ಕೆಎಸ್‌ಆರ್‌ಟಿಸಿಗೆ ರಾಷ್ಟ್ರ ಮಟ್ಟ ವೀಡಿಯಾ, ಎಮ್ಕ್ಯೂಬ್

ಬೆಂಗಳೂರು: ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ವು ಸಾಧನೆಯ ಮೂಲಕ  ರಾಷ್ಟ್ರ ಮಟ್ಟದ 8 ವೀಡಿಯಾ (ViDEA), 5 ಎಮ್ಕ್ಯೂಬ್(mCUBE) ಮತ್ತು 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಹಾಗೂ 1 ಸ್ಕೋಚ್ ಪ್ರಶಸ್ತಿಗಳು ಲಭಿಸಿದೆ.

ಈ ಕೆಳಗಿನ ವಿಭಾಗಗಳಲ್ಲಿ ವೀಡಿಯಾ ಪ್ರಶಸ್ತಿ ಪಡೆದುಕೊಂಡ ನಿಗಮ

  1. ಈ ಕೆಳಗಿನ ವಿಭಾಗಗಳಲ್ಲಿ ವೀಡಿಯಾ ಪ್ರಶಸ್ತಿ ಪಡೆದುಕೊಂಡ ನಿಗಮ
  2. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  3. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  4. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  5. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  6. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  7. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.
  8. ಅಶ್ವಮೇಧ ಬ್ರಾಂಡಿಂಗ್ ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ – ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.
  9. ಶ್ರೇಷ್ಠ ವೀಡಿಯೊ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ – ಕೆ ಎಸ್ ಆರ್ ಟಿ ಸಿ.

ಇದನ್ನು ಓದಿ : ನಕಲಿ ದಾಖಲೆ ಸಲ್ಲಿಸಿ ಜಲಸಂಪನ್ಮೂಲ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನ ; 48 ಆರೋಪಿಗಳ ಬಂಧನ

ಎಮ್ಕ್ಯೂಬ್ ಪ್ರಶಸ್ತಿ ಗಳು ಈ ಕೆಳಕಂಡ ವಿಭಾಗಗಳಲ್ಲಿ

  1. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.
  2. ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್).
  3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.
  4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್ ಕಂಟೆಂಟ್.
  5. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಆನ್ಲೈನ್ ಪಿಆರ್ ಕ್ಯಾಂಪೇನ್.

ಇನ್ನು ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮ ಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿದೆ. ViDEA ಪ್ರಶಸ್ತಿ ಮತ್ತು mCUBE ಪ್ರಶಸ್ತಿಗಳನ್ನು ಗುರುಗಾಂವ್​ನಲ್ಲಿ ಪ್ರಧಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್ ಲೈನ್ ನಲ್ಲಿ ನೀಡಲಾಯಿತು. ಇನ್ನು ಸ್ಕೋಚ್ ಪ್ರಶಸ್ತಿ ಸಮಾರಂಭವು 2024 ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ.

ಇದನ್ನು ನೋಡಿ : ನನ್ನ ಬಳಿ ಮಾಜಿ ಸಿಎಂ ಅಶ್ಲೀಲ ಸಿಡಿ ಇದೆ ಎಂದ ವಕೀಲ!ಸುದ್ದಿ ಪ್ರಸಾರ ಮಾಡದಂತೆ ಬೊಮ್ಮಾಯಿ‌ ಕೋರ್ಟ್ ಮೊರೆ!!

Donate Janashakthi Media

Leave a Reply

Your email address will not be published. Required fields are marked *