ʼರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ’ದ ಉದ್ಘಾಟನಾ ಕಾರ್ಯಕ್ರಮ ಆಯೋಜಿನೆ

ಮೈಸೂರು: ಸೆಪ್ಟೆಂಬರ್‌ 23 ರಂದು ಬೆಳಿಗ್ಗೆ 10ಕ್ಕೆ ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ಆವರಣದಲ್ಲಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ ಸಹಯೋಗದಲ್ಲಿ ‘ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ’ದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿನೆಯನ್ನು ಸಲ್ಲಿಸಲಿದ್ದು, ನರಸಿಂಹರಾಜ, ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ. ಆಗಸ್ಟ್‌ 3ರ ವರೆಗೆ ಪ್ರಖ್ಯಾತ ಶಿಲ್ಪಕಲಾ ಕಲಾವಿದರಿಂದ ಶಿಬಿರ ನಡೆಯಲಿದೆ.

ಶಿಲ್ಪಕಲೆ ಮತ್ತು ಲಲಿತಕಲಾ ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳ ಪ್ರದರ್ಶನ ಸೆ.3ರಂದು ಸಂಜೆ 4ಕ್ಕೆ ನಡೆಯಲಿದೆ. ರಾಜ್ಯ ಮಟ್ಟದ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಆಹ್ವಾನಿತ ಕಲಾಕೃತಿಗಳ ಪ್ರದರ್ಶನ, ಇಂದಿರಾಗಾಂಧಿ ಮಾನವ ಸಂಗ್ರಹಾಲಯ, ಭೋಪಾಲ್ ಮತ್ತು ಕರ್ನಾಟಕ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮಳಿಗೆ ಉದ್ಘಾಟನೆಯೂ ಜರುಗಲಿದೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ ಪ್ರಕರಣದಲ್ಲಿ ಬಂಧನ ಭೀತಿ: ಗ್ರಾಮ ತೊರೆದು ಹೋಗುತ್ತಿದ್ದ ಯುವಕ ಬ್ರೈನ್ ಸ್ಟ್ರೋಕ್‌ನಿಂದ ಮೃತ

ಆಗಸ್ಟ್‌ 7ರ ವರೆಗೆ ಪ್ರದರ್ಶನವಿರಲಿದೆ. ಅ.6ರಂದು ಬೆಳಿಗ್ಗೆ 10ಕ್ಕೆ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲಿ ವಿವಿಧ ವಿಭಾಗಗಳ ಚಿತ್ರ ಬಿಡಿಸುವ ಮತ್ತು ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಆಯೋಜಿಸಲಾಗಿದೆ. 7ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಾಗೂ ಚಿತ್ರಕಲಾ ಮತ್ತು ಮಣ್ಣಿನ ಕಲಾಕೃತಿಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಪ್ರಕಟಣೆ ತಿಳಿಸಿದೆ.

ಇದನ್ನೂ ನೋಡಿ: ಮುನಿರತ್ನ ರಾಜಕಾರಣಿಯೋ? ‘ವೈರ’ಸ್ ಪೀಡಕನೋ!!? Janashakthi Media

Donate Janashakthi Media

Leave a Reply

Your email address will not be published. Required fields are marked *