ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರವಾಸಿಗರ ಪ್ರಯಾಣದ ವೇಳೆ ಚಿರತೆಯೊಂದು ಬಸ್‌ ಮೇಲೆ ಎಗರಿ ಆತಂಕ

ಬೆಂಗಳೂರು: ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿ ಪ್ರವಾಸಿಗರ ಸಫಾರಿ ಪ್ರಯಾಣದ ವೇಳೆ ಚಿರತೆಯೊಂದು ಬಸ್‌ ಮೇಲೆ ಎಗರಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಸುದೈವವಶಾತ್‌ ಘಟನೆಯಲ್ಲಿ ಯಾವುದೇ ನೋವು, ಪ್ರಾಣಹಾನಿಗಳು ಉಂಟಾಗಿಲ್ಲವಾದರೂ, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದೆ. ಬನ್ನೇರುಘಟ್ಟ

ಬಸ್‌ ನ್ಲಲಿದ್ದ ಪ್ರವಾಸಿಗರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ಕೈದು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ವಿಡಿಯೋಗಳು ಹೊರಬಿದ್ದಿವೆ.

ಇದನ್ನೂ ಓದಿ: ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ: ಬಟ್ಟೆಗಳನ್ನು ಕಳಚಿ ಕುಳಿತ ಉದ್ಯಮಿ

ಕೆಎಸ್‌ಟಿಡಿಸಿ ಬಸ್‌ ಮೇಲೆ ಚಿರತೆ ಅಚಾನಕ್ಕಾಗಿ ಎಗರಿರುವುದಲ್ಲದೇ ಕಿಟಕಿ ಮೂಲಕ ಒಳಪ್ರವೇಶಿಸಲೂ ಸಹ ಯತ್ನಿಸಿದೆ. ಈ ವೇಳೆ ಬಸ್‌ ನಲ್ಲಿದ್ದ ಪ್ರಯಾಣಿಕರು ಭಯಾತಂಕಗಳಿಂದ ಜೋರಾಕಿ ಕಿರುಚಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಬಸ್‌ ನ ಎಲ್ಲಾ ಕಿಟಕಿಗಳಿಗೆ ಜಾಲರಿ ಅಳವಡಿಸಿರುವ ಕಾರಣ ಚಿರತೆ ಒಳ ಪ್ರವೇಶಿಸಲು ಸಾಧ್ಯವಾಗಿಲ್ಲ.

ಇದನ್ನೂ ನೋಡಿ: ಮೈಸೂರು ದಸರಾ 2024| ಜನಪದ ಝೇಂಕಾರ – ಜನ್ನಿ ಮತ್ತು ತಂಡJanashakthi Media

Donate Janashakthi Media

Leave a Reply

Your email address will not be published. Required fields are marked *