ರೈಲಿನತ್ತ ಕಲ್ಲು ಎಸೆಯುವುದು, ಹಳಿಗಳ ಮೇಲೆ ಕಲ್ಲು ಇಡುವುದು ದಂಡನಾರ್ಹ ಅಪರಾಧ

ಮಂಡ್ಯ : ಚಲಿಸುತ್ತಿರುವ ರೈಲಿನತ್ತ ಕಲ್ಲು ಎಸೆಯುವುದು, ರೈಲಿನೊಳಗೆ ಕುಳಿತ ಪ್ರಯಾಣಿಕರಿಗೆ ಕಲ್ಲಿನಲ್ಲಿ ಹೊಡೆಯುವುದು, ಹಳಿಗಳ ಮೇಲೆ ಕಲ್ಲು ಇಡುವುದು ಅಥವಾ ಮಣ್ಣು ಸುರಿಯುವುದು ದಂಡನಾರ್ಹ ಅಪರಾಧಗಳಾಗಿವೆ ಎಂದು ಮಂಡ್ಯ ರೈಲ್ವೆ ರಕ್ಷಣಾ ದಳದ ನಿರೀಕ್ಷಕ ಎಸ್.ಗೋವಿಂದರಾಜು ತಿಳಿಸಿದರು.

ತಾಲೂಕಿನ ಯಲಿಯೂರು ಗ್ರಾಮದ ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರೈಲ್ವೆ ಸುರಕ್ಷಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈಲ್ವೆ ನಿಯಮಗಳಿಗೆ ವಿರುದ್ಧವಾಗಿ ಕೃತ್ಯಗಳನ್ನು ಎಸಗುವುದು ರೈಲ್ವೆ ಅಧಿನಿಯಮ-2003ರ ಪ್ರಕಾರ ದಂಡನೀಯ ಅಪರಾಧವಾಗಿರುತ್ತವೆ ಎಂದು ಹೇಳಿದರು.

ಎಲ್ಲೆಂದರಲ್ಲಿ ರೈಲು ಹಳಿಗಳನ್ನು ಸಹ ದಾಟುವಂತಿಲ್ಲ. ರೈಲುಗಳು ಮತ್ತು ರೈಲ್ವೆ ಹಳಿಗಳು ಸಾರ್ವಜನಿಕ ಆಸ್ತಿ. ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ರೈಲ್ವೆ ರಕ್ಷಣಾ ದಳದ ಎಎಸ್ಐ ಎಂ.ಜೆ.ಪುಂಡರೀಶ, ಉಪ ನಿರೀಕ್ಷಕ ಎಚ್.ಕೆ.ದೊಡ್ಡಯ್ಯ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸುವರು.

Donate Janashakthi Media

Leave a Reply

Your email address will not be published. Required fields are marked *