ಬೆಂಗಳೂರು| ಚಲಿಸುತ್ತದ ಬಸ್‌ಗೆ ಏಕಾಏಕಿ ಬೆಂಕಿ

ಬೆಂಗಳೂರು: ನಗರದ ಬೊಮ್ಮನಹಳ್ಳಿ ಬಳಿ ಚಲಿಸುತ್ತದ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತುಕೊಂಡ ಭೀಕರ ಘಟನೆ ನಡೆದಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ವಾಹನ ಸವಾರರು ವಾಹನ ಅಲ್ಲೇ ನಿಲ್ಲಿಸಿ ರಸ್ತೆ ಪಕ್ಕಕ್ಕೆ ಬಂದು ನಿಂತಿದ್ದಾರೆ. ಬೆಂಗಳೂರು

ರಸ್ತೆಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಾವು ನೋವುನ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ದಟ್ಟ ಹೊಗೆ ಆವರಿಸಿದ್ದರಿಂದ ಬಸ್‌ ನಂಬರ್ ಕೂಡ ಕಂಡುಬಂದಿಲ್ಲ. ಅಷ್ಟೇ ಅಲ್ಲ ಬೆಂಕಿ ಹೊತ್ತುಕೊಂಡ ಬಸ್‌ ಖಾಸಗಿ ಬಸ್ಸಾ? ಕೆಎಸ್‌ಆರ್‌ಟಿಸಿನಾ ಅಥವಾ ಬಿಬಿಎಂಟಿಸಿನಾ? ಅನ್ನೋದು ಕೂಡ ಗೋಚರಿಸುತ್ತಿಲ್ಲ. ಬೆಂಗಳೂರು

ಇದನ್ನೂ ಓದಿ: ಐತಿಹಾಸಿಕ ತೀರ್ಪಿಗೆ ಸಾಕ್ಷಿಯಾದ ‘ಮರಕುಂಬಿ’

ಅಷ್ಟೊಂದು ದಟ್ಟ ಹೊಗೆ ಬಸ್‌ ಸುತ್ತಲು ಆವರಿಸಿದೆ. ಇದರಿಂದಾಗಿ ಆತಂಕಗೊಂಡ ಇತರ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಕೊಂಚ ದೂರ ಬಂದಿದ್ದಾರೆ. ಜೊತೆಗೆ ಬಸ್‌ ಯಾವ ಮಾರ್ಗವಾಗಿ ಚಲಿಸುತ್ತಿತ್ತು ಎನ್ನುವ ಬಗ್ಗೆ ಇನ್ನಷ್ಟು ತಿಳಿದುಬರಬೇಕಿದೆ. ಇದು ಬಿಎಂಟಿಸಿ ಬಸ್‌ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಚಾರ ಪೊಲೀಸರು, ‘ರೂಪೇನಗ್ರಹಾರದಲ್ಲಿ ವಾಹನ ಕೆಟ್ಟು ನಿಂತಿರುವುದರಿಂದ ಬೊಮ್ಮನಹಳ್ಳಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬಂದಿದೆ. ದಯಮಾಡಿ ಸಹಕರಿಸಿ’ ಎಂದು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ನೋಡಿ: ಹುಟ್ಟುಹಬ್ಬದ ವಿಶೇಷ: ಸ್ವಾತಂತ್ರ್ಯ ಹೋರಾಟಗಾರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ನೆನಪು Janashakthi Media

Donate Janashakthi Media

Leave a Reply

Your email address will not be published. Required fields are marked *