ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆಗೆ ಗೆಲುವು

ಕೊಲಂಬೊ : ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಗೆಲುವು ಸಾಧಿಸಿದ್ದಾರೆ.

ಶ್ರೀಲಂಕಾದ ಚುನಾವಣಾ ಆಯೋಗದ ಪ್ರಕಾರ ಇದುವರೆಗೆ ಎಣಿಕೆಯಾದ ಮತಗಳಲ್ಲಿ ಶೇ. 43.31  ರಷ್ಟನ್ನು ದಿಸ್ಸನಾಯಕೆ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.  ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಶೇ. 22ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮೂರನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾ ಚುನಾವಣೆಯಲ್ಲಿ ಒಟ್ಟಾರೆ 1.7 ಕೋಟಿ ಮತದಾರರು ಇದ್ದರು, ಈ ಪೈಕಿ ಶೇಕಡಾ 75 ರಷ್ಟು ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. ಹೀಗಾಗಿ ಕುತೂಹಲ ತೀವ್ರವಾಗಿ ಹೆಚ್ಚಾಗುತ್ತು, ಗೆಲುವಿನ ಮೂಲಕ ದಿಸ್ಸನಾಯಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

 

ಮಹತ್ವದ ಚುನಾವಣೆ : 1982 ರಿಂದ ಈ ವ್ಯವಸ್ಥೆಯನ್ನು ಪರಿಚಯಿಸಿದಾಗಿನಿಂದ ಶನಿವಾರದ ಚುನಾವಣೆಯು ಅತ್ಯಂತ ತೀವ್ರವಾಗಿ ಸ್ಪರ್ಧಿಸಿದ ಅಧ್ಯಕ್ಷೀಯ ಚುನಾವಣೆಯಗಿತ್ತು. 39 ಅಭ್ಯರ್ಥಿಗಳು ಕಣದಲ್ಲಿದ್ದರು, ಆದರೆ ಒಬ್ಬರು ಮತದಾನಕ್ಕೆ ಮುಂಚೆಯೇ ನಿಧನರಾದರು. ಎರಡು ವರ್ಷಗಳ ಹಿಂದೆ ಆರ್ಥಿಕತೆಯು ಕುಸಿದ ನಂತರ ಅಭೂತಪೂರ್ವ ಸಂಕಷ್ಟಗಳಿಂದ ಆಘಾತಕ್ಕೊಳಗಾಗಿರುವ ಶ್ರೀಲಂಕಾದವರಿಗೆ ಉತ್ತಮ ಭವಿಷ್ಯವನ್ನು ಭರವಸೆ ನೀಡುವ ವೇದಿಕೆಯಲ್ಲಿ ಕಾರ್ಮಿಕನ ಮಗ ಡಿಸ್ಸಾನಾಯಕೆ ಜನರಲ್ಲಿ ಭರವಸೆ ಹುಟ್ಟಿಸಿದ್ದರು.

2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 3 ಪ್ರತಿಶತದಷ್ಟು ಮತಗಳನ್ನು ಪಡೆದಿದ್ದ ಜೆವಿಪಿಗೆ ಈ ಗೆಲುವು ಪ್ರಮುಖ ರಾಜಕೀಯ ತಿರುವನ್ನು ನೀಡಿದೆ.

ಡಿಸ್ಸಾನಾಯಕೆ ಅವರು ಸೋಮವಾರ ಬೆಳಗ್ಗೆ  ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಲಂಕಾ ಮಾಧ್ಯಮಗಳು ವರದಿ ಮಾಡಿವೆ.

 

Donate Janashakthi Media

Leave a Reply

Your email address will not be published. Required fields are marked *