ವಯನಾಡು: ಕೇರಳದ ವಯನಾಡು ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದು, ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಸಹೋದರ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಕರ್ನಾಟಕದ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಗಾಂಧಿ ಕಣಕ್ಕೆ ಇಳಿದಿದ್ದಾರೆ.
ಉತ್ತರ ಪ್ರದೇಶದಲ್ಲಿಯೇ ಆರು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಪ್ರಿಯಾಂಕ ಕಣಕ್ಕೆ ಇಳಿಯಬಹುದು ಎನ್ನುವ ಲೆಕ್ಕಾಚಾರ ಇದ್ದರೂ ಚುನಾವಣೆ ಉಸ್ತುವಾರಿ ಹೊತ್ತಿದ್ದರಿಂದ ಸ್ಪರ್ಧೆ ಮಾಡಿರಲಿಲ್ಲ. 52 ವರ್ಷದ ನಾಯಕಿ ಪ್ರಿಯಾಂಕಗಾಂಧಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ನಾಮಪತ್ರವನ್ನು ಅಧಿಕೃತವಾಗಿಯೇ ಬುಧವಾರ ಸಲ್ಲಿಸಿದರು.
ಇದನ್ನು ಓದಿ : ರಾಜಕೀಯ ಕುಟುಂಬಗಳೂ ಕುಟುಂಬ ರಾಜಕಾರಣವೂ ಖಾಸಗಿ ಆಸ್ತಿ – ಕುಟುಂಬ ಮತ್ತು ರಾಜಕೀಯ ಅಧಿಕಾರದ ಸಂಬಂಧ ಭಾರತದ ನೆಲದ ಗುಣ
ಮಂಗಳವಾರವೇ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮ್ಮ ಸೋನಿಯಾಗಾಂಧಿ ಅವರೊಂದಿಗೆ ಹೊರಟು ಮೈಸೂರಿಗೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ರಾತ್ರಿಯೇ ವಯನಾಡು ತಲುಪಿದ್ದರು.
ಬೆಳಿಗ್ಗೆ ಕಲ್ಪೆಟ್ಟದ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಹೊರಟು ವಯನಾಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು. ಬೃಹತ್ ರೋಡ್ ಶೋ ಭಾರೀ ಗಮನ ಸೆಳೆಯಿತು. ಈ ವೇಳೆ ಅವರಿಗೆ ಅಮ್ಮ ಸೋನಿಯಾಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹಿತ ಹಲವರು ಸಾಥ್ ನೀಡಿದರು.
ಇದನ್ನು ನೋಡಿ : ಜನ ಕೇಂದ್ರಿತ ಅಭಿವೃದ್ಧಿ ಇಂದಿನ ತುರ್ತು – ಡಾ. ಚಂದ್ರ ಪೂಜಾರಿ Janashakthi Media