ಸರ್ಕಾರ ಉರುಳಿಸಲು 1000 ಕೋಟಿ ವೆಚ್ಚದಲ್ಲಿ ಪ್ಲ್ಯಾನ್! ಯತ್ನಾಳ್ ಮಾಹಿತಿ ಬಗ್ಗೆ ಐಟಿ ತನಿಖೆಗೆ ಡಿಕೆಶಿ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಪ್ಲ್ಯಾನ್ ಮಾಡಲಾಗ್ತಿದೆ ಎಂಬ ಕುರಿತಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಬಗ್ಗೆ ಐಟಿ ತನಿಖೆ ನಡೆಯಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ‌. ಬಿಜೆಪಿ

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಉರುಳಿಸುವ ಪ್ಲ್ಯಾನ್ ಮಾಡ್ತಿದ್ದಾರೆ. ಇದಕ್ಕಾಗಿ 1200 ಕೋಟಿ ರೆಡಿ ಮಾಡ್ಕೊಂಡಿದ್ದಾರಂತೆ. ಇದನ್ನು ಅವರ‌ ನಾಯಕರೇ ಮಾತ‌ನಾಡಿದ್ದಾರೆ ಎಂದರು. ಯತ್ನಾಳ್ ನೀಡಿರುವ ಹೇಳಿಕೆಯ ಬಗ್ಗೆ ಐಟಿ ಇಲಾಖೆ ತನಿಖೆ ಮಾಡಬೇಕು. ಇನ್ನು ಬಿಜೆಪಿ ಪ್ಲ್ಯಾನ್ ಗೆ ನಾವೂ ಪ್ಲ್ಯಾನ್ ಆಫ್ ಆ್ಯಕ್ಷನ್ ರೆಡಿ ಮಾಡ್ತಿದ್ದೇವೆ.‌ ಅದು‌ ಏನಂತ ಆಮೇಲೆ ಹೇಳ್ತೇವೆ ಎಂದು ತಿಳಿಸಿದರು.

ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ​ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಮಾಹಿತಿಯನ್ನು ತಿಳಿಸಿದ್ದೇನೆ. ಇದು ತೆರಿಗೆ ಇಲಾಖೆ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ ಮಾಡಲಿದ್ದೇನೆ ಎಂದರು.

ಇದನ್ನೂ ಓದಿ: ಶ್ರೀಲಂಕಾದ ಹಂಗಾಮಿ ಪ್ರಧಾನಿಯಾಗಿ ಮಾರ್ಕ್ಸ್‌ವಾದಿ ‘ಜನತಾ ವಿಮುಕ್ತಿ ಪೆರಮುನ’ದ ಹರಿಣಿ ಅಮರಸೂರ್ಯ

ಯತ್ನಾಳ್‌ ಏನೂ ಹೇಳಿದ್ದರು

ರಾಜ್ಯ ಬಿಜೆಪಿಯಲ್ಲಿ ಸರ್ಕಾರ ಉರುಳಿಸುವ ಪ್ರಯತ್ನದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದರು. ಸರ್ಕಾರ ಉರುಳಿಸಲು 1000 ಕೋಟಿ ರೆಡಿಯಾಗಿದೆ. ಆದರೆ ಶಾಸಕರ ಖರೀದಿಗೆ, ಆಪರೇಷನ್ ಕಮಲಕ್ಕೆ ನಾವು ಅವಕಾಶ ಕೊಡವುದಿಲ್ಲ. ಕಾಂಗ್ರೆಸ್ ಸರ್ಕಾರ ತಾನಾಗಿಯೇ ಪತನ ಆಗಲಿದೆ ಎಂದಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ್ದ ಅವರು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಆಪರೇಷನ್ ಕಮಲದ ಪ್ರಯತ್ನ ಯಾವ ಹಂತದಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಸ್ಫೋಟಕ ಮಾಹಿತಿಯನ್ನು ನೀಡಿದ್ದರು. ಯತ್ನಾಳ್ ಹೇಳಿಕೆ ರಾಜಕೀಯ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ಇದನ್ನೂ ನೋಡಿ: ಸಿಎಂ ವಿರುದ್ಧ ಎಫ್‌ಐಆರ್‌ ಸಾಧ್ಯವಿಲ್ಲ

Donate Janashakthi Media

Leave a Reply

Your email address will not be published. Required fields are marked *