ಮಾನ್ವಿ: ಮಾನ್ವಿ ತಾಲೂಕಿನ ಹಿರೇಕೋಟ್ನೆಕಲ್ ಗ್ರಾಮದ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾರು ನಂ.4 ಕಾಲುವೆ ಉಪ ವಿಭಾಗದ ಕಚೇರಿ ಆವರಣದಲ್ಲಿ ಡಿಸ್ಟ್ರಿಬ್ಯೂಟರ್ 76 ಮೈಲ್ ಕಾಲುವೆ ಕೆಳ ಭಾಗದ ಗ್ರಾಮಗಳ ರೈತರು ಹಾಗೂ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಾಲುವೆ ಕೆಳಭಾಗದ ರೈತರ ಜಮೀನುಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರು
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಾಜು ಪಿರಂಗಿ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಹಾಗೂ ರಾಯಚೂರು ಯರಮರಸ್ ನೀರಾವರಿ ಇಲಾಖೆಯ ಸೂಪರ್ಡೆಂಟ್ ಇಂಜನೀಯರ್ ಶಿವಕುಮಾರ ಭೇಟಿ ನೀಡಿ, ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿ ನೀರಾವರಿ ಇಲಾಖೆಯಲ್ಲಿ ಇಂಜನೀಯರ್ಗಳ ಕೋರತೆ ಇದ್ದಾರು ಕೂಡ ಡಿಸ್ಟ್ರಿಬ್ಯೂಟರ್ 76 ಮೈಲ್ ಕಾಲುವೆಗೆ ನೀರಾವರಿ ಇಲಾಖೆಯಿಂದ ಅಗತ್ಯವಾದ ಗೇಜ್ ನಿರ್ವಹಣೆ ಮಾಡಲಾಗುತ್ತಿದೆ.
ಇದನ್ನು ಓದಿ : ಬೆಂಗಳೂರು| ಭಾರಿ ಮಳೆಯಿಂದ ಸಂಚಾರ ಅಸ್ತವ್ಯಸ್ತ; ರಸ್ತೆಗಳು ಜಲಾವೃತ
ನಿಯಮದ ಪ್ರಕಾರ ಹಿಂಗಾರು 240 ಕ್ಯೂಸೆಕ್ ಮತ್ತು ಮುಂಗಾರಿನಲ್ಲಿ 260 ಕ್ಯೂಸೆಕ್ ನೀರನ್ನು 76 ಮೈಲ್ ಕಾಲುವೆ ವ್ಯಾಪ್ತಿಯಲ್ಲಿ ಅಲ್ಪ ನೀರು ಬೇಡುವ ಬೆಳೆಗಳಾದ ಹತ್ತಿ,ತೋಗರಿ,ಜೋಳ, ನವಣೆ,ಮೆಣಸಿನಕಾಯಿ, ಈರುಳ್ಳಿ,ಸಜ್ಜೆ ಯಂತಹ ಬೆಳೆಗಳನ್ನು ಮಾತ್ರ ಬೆಳೆಯುವುದಕ್ಕೆ ಅವಕಾಶವಿದ್ದರೂ ಕೂಡ ಹೆಚ್ಚಿನ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಿರುವುದರಿಂದ ಹಾಗೂ ಅಕ್ರಮ ನೀರಾವರಿ ಹೆಚ್ಚಾಳವಾಗಿರುವುದರಿಂದ ಕೆಳಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ. ಈ ಭಾಗದ ವಾರಬಂದಿಯಂತೆ 5 ದಿನಗಳ ಕಾಲ 4.2ಗೇಜ್,3 ದಿನಗಳ ಕಾಲ 4.4 ಗೇಜ್ ನಿರ್ವಹಣೆ ಮಾಡಲಾಗುವುದು ಎಲ್ಲ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಅಮೀನಪಾಷಾ ದಿದ್ದಿಗಿ ಮಾತನಾಡಿ ಡಿಸ್ಟ್ರಿಬ್ಯೂಟರ್ 76 ಮೈಲ್ ಕಾಲುವೆಯಲ್ಲಿ 260 ಕ್ಯೂಸೆಕ್ಸ ನೀರು ಬಿಡುವ ಮೂಲಕ ನೀರಾವರಿ ಅಧಿಕಾರಿಗಳು ವಾರಬಂದಿ ಪ್ರಕಾರ 5.2 ಗೇಜ್ ನಿರ್ವಹಣೆ ಮಾಡಬೇಕಾಗಿದ್ದರೂ ಕೂಡ ಸಮರ್ಪಕವಾಗಿ 4.4 ಗೇಜ್ ನಿರ್ವಹಣೆ ಮಾಡದೆ ಇರುವುದರಿಂದ ಈ ಕಾಲುವೆ ವ್ಯಾಪ್ತಿಯಲ್ಲಿ ಈ ಭಾಗದ ರೈತರ ಜಮೀನುಗಳಿಗೆ ಕಾಲುವೆ ನೀರು ದೊರೆಯದೆ ಇರುವುದರಿಂದ ಭೋಗವತಿ,ಅಮರಾವತಿ,ಅಮರಾವತಿ ಕ್ಯಾಂಪ್,ಜಿನ್ನೂರ್, ಜಿನ್ನೂರ್ ಕ್ಯಾಂಪ್, ಹಿರೇಕೋಟ್ನೆಕಲ್, ತಡಕಲ್, ಮಲ್ಲದಗುಡ್ಡ, ಕರೆಗುಡ್ಡ, ನಕ್ಕುಂದಿ, ರಾಜಲದಿನ್ನಿ, ಮುಷ್ಟೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ 50 ಸಾವಿರ ಎಕರೆಗೂ ಹೆಚ್ಚು ಜಮೀನುಗಳಲ್ಲಿ ಬೆಳೆದ ಭತ್ತ,ಹತ್ತಿ,ನವಣೆ,ಜೋಳ,ಮೆಣಸಿನಕಾಯಿ,ಈರುಳ್ಳಿ,ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡಲೇ 76 ಮೈಲ್ ಕಾಲುವೆಯಲ್ಲಿ ಗೇಜ್ ನಿರ್ವಹಣೆ ಮಾಡುವ ಮೂಲಕ ಕೆಳಭಾಗದ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಈ ಹೋರಾಟದಲ್ಲಿ ನೀರಾವರಿ ಇಲಾಖೆಯ ಎ.ಇ.ಇ. ಶಾಂತರಾಜು,ಸಹಾಯಕ ಅಭಿಯಂತರ ರಮೇಶ, ಪಿ.ಎಸ್.ಐ.ವೀರನಗೌಡ, ಗಬ್ಬೂರು ಪಿ.ಎಸ್.ಐ. ಗಂಗಪ್ಪ ಬುರ್ಲ್ಲಿ, ಕ.ರೈ. ಸಂಘದ ಜಿಲ್ಲಾಧ್ಯಕ್ಷ ಕೆ.ವೈ.ಬಸವರಾಜ್, ವೀರಭದ್ರಗೌಡ ಮಾಲಿ ಪಾಟೀಲ್, ಜಾವೇದ್ ಖಾನ್, ಬುಡ್ಡಪ್ಪನಾಯಕ,ಹೋಳೆಯಪ್ಪ,ವೀರೇಶನಾಯಕ,ವಿರೂಪಕ್ಷಗೌಡ ಮಾಲಿ ಪಾಟೀಲ್,ಶರಣಪ್ಪನಾಯಕ ಸೇರಿದಂತೆ ನೂರಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನು ನೋಡಿ : ಸಾಹಿತ್ಯ ಸಮ್ಮೇಳನ – ರಾಜಕೀಯ ಹಸ್ತಕ್ಷೇಪ ಆಗದಿರಲಿ – ಡಾ. ಬಂಜಗೆರೆ ಜಯಪ್ರಕಾಶ್ Janashakthi Media