7 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಬಂಧನ

ವಿಜಯನಗರ: ಏಳು ವರ್ಷದ ಬಾಲಕನನ್ನು ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಿಸಿ, ಎಚ್‌ಎಲ್‌ಸಿ ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದ್ದು, ಆರೋಪಿ ಓಬಳೇಶ್‌ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವರ್ಷ

ಆರೋಪಿಯು ಅಕ್ಟೋಬರ್ 22‌ ರಂದು ಕಮಲಾಪುರದ ಗೋನಾಳ್‌ ಕೇರಿಯ ಬಾಲಕ ಅಭಿ (7) ಎಂಬಾತನನನ್ನು ಶಾಲೆಯಿಂದ ಅಪಹರಿಸಿದ್ದ. ಬಳಿಕ ಎಚ್‌ಎಲ್‌ಸಿ ಕಾಲುವೆಯ ಮೇಲಿನ ಸೇತುವೆಯಿಂದ ಬಾಲಕನನ್ನು ಕಾಲುವೆಗೆ ಎಸೆದಿದ್ದ. ಅದೇ ದಿನ ಬಾಲಕ ನಾಪತ್ತೆಯಾದ ಕುರಿತು ಆತನ ತಾಯಿ ಕಮಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವರ್ಷ

ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಬಾಲಕನ ಮೃತದೇಹ ಶುಕ್ರವಾರ ಕುರೇಕುಪ್ಪ ಬಳಿ ಕಾಲುವೆಯಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಮುನ್ಸೂಚನೆ ಇಲ್ಲದೆ ಸಾವಿರಾರು ಕುಟುಂಬಗಳ ಬಿಪಿಎಲ್ ಚೀಟಿ ರದ್ದು

‘ಬಳಿಕ ಆರೋಪಿಗಾಗಿ ಹುಡುಕಾಟ ನಡೆಯಿತು. 22ರಂದು ಬಾಲಕನನ್ನು ಆರೋಪಿ ಓಬಳೇಶನೇ ಶಾಲೆಗೆ ಬಿಟ್ಟುಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಕೂರಿಸಿಕೊಂಡು ಹೋಗಿದ್ದ. ಆತನ ಚಲನವಲನಗಳ ಬಗ್ಗೆ ಸಿ.ಸಿ.ಟಿ.ವಿ. ದೃಶ್ಯಗಳನ್ನು ಗಮನಿಸಿದಾಗ ಶಾಲೆಯಿಂದ ಬಾಲಕನನ್ನು ಮತ್ತೆ ತನ್ನ ಜತೆ ಕರೆತಂದಿದ್ದು ಕಾಣಿಸಿತ್ತು. ಇದರ ಜಾಡು ಹಿಡಿದು ಆತನನ್ನು ವಿಚಾರಿಸಿದಾಗ ತಾನೇ ಬಾಲಕನನ್ನು ಪಿ.ಕೆ.ಹಳ್ಳಿ ರಸ್ತೆಯ ಅಡವಿ ಕೆನಾಲ್‌ನಲ್ಲಿ (ಎಚ್‌ಎಲ್‌ಸಿ ಕಾಲುವೆ) ಎಸೆದಿದ್ದಾಗಿ ಒಪ್ಪಿಕೊಂಡ’ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.’ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದರಿಂದ ಕೊಲೆ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವುದು ಸಾಧ್ಯವಾಯಿತು, ವಿಳಂಬವಾಗಿದ್ದಲ್ಲಿ ಆತ ಇಲ್ಲಿಂದ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳತ್ತ ಪಲಾಯನ ಮಾಡುವ ಯೋಜನೆ ರೂಪಿಸಿದ್ದ’ ಎಂಧು ಅವರು ಹೇಳಿದರು.

ಸಂಬಂಧಕ್ಕೆ ಬಾಲಕ ಅಡ್ಡಿ?

‘ಮೃತ ಬಾಲಕನ ತಾಯಿ ಮತ್ತು ಓಬಳೇಶ ನಡುವೆ ಅನ್ಯೋನ್ಯತೆ ಇತ್ತು. ಶೀಘ್ರದಲ್ಲೇ ಮೊದಲ ಪತಿಗೆ ವಿಚ್ಛೇದನ ನೀಡಿ ಓಬಳೇಶ್ ಜತೆಗೆ ಮದುವೆ ಮಾಡುವ ತಯಾರಿಯಲ್ಲಿ ಇದ್ದಳು. ಈ ಸಂಬಂಧಕ್ಕೆ ಬಾಲಕ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಓಬಳೇಶ್ ಆತನನ್ನು ಮುಗಿಸುವ ಯೋಚನೆ ಮಾಡಿದಂತಿದೆ.

ಆದರೆ ಮಗುವನ್ನು ಕೊಲ್ಲುವ ಯೋಚನೆ ತಾಯಿಗೆ ಇರಲಿಲ್ಲ, ಸ್ವತಃ ಆಕೆಯೇ ನಾಪತ್ತೆ ದೂರು ದಾಖಲಿಸಿದ್ದಲ್ಲದೆ, ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಓಬಳೇಶನ ಉದ್ದೇಶ ಕೇಳಿ ಆಘಾತಗೊಂಡಿದ್ದರು. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ಹೇಳಿದರು.

ಇದನ್ನೂ ನೋಡಿ: ಹಾಸನ ಲೈಂಗಿಕ ದೌರ್ಜನ್ಯ| ಪೆನ್‌ಡ್ರೈವ್ ಪ್ರಕರಣ – ಪ್ರಜ್ವಲ್​ಗಿಲ್ಲ ಬೇಲ್, ಜೈಲು ಗ್ಯಾರಂಟೀನಾ?? – ಕೆಎಸ್ ವಿಮಲಾ

Donate Janashakthi Media

Leave a Reply

Your email address will not be published. Required fields are marked *