ಪುಣೆ| ಹೆಲಿಕಾಪ್ಟರ್ ಪತನ; ಪೈಲಟ್ ಜೊತೆಗೆ ನಾಲ್ವರಿಗೆ ಗಾಯ

ಪುಣೆ: ಶನಿವಾರ ಬೀಸಿದ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯ ನಡುವೆ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಕ್ಯಾಪ್ಟನ್ ಸೇರಿದಂತೆ ಒಟ್ಟು ನಾಲ್ವರು ಇದ್ದರು ಎನ್ನಲಾಗಿದೆ. ಪತನ

AW 139 ಎಂಬ ಹೆಲಿಕಾಪ್ಟರ್ ಮುಂಬೈನ ಜುಹುದಿಂದ ಹೈದರಾಬಾದ್‌ಗೆ ಹೋಗುತ್ತಿದ್ದಾಗ ಪೌಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಪೈಲಟ್ ಆನಂದ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಲಿಕಾಪ್ಟರನ್ನು ಗ್ಲೋಬಲ್ ವೆಕ್ಟ್ರಾ ಹೆಲಿಕಾರ್ಪ್ ನಿರ್ವಹಿಸುತ್ತಿತ್ತು.

ಇದನ್ನೂ ಓದಿ: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿಲ್ಲಿಸಲು ಕೆಪಿಆರ್‌ಎಸ್ ಆಗ್ರಹ

ಪ್ರಾಥಮಿಕ ವರದಿಗಳ ಪ್ರಕಾರ, ಎಲ್ಲಾ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಪುಣೆ ಜಿಲ್ಲೆಯ ಪೌಡ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದ್ದು ಹೆಲಿಕಾಪ್ಟರ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.

ಪುಣೆ ಗ್ರಾಮಾಂತರ ಪೊಲೀಸ್ ಎಸ್ಸಿ ಪಂಕಜ್ ದೇಶಮುಖ್‌ ಮಾತನಾಡಿ, ಪೈಲಟ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದರು.

ಇದನ್ನೂ ನೋಡಿ: ತಲ್ಲೂರು : ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Donate Janashakthi Media

Leave a Reply

Your email address will not be published. Required fields are marked *