ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ, ಎಚ್ಚರಿಕೆಯ ನಂತ್ರ ಬರೋಬ್ಬರಿ 6000 ರಸ್ತೆ ಗುಂಡಿಗಳನ್ನು ಹಗಲು, ರಾತ್ರಿ ಶ್ರಮವಹಿಸಿ ಮುಚ್ಚಲಾಗಿದೆ.
ಹಗಲು-ರಾತ್ರಿ ಕಾರ್ಯನಿರ್ವಹಿಸಿ ರಸ್ತೆ ಗುಂಡಿಗಳನ್ನು ಬೊಮ್ಮನಹಳ್ಳಿ ವಲಯದಲ್ಲಿ ಮುಚ್ಚುಲಾಗುತ್ತಿದೆ ಹಾಗೂ ಇನ್ನುಳಿದ ರಸ್ತೆ ಗುಂಡಿಗಳನ್ನು ಹಗಲು ರಾತ್ರಿ ಕೆಲಸ ನಿರ್ವಹಿಸಿ ಮುಚ್ಚಲಾಗುವುದೆಂದು ವಲಯ ಆಯುಕ್ತರಾದ ರಮ್ಯಾ, ಐಎಎಸ್ ಅವರು ತಿಳಿಸಿದರು.
ಉಪ ಮುಖ್ಯಮಂತ್ರಿಗಳ ಆದೇಶ ಹಾಗೂ ಮುಖ್ಯ ಆಯುಕ್ತರ ನಿರ್ದೇಶನದಂತೆ ನಗರದ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಜೆಪಿ ನಗರದ ನಂದಿನಿ ಹೋಟೆಲ್ ಬಳಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು – ನಾರಾಯಣ ಕಾಳೆ
ರಸ್ತೆ ಗುಂಡಿಗಳನ್ನು ಮುಚ್ಚಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಸಾಕಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ಬಾರದಿರುವ ಹಿನ್ನೆಲೆ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಚಾರದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇದೀಗ ವಾರ್ಡ್ ರಸ್ತೆಗಳಲ್ಲಿ ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಅವುಗಳನ್ನು ಕೂಡಲೆ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಂದ ಹೆಚ್ಚು ಸಕ್ರಿಯವಾಗಿ ರಸ್ತೆ ಗುಂಡಿ ಗಮನ ತಂತ್ರಾಶದಲ್ಲಿ ದೂರುಗಳು ಬರುತ್ತಿವೆ. ಸಾರ್ವಜನಿಕರಿಂದ ಬರುತ್ತಿರುವ ದೂರುಗಳನ್ನು ಕಾಲಮಿತಿಯೊಳಗಾಗಿ ಮುಚ್ಚಲಾಗುತ್ತಿದೆ ಎಂದು ಹೇಳಿದರು.
ಬೊಮ್ಮನಹಳ್ಳಿ ವಲಯ ಪ್ರಮುಖ ಅಂಶಗಳು:
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ – 02
* ವಾರ್ಡ್ ಗಳ ಸಂಖ್ಯೆ – 16
* ಬೊಮ್ಮನಹಳ್ಳಿ ವಲಯದ ಒಟ್ಟು ವಿಸ್ತೀರ್ಣ – 95.30 ಚ.ಕಿ.ಮೀಟರ್
* ವಾರ್ಡ್ ರಸ್ತೆಗಳ ಸಂಖ್ಯೆ – 12154
* ವಾರ್ಡ್ ರಸ್ತೆಗಳ ಉದ್ದ – 1775.67 ಕಿ.ಮೀ.
* ಪ್ರಮುಖ ರಸ್ತೆಗಳ ಸಂಖ್ಯೆ – 39
* ಪ್ರಮುಖ ರಸ್ತೆಗಳ ಉದ್ದ – 134.7 ಕಿ.ಮೀ.
* ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ – 1910.37 ಕಿ.ಮೀ.
* 100 ಹಳ್ಳಿಗಳ ಪೈಕಿ ಬರುವ ಹಳ್ಳಿಗಳು: 28
ಒಟ್ಟಾರೆಯಾಗಿ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಇಷ್ಟು ಸೇರಿದಂತೆ ನಗರದ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 6000 ರಸ್ತೆ ಗುಂಡಿಗಳನ್ನು ಬಿಬಿಎಂಪಿಯಿಂದ ಮುಚ್ಚಲಾಗಿದೆ.
ಇದನ್ನೂ ನೋಡಿ: ದುಃಖದ ಕಡಲ ದಾಟಿಸುವ ನಾವಿಕ – ಯಮುನಾ ಗಾಂವ್ಕರ್ | ಸೀತಾರಾಂ ಯೆಚೂರಿ