ಆಹಾರ ಸಚಿವ ಕೆ ಎಚ್ ಮುನಿಯಪ್ಪ ನಿವಾಸದ ಮುಂದೆ ಧರಣಿ ಕುಳಿತ 13 ಗ್ರಾಮಗಳ ರೈತ ಹೋರಾಟಗಾರರು

ಬೆಂಗಳೂರು: ಶುಕ್ರವಾರ, 20 ಸೆಪ್ಟೆಂಬರ್‌, ಬೆಳಿಗ್ಗೆಯಿಂದ ಆಹಾರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ನಿವಾಸದ ಮುಂದೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು ಧರಣಿ ಕುಳಿತಿದ್ದಾರೆ. ನಿವಾಸ

ದೇವನಹಳ್ಳಿಯ ಸಚಿವರ ನಿವಾಸದ ಮುಂದೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ಗ್ರಾಮಗಳ ಸುಮಾರು 200 ಜನ ರೈತ ಹೋರಾಟಗಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಚಿವ ಕೆ ಎಚ್ ಮುನಿಯಪ್ಪ ಅವರು ಬರುವವರೆಗೂ ಮರಳಿ ಹೋಗುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಧರಣಿಯಲ್ಲಿ ಮಹಿಳಾ ಹೋರಾಟಗಾರು ಕೂಡ ಭಾಗಿಯಾಗಿದ್ದು, ಬಿಸಿಲು ಲೆಕ್ಕಿಸದೇ ಸಚಿವರ ಮನೆ ಮುಂದೆ ಗಿಡದ ನೆರಳನ್ನು ಆಶ್ರಯಿಸಿ ಧರಣಿ ನಡೆಸುತ್ತಿದ್ದಾರೆ. ಸಚಿವರು ಬೆಳಿಗ್ಗೆಯೇ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಇಂದು (ಸೆ.20) ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈತರು ಮುನಿಯಪ್ಪ ಅವರನ್ನು ಭೇಟಿಯಾಗಲು ಧಾವಿಸಿದ್ದಾರೆ. ಆದರೆ ರೈತರು ಬರುವುದರೊಳಗೆ ಸಚಿವರು ಮನೆಯಿಂದ ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ: ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಸಲಾಗುವುದು: ಸಿಎಂ ಘೋಷಣೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಧರಣಿಯಲ್ಲಿ ಭಾಗಿಯಾಗಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಈ ದಿನ.ಕಾಮ್‌ ಜೊತೆ ಮಾತನಾಡಿ, “ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರಿಗೆ ಕೆ ಎಚ್‌ ಮುನಿಯಪ್ಪ ಅವರು ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಭೂ ಸ್ವಾಧೀನ ರದ್ದು ಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಲೋಕಸಭೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಯಾವ ಕ್ರಮವೂ ಆಗಿಲ್ಲ. ಸಚಿವರಿಗೆ ತಾವು ಕೊಟ್ಟ ಭರವಸೆ ನೆನಪಿಸಲು ಬಂದಿದ್ದೇವೆ. ಅವರು ಬಂದು ನಮ್ಮ ಮನವಿ ಆಲಿಸುವವರೆಗೂ ನಾವು ತೆರಳುವುದಿಲ್ಲ” ಎಂದು ತಿಳಿಸಿದರು.

“ಬಲವಂತವಾಗಿ ರೈತರ ಜಮೀನು ತೆಗೆದುಕೊಳ್ಳದಂತೆ ಭೂ ಸ್ವಾಧೀನ ರದ್ದು ಪಡಿಸಬೇಕು ಎಂದು ನಾವು ಮೂರು ವರ್ಷಗಳಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಾಡ ಕಚೇರಿ ಬಳಿ ನಡೆಸುತ್ತಿದ್ದೇವೆ. ಇಂದಿಗೆ ನಮ್ಮ ಧರಣಿಗೆ 901 ದಿನಗಳು. ಸಿಎಂ ಸಿದ್ದರಾಮಯ್ಯ ಅವರು ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಪ್ರತಿಭಟನಾ ಸ್ಥಳಕ್ಕೆ ಬಂದು ದೊಡ್ಡದಾಗಿ ಭಾಷಣ ಮಾಡಿ ಹೋದರು. ಈವರೆಗೂ ಅವರಿಂದ ಯಾವುದೇ ಕ್ರಮ ಆಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರೈತರು ಬರುವ ವಿಷಯ ಸಚಿವ ಕೆ ಎಚ್‌ ಮುನಿಯಪ್ಪ ಅವರಿಗೆ ಮೊದಲೇ ಗೊತ್ತಿದೆ. ಆದರೂ ನಮ್ಮನ್ನು ನಿರ್ಲಕ್ಷಿಸಿ ಈಗ ಹೊರಗಡೆ ಹೋಗಿದ್ದಾರೆ. ನಾವು ಅವರು ಕೊಟ್ಟ ಭರವಸೆಯನ್ನು ನೆನಪಿಸಲು ಬಂದಿದ್ದೇವೆ ಅಷ್ಟೇ. ಸಚಿವರು ಬಂದು ನಮ್ಮ ಮನವಿಯನ್ನು ಕೇಳಿದ ಮೇಲೆಯೇ ನಾವು ಇಲ್ಲಿಂದ ಹೊರಡುತ್ತೇವೆ” ಎಂದು ಸಿ ಯಶವಂತ ಸ್ಪಷ್ಟಪಡಿಸಿದರು.

ಇದನ್ನೂ ನೋಡಿ: ದಲಿತ ವ್ಯಕ್ತಿಗೆ ಕ್ಷೌರ ನಿರಾಕರಿಸಿ ಕೊಲ ಪ್ರಕರಣ – ಜನಪರ ಸಂಘಟನೆಗಳಿಂದ ಸಂಗನಹಾಳ ಚಲೋ Janashakthi Media

Donate Janashakthi Media

Leave a Reply

Your email address will not be published. Required fields are marked *