ಬೆಂಗಳೂರು: ರಾಜ್ಯ ಸರ್ಕಾರದೊಂದಿಗಿನ ಪತ್ರ ಸಮರ ಮುಂದುವರಿಸಿರುವ ರಾಜ್ಯಪಾಲರು, ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಚೇರಿ ನಡುವಿನ ಗೌಪ್ಯ ಪ್ರಕ್ರಿಯೆಗಳು ಸಚಿವ ಸಂಪುಟದಲ್ಲಿ ಚರ್ಚೆಯಾಗಿರುವ ಕುರಿತು ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಆಗಸ್ಟ್ 28 ರಂದು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಗೌಪ್ಯ ಮಾಹಿತಿ ಬಹಿರಂಗಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ಮತ್ತು ಶೀಘ್ರ ವರದಿ ನೀಡುವಂತೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜಭವನ
ರಾಜ್ಯಪಾಲರಿಗೆ ಲೋಕಾಯುಕ್ತದವರು ಬರೆದ ರಹಸ್ಯ ಪತ್ರ ಸೋರಿಕೆಯಾದ ಬಗ್ಗೆ ಮಾಹಿತಿ ಕೊಡಿ ಎಂದು ಪತ್ರದಲ್ಲಿ ಕೋರಿದ್ದಾರೆ. ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಹಾಗೂ ರಾಜಭವನದ ಮಧ್ಯೆ ನಡೆದ ಪತ್ರ ವ್ಯವಹಾರಗಳು ಸಕ್ಷಮ ಪ್ರಾಧಿಕಾರದ ವ್ಯಕ್ತಿ ಹೊರತುಪಡಿಸಿ ಅನ್ಯರಿಗೆ ಲಭಿಸಲು ಹೇಗೆ ಸಾಧ್ಯ?ರಾಜ್ಯಪಾಲರ ಮುಂದೆ ಇರುವ ಲೋಕಾಯುಕ್ತ ಶಿಫಾರಸುಗಳನ್ನು ಯಾವ ಆಧಾರದ ಮೇಲೆ ಬಳಸಿಕೊಂಡು ಸಂಪುಟ ಸಲಹೆ ನೀಡಿದೆ? ಇದಕ್ಕೆ ಸೂಕ್ತ ದಾಖಲೆಯೊಂದಿಗೆ ಉತ್ತರ ನೀಡುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ರಾಜ್ಯಪಾಲರ ಪತ್ರದಲ್ಲಿ ಏನಿದೆ?
ಆ. 26ಕ್ಕೆ ರಾಜಭವನಕ್ಕೆ ಕ್ಯಾಬಿನೆಟ್ ನಿರ್ಣಯದ ದಾಖಲೆಗಳ ಕುರಿತು ಮುಚ್ಚಿದ ಲಕೋಟೆಯೊಂದಿಗೆ ಪತ್ರ ತಲುಪಿದೆ. ಅದರಲ್ಲಿ 16ನೇ ಸಚಿವ ಸಂಪುಟ ಸಭೆಯ ಅಜೆಂಡಾ ಹಾಗೂ 17ನೇ ಸಚಿವ ಸಂಪುಟದ ಹೆಚ್ಚುವರಿ ಅಜೆಂಡಾದ ಪ್ರತಿ ಮಾತ್ರ ಇತ್ತು. ಸಭೆಯ ನಿರ್ಣಯದ ದಾಖಲೆ ಇರಲಿಲ್ಲ.
ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದ ಪರೀಕ್ಷೆಗೆ ನಿರ್ದೇಶನ – ಸಚಿವ ರಾಮಲಿಂಗಾ ರೆಡ್ಡಿ
ಸಂಪುಟ ವಿಭಾಗಕ್ಕೆ ರಾಜಭವನದಿಂದ ದೂರವಾಣಿ ಮೂಲಕ ಮಾಹಿತಿ ತಿಳಿಸಲಾಯಿತು. ಆ. 27ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ದಾಖಲೆ ರಾಜಭವನಕ್ಕೆ ತಲುಪಿಸಲಾಗಿದೆ
ಆ ಸಂಪುಟ ಸಭೆ ಬಗ್ಗೆ ಆ.23ರಂದು ಮಾಧ್ಯಮ ವರದಿ ಗಮನಿಸಿದ್ದು, ಎಚ್.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಜನಾರ್ದನ್ ರೆಡ್ಡಿ ವಿರುದ್ಧ ತನಿಖೆ ಅನುಮತಿ/ಅಭಿಯೋಜನೆಗೆ ಒಪ್ಪಿಗೆ ಪ್ರಸ್ತಾವನೆಗೆ ತಡಮಾಡದೆ ಒಪ್ಪಿಗೆ ನೀಡುವಂತೆ ಸಂಪುಟ ಸಭೆ ಸಲಹೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಇದೆ. ಆದರೆ ಸಂಪುಟ ಸಭೆಯಲ್ಲಿ ಈ ಪ್ರಕರಣಗಳಿಗೆ ಬಾಕಿಯಾಗಿರುವ ಬಗ್ಗೆ ಗಮನಿಸಿರುವುದರ ಬಗ್ಗೆ ಉಲ್ಲೇಖವಿದೆ ಹೊರತು ಸಲಹೆ ಕೊಡುವ ತೀರ್ಮಾನವಾಗಿಲ್ಲ ಎಂಬುದು ತಮಗೆ ಸೇರಿದ ಸರಕಾರದ ವರದಿಯಲ್ಲಿದೆ.
ಇದನ್ನೂ ನೋಡಿ: ನಾಗಮಂಗಲ | ಜೆಡಿಎಸ್ ಹೆಗಲ ಮೇಲೆ ಸಂಘಪರಿವಾರದ ಕೋಮುಗಲಭೆಯ ಬಂದೂಕು – ಎಸ್.ವೈ ಗುರುಶಾಂತ Janashakthi Media