ಹಾವೇರಿ: ನಗರದ ನಂದಿ ಲೇಔಟ್ ನಲ್ಲಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಸತಿ ನಿಲಯದ ಮೇಲ್ವಿಚಾರಕ ಹೊನ್ನಪ್ಪ ಬಾಸಪುರಗೆ ವಿದ್ಯಾರ್ಥಿಗಳು ಸಭೆ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತಾನಾಡಿ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.
ದುರಂತವೆಂದರೆ ವಿದ್ಯಾರ್ಥಿಗಳು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯಗೊಂಡಿದೆ. ವಸತಿ ನಿಲಯದಲ್ಲಿ ಊಟದ ಸಮಸ್ಯೆ ವಿಪರೀತವಾಗಿದ್ದು, ಸರಿಯಲ್ಲ ಹೀಗಾಗಲೆ ಅನಾರೋಗ್ಯ ದಿಂದ ಜನರ ಬಳಲುತ್ತಿರುವ ಸೂಕ್ಷ್ಮತೆಯ ವಾತಾವರಣದಲ್ಲಿ ಈ ರೀತಿಯ ಸಮಸ್ಯೆಗಳನ್ನು ಸಹಿಸಲು ಅಸಾಧ್ಯ ಎಂದರು.
ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮನವೊಲಿಸುವಲ್ಲಿ ಸಿಎಂ ಯಶಸ್ವಿ
ಗುಣಮಟ್ಟದ ಆಹಾರ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಹೇಳಿದರೂ ಕೂಡಾ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ” ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಶಿಕ್ಷಣದ ಕನಸು ಹೊತ್ತು ಬಂದ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಸಿಗದೆ, ಕಾಲೇಜಿಗೆ ತೆರಳುವ ವಾತಾವರಣ ನಿರ್ಮಾಣ ಮಾಡಲಾಗಿದೆ.” ಊಟದ ಸಮಸ್ಯೆಯಿಂದ ಬೇಸತ್ತು ಹೋಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಸ್ವಂತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತರನಾದ ಅಡಚಣೆಯುಂಟಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಗಳು ಕೂಡಲೇ ಸ್ವತಃ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಅನೇಕ ಮೂಲಭೂತ ಒದಗಿಸಬೇಕು ಹಾಗೂ ಬೆಲೆ ಏರಿಕೆ ಪರಿಣಾಮವಾಗಿ ಉತ್ತಮ ಗುಣಮಟ್ಟದ ಅಹಾರ ಒದಗಿಸುವ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ 3,500 ರೂಪಾಯಿಗಳಿಗೆ ಏರಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್ ಘಟಕ ಕಾರ್ಯದರ್ಶಿ ಭರತ ಕೊರವರ್ ಮಾತನಾಡಿ, ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ನೀಡುತ್ತಿಲ್ಲ ಅರೇ ಬೆಂದ ಅನ್ನ, ರುಚಿಕರವಿಲ್ಲದ ಸಾಂಬಾರ, ಟಿಫಿನ್ ನೀಡುತ್ತಾರೆ, ಗ್ರಂಥಾಲಯ ಇಲ್ಲ ಕನಿಷ್ಠ ಪಕ್ಷ ಪುಸ್ತಕಗಳನ್ನು ಕೊಡಿಸಿಲ್ಲ, ಆಟದ ಸಾಮಗ್ರಿಗಳನ್ನು ಎರಡು ವರ್ಷಕೊಮ್ಮೆ ಕೊಡಿಸಬೇಕು ಆದರೆ ಇಲ್ಲಿಯವರೆಗೆ ಯಾವುದೇ ವಸ್ತುಗಳನ್ನು ಕೊಡಿಸಿಲ್ಲ ವಾರ್ಡನ್ ಅವರಿಗೆ ತಿಳಿಸಿದಾಗ ಸರಿ ಮಾಡುತ್ತೇನೆ ಎಂದು ಹೇಳುವ ಗುರುಗಳು ಓದುವ ಕಡೆ ಹೆಚ್ಚು ಗಮನ ನೀಡಿ ಎಂದು ನಮಗೆ ಉತ್ತಮ ಮಾರ್ಗದರ್ಶನ ಮಾಡುತ್ತಾರೆ ವಿದ್ಯಾರ್ಥಿಗಳೊಂದಿಗೆ ಚೆನ್ನಾಗಿ ಒಡನಾಟ ಹೊಂದಿದ್ದರು ಕೂಡ ಸೌಲಭ್ಯಗಳಿಂದ ವಂಚಿತರನಾಗಿ ಮಾಡುತ್ತಾರೆ.
ತಾಲ್ಲೂಕು ಅಧ್ಯಕ್ಷ ಸುಲೇಮನ್ ಮತ್ತಿಹಳ್ಳಿ ಮಾತನಾಡಿ, ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಮೂಲಭೂತ ವಸ್ತುಗಳನ್ನು ಕೊಡದೇ ವಂಚನೆ ಮಾಡಿದು ಸರಿಯಲ್ಲ. ಬಾಡಿಗೆ ಕಟ್ಟಡದಲ್ಲಿದೆ ಎಂಬ ನೆಪ ಹೇಳುವ ಬದಲಿಗೆ ನೀರು, ಸೋಲಾರ್, ಬಕೆಟ್, ಜಂಬು, ಪುಸ್ತಕ, ಆಟದ ಸಾಮಗ್ರಿ, ಗುಡ್ ನೈಟ್ ಬಟ್ಟೆ ಸ್ವಚ್ಛ ಮಾಡುವ ವ್ಯವಸ್ಥೆ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಒಂದು ವೇಳೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪೂರೈಸಲು ಮುಂದಾಗದಿದ್ದಾರೆ ಮುಂದಿನ ದಿನಗಳಲ್ಲಿ ಹಾಸ್ಟೆಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಧರಣಿ ನಡೆಸಿ ಬೃಹತ್ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಮುತ್ತುರಾಜ್ ದೊಡ್ಡಮನಿ, ತಾಲ್ಲೂಕು ಸಹ ಕಾರ್ಯದರ್ಶಿ ವಿಜಯ ಶಿರಹಟ್ಟಿ, ವಿದ್ಯಾರ್ಥಿಗಳಾದ ಸಾಗರ ಶಿವಪುರ, ಆಕಾಶ ಕಲಕಟ್ಟಿ, ನಂದೀಶ್ ಯತ್ನಹಳ್ಳಿ, ರವಿಚಂದ್ರ ಸದಪುರ, ವಿಕಾಸ ಆಡೂರ, ತರುಣ ಕೆ, ಶಶಿಕುಮಾರ್ ಬಾಸೂರ, ವಸಂತ ಓಲೇಕಾರ, ಸಂತೋಷ ಹೆಚ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಮರಕುಂಬಿ ಪ್ರಕರಣ| ಚಾರಿತ್ರಿಕ ತೀರ್ಪು – ದಲಿತರಿಗೆ ದಕ್ಕಿದ ನ್ಯಾಯ Janashakthi Media