ಮೈಸೂರು: ತಮಗೆ ಕೊಟ್ಟಿದ್ದಂತ 14 ಸೈಟ್ ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಮುಡಾಗೆ ಮರಳಿ ನೀಡಿದ್ದರು. ಈ 14 ಮುಡಾ ಸೈಟ್ ಗಳ ಕ್ರಯಪತ್ರವನ್ನು ರದ್ದುಗೊಳಿಸಲಾಗಿದ್ದು, ಮುಡಾ ಮರಳಿ ವಾಪಾಸ್ ಪಡೆದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಪಾರ್ವತಿ 14 ಸೈಟ್ ಗಳನ್ನು ಮುಡಾಗೆ ವಾಪಾಸ್ ಮಾಡಿದ್ದಾರೆ. ಅವುಗಳನ್ನು ಮುಡಾ ಪಡೆದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಮೈಸೂರು ಮುಡಾ ಆಯುಕ್ತ ರಘುನಂದನ್, ಹೇಳಿದರು.
ಇದನ್ನೂ ಓದಿ: ಮುಡಾ ಪ್ರಕರಣ: ಮುಡಾದಲ್ಲಿ ಸಿಎಂ ಪತ್ನಿಗೆ ಸೈಟುಗಳನ್ನು ಕೊಟ್ಟಿದ್ದೇ ಬಿಜೆಪಿ ಸರ್ಕಾರ – ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್
ಪಾರ್ವತಿ ಸ್ವಇಚ್ಛೆಯಿಂದ ತಮಗೆ ನೀಡಿದ್ದಂತ 14 ಸೈಟ್ ಗಳನ್ನು ವಾಪಾಸ್ ಮಾಡಿದ್ದಾರೆ. ಹೀಗಾಗಿ 14 ಮುಡಾ ಸೈಟ್ ಗಳ ಕ್ರಯಪತ್ರ ರದ್ದುಗೊಳಿಸಲಾಗಿದೆ ಎಂಬುದಾಗಿ ತಿಳಿಸಿದರು.
ಸ್ವಇಚ್ಛೆಯಿಂದ ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಕೊಟ್ಟಿದ್ದಾರೆ. ನಾವು ಸ್ವೀಕರಿಸಿದ್ದೇವೆ. ಇದನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂಬುದಾಗಿ ಹೇಳಿದರು.
ಇದನ್ನೂ ನೋಡಿ: ಭಾರತದಲ್ಲಿ ಕೋಮುವಾದಿ ಫ್ಯಾಸಿಸಂ ಹೆಚ್ಚುತ್ತಿದೆ – ಡಾ. ಕೆ. ಪ್ರಕಾಶ್ Janashakthi Media