ತುಮಕೂರು : ಮೇಲ್ಸೇತುವೆ ನಿರ್ಮಾಣ ವಿಳಂಬದ ಕಾರಣದಿಂದಾಗಿ ಜನಸಾಮಾನ್ಯರು ನಿತ್ಯ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದು, ಮೇಲ್ಸೇತುವೆ ಕೆಲಸ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐಎಂ ಇಂದು ಪ್ರತಿಭಟನೆ ನಡೆಸಿತು.
ತಮಕೂರು ನಗರ ಹೊರ ವಲಯದಲ್ಲಿ ಹಾದು ಹೋಗುವ ತುಮಕೂರು – ಶಿರಾ – ಮುಂಬೈ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.) 48 ರಲ್ಲಿ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಾಣ ವಾಗುತ್ತಿದೆ. ಈ ರಸ್ತೆಯು ಬಹುತೇಕ ಕರ್ನಾಟಕ ರಾಜ್ಯಕೇಂದ್ರದಿಂದ ಮೂರು ನಾಲ್ಕು ರಾಜ್ಯಗಳು ಹಾಗೂ 17-18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ಪ್ರತಿನಿತ್ಯ ಪ್ರಯಾಣಿಸುವವರ ಸಂಖ್ಯೆ ಹತ್ತಾರು ಸಾವಿರ, ಅಲ್ಲದೆ ಸರಕು ಸಾಗಾಣಿಕೆಯ ವಾಹನಗಳ ಜೊತಗೆ ಸ್ಥಳೀಯಯವಾಗಿ ದಿನ ನಿತ್ಯ ತುಮಕೂರು ನಗರಕ್ಕೆ ಬರುವ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ನೌಕರರು ಪ್ರಯಾಣಿಸುವವರು ಸದಾ ಟ್ರಾಫಿಕ್ ನಲ್ಲಿ ಮಳೆ, ಕೊಚ್ಚೆ ಗುಂಡಿಗಳಲ್ಲಿ ಜೀವ ಹಿಡಿದು ಈ ದಾರಿಯಲ್ಲೆ ಪ್ರಯಣಿಸಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ಹೊರಹಾಕಿದರು.
ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಸಂಪರ್ಕ ಸೇತುವೆ ಕೆಲಸ ಆರಂಭಿಸಿ ವರ್ಷಗಳೇ ಕಳೆದಿದೆ. ಈ ಕಾಮಗಾರಿಯನ್ನು ನಿಗದಿತ ಕಾಲವಾಧಿಯೊಳಗೆ ಮುಗಿಸದೆ ಅರ್ದ ಕೆಲಸ ಮಾಡಿ ಕಳೆದ 6-7 ತಿಂಗಳಿನಿAದ ಕೆಲಸ ಸ್ಥಗಿತಮಾಡಲಾಗಿದೆ.
ಕಾಮಾಗಾರಿ ನಿಲ್ಲಿಸಿರುವುದರಿಂದ ಪ್ರತಿನಿತ್ಯ ಸಂಚರಿಸುವ ವಾಹನಗಳಿಗೆ ತುಂಬಾ ತೊಂದರೆಯಗಿದ್ದು ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಸಾರ್ವಜನಿಕರ ಮತ್ತು ಸ್ಥಳೀಯರ ಸಂಚಾರಕ್ಕಾಗಿ ಇರುವ ಸರ್ವೀಸ್ ರಸ್ತೆಯಲ್ಲಿ ಎಲ್ಲಾ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಈ ರಸ್ತೆಯು ಹದಗೆಟ್ಟಿದ್ದು ಬಾರಿ ವಾಹನಗಳು ಸಂಚರಿಸುವುದರಿಂದ ಗುಂಡಿ-ಹಳ್ಳಗಳು ಬಿದ್ದಿದ್ದು ರಸ್ತೆ ಕಿರಿದಾಗಿರುವುದರಿಂದ ವಾಹನಗಳು ಪರಸ್ಪರ ಟಚ್ ಆಗಿ ಗಲಾಟೆಗಳು ಸರ್ವೆಸಾಮಾನ್ಯವಾಗಿ ನಡೆದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.
ಸಿಪಿಐ ಗಿರೀಶ್ ಮಾತನಾಡಿ, ಸದಾ 2-3 ತಾಸುಗಳು ಜನ ಟ್ರಾಫಿಕ್ ಜಾಮ್ನಲ್ಲಿ ಸಿಲುಕುವುದು ಪರಿಪಾಟವಾಗಿದೆ. ಮಳೆ ಬಂದಾಗ, ವಾರದ ಕೊನೆಯಲ್ಲಿ ಮತ್ತು ಹಬ್ಬ-ಹರಿದಿನಗಳಲ್ಲಿ 8-10 ಕೀಲೋಮಿಟರ್ಗಳಷ್ಟು ಟ್ರಾಫಿಕ್ ಜಾಮ್ ಆಗುತ್ತಿದೆ. ಹಾಗಾಗಿ ಈ ಮೇಲ್ ಸೇತುವೆ ಕಾಮಗಾರಿ ಸೇರಿದಂತೆ ಮುಂಬೈವರೆಗೆ ಚಾಲ್ತಿಯಲ್ಲಿರುವ ಎಲ್ಲಾ ಕಾಮಾಗಾರಿಗಳನ್ನು ತ್ವರಿತವಾಗಿ ಮುಗಿಸಿ ನಿಗಧಿತ ಸಮಯದಲ್ಲಿ ಸಂಚಾರದ ಗುರಿ ತಲುಪವಂತೆ ಮಾಡಿ ಜೊತೆಗೆ ಸರ್ವೀಸ್ ರಸ್ತೆಯನ್ನು ಶೀಘ್ರವೆ ದುರಸ್ಥಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೂಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ , ನಗರ ಕಾರ್ಯದರ್ಶಿ ಎ.ಲೋಕೆಶ್, ಜಿಲ್ಲಾ ಮುಖಂಡರಾದ ಬಿ.ಉಮೇಶ್, ಸಿಐಟಿಯು ಸುಜಿತ್ ನಾಯಕ್, ಷಣ್ಮಖಪ್ಪ, ರಂಗಧಾಮಯ್ಯ, ಕರ್ನ ಲಿರ್ಸ್ ಕಾರ್ಮಿಕ ಸಂಘದ ಶಿವಕುಮಾರ್ ಸ್ವಾಮಿ, ಪುಟ್ಟೆಗೌಡರು, ಪೀಟ್ ವೇಲ್ ಕಾರ್ಮಿಕರ ಸಂಘದ ರಾಮಕೃಷ್ಣ, ಸಂಪತ್ತು, ಸ್ಥಳೀಯ ಆಟೋಚಾಲಕ ಮುಖಂಡ,ಮಂಜುನಾಥ್, ಪ್ರಾಂತ ರೈತ ಸಂಘದ, ಜಿಲ್ಲಾ ಅಧ್ಯಕ್ಷ ಚನ್ನಬಸಣ್ಣ, ಪ. ಕಾರ್ಯಧರ್ಶಿ, ಅಜ್ಜಪ್ಪ, ಮಹಿಳಾ ಸಂಚಾಲಕಿ ರಾಜಮ್ಮ, ಜನವಾಧಿ ಮಹಿಳಾ ಸಂಘಟನೆ ಸಂಚಾಲಕಿ ಟಿ. ಆರ್ ಕಲ್ಪನಾ ವಹಿಸಿದ್ದರು.