ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶದಿಂದ ಬಿಜೆಪಿಗೆ ಕಪಾಳ ಮೋಕ್ಷ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಹರಿಯಾಣ ಮತ್ತು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟಣೆ ಆಗಿದ್ದೂ, ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆಗಿ ಬಿಜೆಪಿ ಅಭೂತಪೂರ್ವ ಗೆಲುವು ಗಳಿಸಿದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್. ಸಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಈ ಒಂದು ಫಲಿತಾಂಶದಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ ಎಂದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರ ರಿಸಲ್ಟ್ನಿಂದ ಬಿಜೆಪಿಗೆ ಕಪಾಳ ಮೋಕ್ಷ ಆಗಿದೆ. 370 ವಿಧಿ ಬಗ್ಗೆ ಮಾತನಾಡಿದರು. ಕಾಶ್ಮೀರ ಫೈಲ್ಸ್ ಫಿಲ್ಮ್ ಮಾಡಿದರು.

ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ ; ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಭರ್ಜರಿ ಗೆಲುವು

ಅದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರ ಲಾಭ ಆಗಿದ್ದು ಹೊರತು, ಇದರಿಂದ ಜಮ್ಮು ಕಾಶ್ಮೀರ ಜನರಿಗೆ ಏನು ಲಾಭ ಆಗಲಿಲ್ಲ. ಈಗ ಅಲ್ಲಿನ ಜನ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಬಿಜೆಪಿಯ ವಿಭಜನೆ ನೀತಿ ವರ್ಕ್ ಆಗ್ತಿಲ್ಲ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದರು.

ಹರಿಯಾಣ ಚುನಾವಣಾ ಫಲಿತಾಂಶ ಅಂತಿಮ ಆಗಿಲ್ಲ. ನಮಗೆ ವಿಶ್ವಾಸ ಇದೆ ನಾವು ಮುನ್ನಡೆ ಸಾಧಿಸುತ್ತೇವೆ. ಕ್ರೀಡಾಪಟುಗಳ ಹೋರಾಟ ಸಾಕಷ್ಟು ಪ್ರಭಾವ ಬೀರಿದೆ. ಹಿಂದಿ ಪ್ರದೇಶಗಳಲ್ಲಿ ಗೆಸ್ ಮಾಡುವುದು ಸ್ವಲ್ಪ ಕಷ್ಟ. ಮೊನ್ನೆ ಉತ್ತರ ಪ್ರದೇಶದಲ್ಲಿ ಗೆಲ್ತಾರೆ ಅಂದ್ರು ಗೆದ್ದಿಲ್ಲ. ನನ್ನ ಮಾಹಿತಿ ಪ್ರಕಾರ ಹರಿಯಾಣದಲ್ಲಿ 53 ಸೀಟು ಬರುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಇದನ್ನೂ ನೋಡಿ: ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿJanashakthi Media

Donate Janashakthi Media

Leave a Reply

Your email address will not be published. Required fields are marked *