ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು ಇಂದು ಮೈಸೂರಿನ ವಿಜಯನಗರದಲ್ಲಿರುವ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 14 ಸೈಟ್ಗಳ ಸ್ಥಳ ಮಹಜರು ನಡೆಸಿದರು.
ಇದೇ ವೇಳೆ ಸ್ಥಳದಲ್ಲಿದ್ದ ದೂರುದಾರ ಸ್ನೇಹಮಯಿ ಕೃಷ್ಣ, ಜಿಟಿ ದೇವೇಗೌಡರ ಅಕ್ರಮವು ಮುಡಾ ಹಗರಣದಲ್ಲಿದೆ ಎಂದು ಸ್ಪೋಟಕವಾದ ಆರೋಪ ಮಾಡಿದರು.
ಸ್ಥಳ ಮಹಜರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಜಿಟಿ ದೇವೇಗೌಡ ವಿರುದ್ಧ ಸ್ಪೋಟಕ ಹೇಳಿಕೆ ನೀಡಿದ್ದು ಮುಡಾದಲ್ಲಿ ಜಿಟಿ ದೇವೇಗೌಡರ ಅಕ್ರಮವಿರಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ವಿತರಣೆ ವಿಳಂಬ ತೀವ್ರ ಖಂಡನೆ, ಕೂಡಲೇ ವಿತರಿಸಲು ಎಸ್ಎಫ್ಐ ಆಗ್ರಹ
ಅವರು ಈ ಒಂದು ಹಗರಣದಲ್ಲಿ ಭಾಗಿಯಾಗಿರುವುದರಿಂದ ಈ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ ಎಂದು ಅವರು ಆರೋಪಿಸಿದರು.
ಅಲ್ಲದೆ HC ಮಾದೇವಪ್ಪ ಸಹೋದರ ಮಗನಿಗೂ ಸೈಟ್ ಕೊಡಲಾಗಿದೆ. ಮರಿಗೌಡ ಸಹೋದರನಿಗೂ ಶಿವಣ್ಣನಿಗೂ ಸೈಟ್ ಕೊಡಲಾಗಿದೆ ಕಳ್ಳರು ಕಳ್ಳರು ಎಲ್ಲರೂ ಒಂದಾಗಿದ್ದಾರೆ. ಹಾಗಾಗಿ ಹೀಗೆ ಹೇಳುತ್ತಿದ್ದಾರೆ ತಮ್ಮ ರಕ್ಷಣೆಗಾಗಿ ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ ಎಂದು ದೂರು ದಾದ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ನೋಡಿ: ಗಾಂಧಿವಾದ ಗೆಲ್ಲಬೇಕು – ಗೋಡ್ಸೆವಾದ ಸೋಲಬೇಕು – ಎ. ನಾರಾಯಣ Janashakthi Media