ಹಬ್ಬಗಳ ಸೀಸನ್ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ; ಖಾಸಗಿ ಟಿಕೆಟ್ ದರ ಏರಿಕೆ ಶಾಕ್!

ಬೆಂಗಳೂರು: ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್​​ಗಳಿಗೆ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ವಸೂಲಿ ಶುರುವಾಗುತ್ತದೆ. ಈಗ ಮತ್ತದೇ ಚಾಳಿ ಮುಂದುವರಿದಿದ್ದು, ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಡುವ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ.

ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ಸುಲಿಗೆಗೆ ಇಳಿಯುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಕನ್ನ ಹಾಕುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಖಾಸಗಿ ಬಸ್ ಮಾಲೀಕರು ವಿಘ್ನ ವಿನಾಯಕ ಗಣೇಶ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಎಂದು ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಟಿಕೆಟ್ ದರ ಏರಿಕೆ ಶಾಕ್ ನೀಡಿದ್ದಾರೆ.

ಸೆಪ್ಟೆಂಬರ್ 6 ಶುಕ್ರವಾರ ಗೌರಿ ಹಬ್ಬ. 7 ರಂದು ಗಣೇಶನ ಹಬ್ಬ. ಭಾನುವಾರ ಹೇಗೂ ರಜೆ. ಹೀಗಾಗಿ ಐದರಂದು ಊರಿಗೆ ತೆರಳಲು ಜನರು ಪ್ಲಾನ್ ಮಾಡಿದ್ದಾರೆ. ಆದರೆ ಖಾಸಗಿ ಬಸ್​​​ಗಳಲ್ಲಿ ದುಪ್ಪಟ್ಟು ದರ ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

ಸೆಪ್ಟೆಂಬರ್ 3ರಂದು ಖಾಸಗಿ ಬಸ್​ಗಳ ಟಿಕೆಟ್ ದರ ವಿವರ

  • ಬೆಂಗಳೂರು – ಹಾವೇರಿ: 600 – 1200 ರೂ.
  • ಬೆಂಗಳೂರು-ಗುಲ್ಬರ್ಗ : 600-1200 ರೂ.
  • ಬೆಂಗಳೂರು-ಯಾದಗಿರಿ: 600-1400 ರೂ.
  • ಬೆಂಗಳೂರು-ದಾವಣಗೆರೆ: 550-900 ರೂ.
  • ಬೆಂಗಳೂರು-ಹಾಸನ: 475-600 ರೂ.
  • ಬೆಂಗಳೂರು-ಧಾರವಾಡ: 500-1100 ರೂ.
  • ಬೆಂಗಳೂರು-ಚಿಕ್ಕಮಗಳೂರು: 500-900 ರೂ.

ಸೆಪ್ಟೆಂಬರ್ 5ರಂದು ಖಾಸಗಿ ಬಸ್ ಟಿಕೆಟ್ ದರ

  • ಬೆಂಗಳೂರು-ಹಾವೇರಿ: 1550-1600 ರೂ.
  • ಬೆಂಗಳೂರು-ಗುಲ್ಬರ್ಗ: 1200-1800 ರೂ.
  • ಬೆಂಗಳೂರು-ಯಾದಗಿರಿ: 1100-1750 ರೂ.
  • ಬೆಂಗಳೂರು-ದಾವಣಗೆರೆ: 900-2000 ರೂ.
  • ಬೆಂಗಳೂರು-ಹಾಸನ: 899-1800 ರೂ.
  • ಬೆಂಗಳೂರು-ಧಾರವಾಡ: 1200-3000 ರೂ.
  • ಬೆಂಗಳೂರು-ಚಿಕ್ಕಮಗಳೂರು: 900-1500 ರೂ.

ಗೌರಿ- ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್‌ಆರ್​​ಟಿಸಿ ಗುಡ್ ನ್ಯೂಸ್ ನೀಡಿದೆ. ಊರಿಗೆ ಹೋಗುವ ಪ್ರಯಾಣಿಕರಿಗಾಗಿ 1500 ಹೆಚ್ಚುವರಿ ಬಸ್​​ಗಳನ್ನು ನಿಯೋಜನೆ ಮಾಡಲಾಗಿದೆ. ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಈ ಹೆಚ್ಚುವರಿ ಬಸ್​​ಗಳು ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್​ಗೆ ವಿಶೇಷ ಕಾರ್ಯಚರಣೆ ಮಾಡಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿಗೆ ವಿಶೇಷ ಬಸ್ ಕಾರ್ಯಚರಣೆ ಮಾಡಲಿದ್ದು, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದೆ. ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್​ಗಳು ವಾಪಸ್ಸಾಗಲಿವೆ. ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್​ಗೆ ಅವಕಾಶ ನೀಡಲಾಗಿದೆ.

ಈ ಮಧ್ಯೆ, ಸಾರಿಗೆ ಇಲಾಖೆ ಪ್ರತಿ ಮೂರು ತಿಂಗಳಿಗೆ ಖಾಸಗಿ ಬಸ್​​ಗಳಿಂದ ಒಂದು ಸೀಟ್​​ಗೆ 4400 ರುಪಾಯಿ ಟ್ಯಾಕ್ಸ್ ತೆಗೆದುಕೊಳ್ಳುತ್ತಿದೆ. ಕೆಎಸ್‌ಆರ್ಟಿಸಿ ಬಸ್​​​ಗಳಲ್ಲೂ ಗೌರಿ- ಗಣೇಶ ಹಬ್ಬದ ಸಂದರ್ಭ ಟಿಕೆಟ್ ದರ ಏರಿಕೆ ಮಾಡಲಾಗಿದೆ. ನಾವು 300 ರಿಂದ 400 ರೂಪಾಯಿಯಷ್ಟು ದರ ಏರಿಕೆ ಮಾಡಿದ್ದೇವೆ ಅಷ್ಟೇ ಎಂದು ಖಾಸಗಿ ಬಸ್ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.

ಇದನ್ನೂ ನೋಡಿ: ಭವ್ಯಾ ನರಸಿಂಹ ಮೂರ್ತಿ – ಕಾಂಗ್ರೆಸ್ ಯುವ ನಾಯಕರುJanashakthi Media

Donate Janashakthi Media

Leave a Reply

Your email address will not be published. Required fields are marked *