ ಹಸುವನ್ನು ಮೀಯಿಸುತ್ತಿದ್ದಾಗ ಎಲೆಕ್ನಿಕ್ ಶಾಕ್ ಗೆ ತುತ್ತಾಗಿದ್ದಾರೆ. ಇವರೊಂದಿಗೆ ಹಸುವೂ ಸಹ ಮೃತಪಟ್ಟಿದೆ.
ಇದನ್ನೂ ಓದಿ: ವಸತಿ ನಿಲಯದ ಮೂಲಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
2020-21 ರ ಅವಧಿಯಲ್ಲಿ ಭಾರತಾದ್ಯಂತ ಕೋವಿಡ್ ಮಹಾಮಾರಿ ಹರಡಿತ್ತು. ಸೋಂಕು ನಿಯಂತ್ರಣದ ಸಲುವಾಗಿ ಸರ್ಕಾರವು ಲಾಕ್‌ಡೌನ್ ಹೇರಿತ್ತು. ಈ ವೇಳ ಯಾದವ್ ಅವರು ಸೃಜನಶೀಲತೆಯಿಂದ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದರು.
ಯಮನಂತೆ ವೇಷ ಧರಿಸಿ, ಸನ್ ಗ್ಲಾಸ್ ಧರಿಸಿ ಪೊಲೀಸ್ ಜೀಪ್ ಮೇಲೆ ಕುಳಿತು ಹೊರಗೆ ಓಡಾಡುವ ಜನರನ್ನು ಲಾಕ್ ಡೌನ್ ನಿಯಮಗಳನ್ನು ಪಾಲಿಸುವಂತೆ ಓಲೈಸುತ್ತಿದ್ದರು. ಇವರ ಸಾವಿಗೆ ಇಲಾಖೆಯ ಸಿಬ್ಬಂದಿ ಮಾತ್ರವಲ್ಲದೇ ಸಾರ್ವಜನಿಕರೂ ಸಹ ಕಂಬನಿ ಮಿಡಿದಿದ್ದಾರೆ.
ಇದನ್ನೂ ನೋಡಿ: ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” – ಬಿ.ಎಂ. ಹನೀಫ್ Janashakthi Media