ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಮಹಿಳೆಯ ಕೆನ್ನೆಗೆ ಬಾರಿಸಿದ ಆಟೋ ಚಾಲಕ

ಬೆಂಗಳೂರು: ಅಟೋ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ  ಆಟೋ ಚಾಲಕ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಲ್ಲದೆ ಆಕೆಯ ಕೆನ್ನೆಗೆ ಬಾರಿಸಿದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬುಕ್ಕಿಂಗ್‌ 

ಆಟೋ ಚಾಲಕ ತನ್ನ ಕೆನ್ನೆಗೆ ಹೊಡೆದಿರುವುದನ್ನು ಮಹಿಳೆ ಪ್ರಶ್ನಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಹಿಳೆ ‘ನನ್ನ ಕೆನ್ನೆಗೆ ಹೊಡೆದಿದ್ದೇಕೆ..’ ಎಂದು ಆಟೋಡ್ರೈವರ್‌ಗೆ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಆಟೋ ಡ್ರೈವರ್‌ ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಯುವತಿ ಆರೋಪ ಮಾಡಿದ್ದಾರೆ. ಬುಕ್ಕಿಂಗ್‌ 

ಪೀಕ್ ಅವರ್ ನಲ್ಲಿ ಓಲಾ ಆ್ಯಪ್ ನಲ್ಲಿ ಆಟೋ ಬುಕ್ ಆಗಿದೆ. ಯುವತಿ & ಸ್ನೇಹಿತ ಇಬ್ಬರೂ ಎರಡು ಆಟೋ ಬುಕ್ ಮಾಡಿದ್ದಾರೆ. ಮೊದಲಿಗೆ ಬಂದ ಆಟೋವನ್ನು ಯುವತಿ ಹತ್ತಿದ್ದಾಳೆ. ಇನ್ನೊಂದು ಆಟೋವನ್ನ ಈ ವೇಳೆ ಯುವತಿ ಕ್ಯಾನ್ಸಲ್‌ ಮಾಡಿದ್ದಾಳೆ. ಆಟೋ ಕ್ಯಾನ್ಸಲ್ ಮಾಡಿದಕ್ಕೆ ಚಾಲಕ ರೇಗಾಡಿದ್ದಾನೆ.

ಇದನ್ನೂ ಓದಿ: ಹಿಜಾಬ್ ಪ್ರಕರಣ : ಬಿ.ಜಿ. ರಾಮಕೃಷ್ಣಗೆ ನೀಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ

ಆಟೋ ಚಾಲಕನ ವರ್ತನೆ ಖಂಡಿಸಿ ಓಲಾ ಕಂಪನಿಗೆ ದೂರು ನೀಡಿದ್ದು,  ಯುವತಿ ದೂರಿಗೆ ಓಲಾ ಕೂಡ ಪ್ರತಿಕ್ರಿಯೆ ನೀಡಿದೆ. ಚಾಲಕನ ನಡೆ ಗಾಬರಿ ಹುಟ್ಟಿಸುವಂತಿದೆ. ದಯವಿಟ್ಟು ಸಂಪೂರ್ಣ ಮಾಹಿತಿ ‌ಕೊಡಿ. ಆಟೋ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯುವತಿಯ ಬೆಂಬಲಕ್ಕೆ ನಿಂತ ಓಲಾ ನಿಂತಿದೆ.

‘ಸಿಂಪಲ್‌ ರೈಡ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ನಾನು ನಿನ್ನೆ ತೀವ್ರ ಕಿರುಕುಳ ಎದುರಿಸಿದ್ದೇನೆ. ಬೆಂಗಳೂರಿನಲ್ಲಿ ನಿಮ್ಮ ಆಟೋ ಚಾಲಕ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ವರದಿ ಮಾಡಿದ್ದರೂ, ನಿಮ್ಮ ಕಸ್ಟಮರ್‌ ಸಪೋರ್ಟ್‌ ಟೀಮ್‌ ಸ್ಪಂದನೆ ನೀಡುತ್ತಿಲ್ಲ. ತಕ್ಷಣವೇ ಕ್ರಮ ತೆಗೆದುಕೊಳ್ಳಿ’ ಎಂದು ನಿತಿ ಎನ್ನುವ ಮಹಿಳೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬುಧವಾರ ನಾನು ಹಾಗೂ ನನ್ನ ಫ್ರೆಂಡ್‌ ಇಬ್ಬರೂ ಓಲಾ ಪೀಕ್‌ ಅವರ್‌ನಲ್ಲಿ ಎರಡು ಆಟೋಗಳನ್ನು ಬುಕ್‌ ಮಾಡಿದ್ದೆವು. ಮೊದಲು ಬಂದ ಆಟೋವನ್ನು ನಾವು ಹತ್ತಿಕೊಂಡು ಮತ್ತೊಂದನ್ನು ಕ್ಯಾನ್ಸಲ್‌ ಮಾಡಿದೆವು. ಆದರೆ, ಬುಕ್ಕಿಂಗ್‌ ಕ್ಯಾನ್ಸಲ್‌ ಆದ ಆಟೋ ಡ್ರೈವರ್‌ ನಮ್ಮ ಫಾಲೋ ಮಾಡಿಕೊಂಡು ಬಂದಿದ್ದಲ್ಲದೆ, ಬಹಳ ಸಿಟ್ಟಿನಲ್ಲಿದ್ದ. ಪರಿಸ್ಥಿತಿಯನ್ನು ಆತನಿಗೆ ತಿಳಿಸುವ ಮುನ್ನವೇ ಕೂಗಾಡಲು ಆರಂಭಿಸಿದ ಆತ, ಅವಾಚ್ಯ ಶಬ್ದಗಳಿಂದ ನಿಂದಿಲು ಆರಂಭಿಸಿದ.

ನಮ್ಮನ್ನು ಬಾಯಿಗೆ ಬಂದ ಹಾಗೆ ಬೈದಿದ್ದು ಮಾತ್ರವಲ್ಲದೆ, ನಿಮ್ಮ ಅಪ್ಪನ ಆಟೋ ಇದಾ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನು ರೆಕಾರ್ಡ್‌ ಮಾಡುವಾಗ ಆತನಿಗೆ ಇನ್ನಷ್ಟು ಸಿಟ್ಟು ಬಂದಿದೆ. ಪೊಲೀಸರಿಗೆ ದೂರು ನೀಡ್ತೇನೆ ಎಂದರೆ, ನನಗೆ ಸವಾಲ್‌ ಹಾಕಿದ್ದಾನೆ. ಪೊಲೀಸರ ಯಾವ ಭಯವೂ ಈತನಿಗೆ ಕಾಣಲಿಲ್ಲ ಎಂದು ಬರೆದುಕೊಂಡಿದ್ದಾರೆ.

ನಮ್ಮ ಒಂದೇ ತಪ್ಪು ಏನೆಂದರೆ, ಎರಡು ಆಟೋಗಳನ್ನು ಏಕಕಾಲದಲ್ಲಿ ಬುಕ್‌ ಮಾಡಿದ್ದು. ಅದಕ್ಕೆ ಕಾರಣ ಕ್ಲಾಸ್‌ ಮಿಸ್‌ ಆಗಬಾರದು ಎನ್ನುವ ಉದ್ದೇಶವಷ್ಟೇ. ಬೆಂಗಳೂರಿನಲ್ಲಿ ಆಟೋಗಳು ರೈಡ್‌ಗಳನ್ನು ಸಾಮಾನ್ಯವಾಗಿ ಕ್ಯಾನ್ಸಲ್‌ ಮಾಡುತ್ತವೆ ಇಲ್ಲದೇ ಇದ್ದಲ್ಲಿ ಹೆಚ್ಚಿನ ಹಣವನ್ನು ಕೇಳುತ್ತಾರೆ. ಅವರು ನನ್ನೊಂದಿಗೆ ಜಗಳವಾಡಿದನ್ನು ಸಹಿಸಿಕೊಳ್ಳಬಹುದು. ಆದರೆ, ಬೆದರಿಕೆ ಹಾಕಿದ್ದು ಹಾಗೂ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ.

ನನ್ನ ಫೋನ್‌ ಅನ್ನು ಕಸಿದುಕೊಳ್ಳಲು ಮುಂದಾದಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ನಾನು ಇದಕ್ಕೆ ವಿರೋಧಿಸಿದೆ. ಈ ವೇಳೆ ಆತ ಆಟೋ ಡ್ರೈವರ್‌ ಮುಂದೆಯೇ ನನ್ನ ಕೆನ್ನೆಗೆ ಬಾರಿಸಿದ. ಈ ವೇಳೆ ಅಕ್ಕಪಕ್ಕದವರು ಆತನನ್ನು ನಿಯಂತ್ರಿಸಲು ಪ್ರಯತ್ನ ಮಾಡಿದ್ದಾರೆ, ಹಾಗಿದ್ದರೂ ಆತ ಬೆದರಿಸುವುದನ್ನು ಮುಂದುವರಿಸಿದ್ದ. ಚಪ್ಪಲಿಯಿಂದ ಹೊಡೆಯುತ್ತೇನೆ ಎಂದೂ ಆತ ಬೆದರಿಕೆ ಹಾಕುತ್ತಿದ್ದ ಎಂದು ಬರೆದಿದ್ದಾರೆ.

ಈ ಹಂತದಲ್ಲಿ ನನ್ನ ಆಟೋ ಡ್ರೈವರ್‌ ಪರಿಸ್ಥಿತಿಯನ್ನು ತಿಳಿ ಮಾಡಿದ. ಆದರೆ, ಓಲಾ ಪ್ರತಿಕ್ರಿಯೆ ಮಾತ್ರ ನಿರಾಶಾದಾಯಕವಾಗಿತ್ತು. ಅಪ್ಲಿಕೇಶನ್‌ ಮೂಲಕ ಘಟನೆಯನ್ನು ವಿವರಿಸಿದಾಗ ನಮಗೆ ಆಟೋಮೇಟೆಡ್‌ ರಿಪ್ಲೈಗಳು ಬಂದವು. ಕಸ್ಟಮರ್‌ ಸಪೋರ್ಟ್‌ಗೆ ಹೋಗುವ ಪ್ರಯತ್ನ ಕೂಡ ವಿಫಲವಾಯಿತು ಎಂದಿದ್ದಾರೆ. ಇನ್ನು ಆಕೆ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಆಟೋ ಡ್ರೈವರ್‌, ನಿಮ್ಮ**, ನಿನ್ನಪ್ಪ ಗ್ಯಾಸ್‌ ಕೊಡ್ತಾನಾ.. ಎಂದು ಆಟೋ ಚಾಲಕ ಹೇಳಿರುವುದು ದಾಖಲಾಗಿದೆ. ಬೆಂಗಳೂರು ಪೊಲೀಸ್‌ ಕೂಡ ಈ ಘಟನೆ ಬಗ್ಗೆ ಗಮನವಹಿಸಿದೆ.

ಇದನ್ನೂ ನೋಡಿ: ಬುಕಿಂಗ್‌ ರದ್ದು ಮಾಡಿದ ಮಹಿಳೆ ಮೇಲೆ ಅಟೋ ಚಾಲಕನಿಂದ ಹಲ್ಲೆ Janashakthi Media

Donate Janashakthi Media

Leave a Reply

Your email address will not be published. Required fields are marked *