ತಡರಾತ್ರಿ ನಗರದಲ್ಲಿ ರೌಂಡ್ಸ್; ರಸ್ತೆ ಕಾಮಗಾರಿ ಪರಿಶೀಲಿಸಿದ ಡಿ.ಕೆ ಶಿವಕುಮಾರ್

ಬೆಂಗಳೂರು: ಸೆಪ್ಟೆಂಬರ್‌ 23 ರ ತಡರಾತ್ರಿ ನಗರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೌಂಡ್ಸ್ ಹಾಕಿ ವಿವಿಧ ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ತಡರಾತ್ರಿ

ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರಿಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್ ಡಿಎ ಆಯುಕ್ತ ರಾಜೇಂದ್ರ ಚೋಳನ್ ಸೇರಿದಿಂತೆ ವಿವಿಧ ಅಧಿಕಾರಿಗಳೊಂದಿಗೆ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಹಾರಿಯಿಂದ ರಸ್ತೆ ಅಗೆದು ನೋಡಿದರು.

ಇದನ್ನೂ ಓದಿ: ಗಂಗಾವತಿ : ಗಣಪತಿ ವಿಸರ್ಜನೆ ವೇಳೆ ಗಲಾಟೆ, ಯುವಕನಿಗೆ ಚಾಕು ಇರಿತ, ಮೂವರ ಮೇಲೆ ಹಲ್ಲೆ

ಪಿಇಎಸ್ ಕಾಲೇಜು ಮುಂದೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಹಾರಿಯಿಂದ ಅಗೆದು ಗುಣಮಟ್ಟ ಪರಿಶೀಲಿಸಿದರು. ಟ್ರಿನಿಟಿ ಜಂಕ್ಷನ್ ಡಾಂಬರೀಕರಣ ಮಾಡಲು ಮಿಲ್ಲಿಂಗ್ ಕಾಮಗಾರಿ ವೀಕ್ಷಿಸಿದರು. ದೊಮ್ಮಲೂರು ಮೇಲ್ಸೇತುವೆಯಲ್ಲಿನ ನಡೆಯುತ್ತಿರುವ ಮೈಕ್ರೋ ಸರ್ಫೇಸಿಂಗ್ ಕಾಮಗಾರಿ ಪರಿಶೀಲಿಸಿದರು.

ಲೋವರ್ ಅಗರಂ ರಸ್ತೆಯ ಡಾಂಬರೀಕರಣ ನೋಡಿದರು. ಬನಶಂಕರಿ ಸರ್ಕಲ್ ಹತ್ತಿರದ ರಸ್ತೆ ದುರಸ್ತಿ ಕಾರ್ಯ ವೀಕ್ಷಿಸಿದರು. ಹೀಗೆ ನಗರದ ವಿವಿಧ ಕಡೆ ಸಂಚಾರ ನಡೆಸಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಬಿಟ ಪರಿಶೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು.

ಇದನ್ನೂ ನೋಡಿ: ಜೆಪಿ ಶಾಸಕರೆಲ್ಲರೂ ಏಡ್ಸ್ ಪರೀಕ್ಷೆ ಮಾಡಿಸಿಕೊಳ್ಳಿ: ಕಾಂಗ್ರೆಸ್ ಶಾಸಕ ರಂಗನಾಥJanashakthi Media

Donate Janashakthi Media

Leave a Reply

Your email address will not be published. Required fields are marked *